
ಶಿವಮೊಗ್ಗ ಲೈವ್.ಕಾಂ | SHIMOGA | 23 ಫೆಬ್ರವರಿ 2020
ಸಹ್ಯಾದ್ರಿ ಉತ್ಸವ ಮಾದರಿಯಲ್ಲೇ ಶಿವಮೊಗ್ಗದ ಕೋಟೆ ಮಾರಿಕಾಂಬ ಜಾತ್ರೆಯಲ್ಲೂ ಹೆಲಿ ಟೂರಿಸಿಂ ಇರಲಿದೆ. ಜಾತ್ರೆ ನಡೆಯುವ ಐದು ದಿನವು ಶಿವಮೊಗ್ಗದ ನಗರದ ಮೇಲೆ ಹೆಲಿಕಾಪ್ಟರ್ ಹಾರಾಟ ನಡೆಸಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಜಾತ್ರೆ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಹೆಲಿಕಾಪ್ಟರ್ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಮತ್ತು ವಿಜಯೇಂದ್ರ ಅವರ ಸಹಕಾರದಿಂದ ಹೆಲಿ ಟೂರಿಸಂಗೆ ಅವಕಾಶ ಲಭ್ಯವಾಗಿದೆ. ನಾಗರಹಳ್ಳಿ ಹೋಂಡ ಸಂಸ್ಥೆಯ ನಟರಾಜ್ ಅವರು ಹೆಲಿ ಟೂರಿಸಂನ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದರು.
ನಾಳೆ ಶಿವಮೊಗ್ಗಕ್ಕೆ ಹೆಲಿಕಾಪ್ಟರ್
ಫೆಬ್ರವರಿ 24ರಂದು ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ಆಗಮಿಸಲಿದೆ. ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ‘ಹೆಲಿಕಾಪ್ಟರ್ ಹಾರಾಟಕ್ಕೆ ಎಷ್ಟು ಮೊತ್ತ ನಿಗದಿ ಮಾಡಬೇಕು ಅನ್ನುವುದನ್ನು ಪರಿಶೀಲನೆ ಬಳಿಕ ಹೆಲಿಕಾಪ್ಟರ್ ಸಂಸ್ಥೆಯ ಅಧಿಕಾರಿಗಳು ನಿರ್ಧರಿಸಲಿದ್ದಾರೆ’ ಎಂದು ಮಾರಿಕಾಂಬ ದೇವಸ್ಥಾನದ ಸಮಿತಿ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.

ಸಹ್ಯಾದ್ರಿ ಉತ್ಸವದಲ್ಲಿ ಹೆಲಿ ಟೂರಿಸಂಗೆ ಭರ್ಜರಿ ರೆಸ್ಪಾನ್ಸ್
ಕೆ.ಎ.ದಯಾನಂದ್ ಅವರು ಜಿಲ್ಲಾಧಿಕಾರಿ ಆಗಿದ್ದ ವೇಳೆ, ಶಿವಮೊಗ್ಗದಲ್ಲಿ ಸಹ್ಯಾದ್ರಿ ಉತ್ಸವ ಆಯೋಜಿಸಲಾಗಿತ್ತು. ಈ ವೇಳೆ ಹೆಲಿ ಟೂರಿಸಂ ಕೂಡ ಇತ್ತು. ಹೆಲಿಪ್ಯಾಡ್’ನಿಂದ ಟೇಕಾಫ್ ಆಗುತ್ತಿದ್ದ ಹೆಲಿಕಾಪ್ಟರ್ ಶಿವಮೊಗ್ಗ ನಗರದ ಪ್ರಮುಖ ಸ್ಥಳಗಳನ್ನು ಆಗಸದಿಂದ ವೀಕ್ಷಿಸಲು ಅನುವು ಮಾಡಿಕೊಟ್ಟಿತ್ತು. ಹೆಲಿ ಟೂರಿಸಂಗೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಈಗ ಪುನಃ ಹೆಲಿಕಾಪ್ಟರ್’ನಲ್ಲಿ ಹಾರುವ ಅವಕಾಶ ಲಭ್ಯವಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]