SHIVAMOGGA LIVE NEWS | 16 ಮಾರ್ಚ್ 2022
ಹೈಕೋರ್ಟ್ ತೀರ್ಪು ಹಿನ್ನೆಲೆ ಹಿಜಾಬ್ ಧರಿಸಿ ಬಂದವರಿಗೆ ಶಾಲೆ, ಕಾಲೇಜುಗಳ ತರಗತಿ ಪ್ರವೇಶವನ್ನು ನಿರಾಕರಿಸಲಾಯಿತು. ಬಹುತೇಕ ಕಡೆ ವಿದ್ಯಾರ್ಥಿನಿಯರು ತೀರ್ಪಿಗೆ ಮನ್ನಣೆ ನೀಡಿದರು.
ನಗರದ ಒಂದು ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಧರಿಸಲು ಅವಕಾಶ ಕೊಡಬೇಕು ಎಂದು ಹಠ ಹಿಡಿದರು. ಕಾಲೇಜು ಬಳಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ತರಗತಿಗೆ ತೆರಳಿದ ವಿದ್ಯಾರ್ಥಿನಿಯರು
ಹೈಕೋರ್ಟ್ ತೀರ್ಪು ಬಂದ ನಂತರ ಇವತ್ತು ಶಾಲೆ, ಕಾಲೇಜುಗಳ ತರಗತಿ ಪುನಾರಂಭವಾಗಿವೆ. ಬಹುತೇಕ ಕಡೆ ವಿದ್ಯಾರ್ಥಿನಿಯರಿಗೆ ರೆಸ್ಟ್ ರೂಂನಲ್ಲಿ ಹಿಜಾಬ್, ಬುರ್ಖಾ ತೆಗೆಯಲು ಅವಕಾಶ ಕಲ್ಪಿಸಲಾಗಿತ್ತು. ಎಲ್ಲಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಹೊರತು ತರಗತಿಗಳನ್ನು ಪ್ರವೇಶಿಸಿದರು.
ಹಿಜಾಬ್’ಗೆ ಹಠ ಹಿಡಿದ ವಿದ್ಯಾರ್ಥಿನಿಯರು
ಇನ್ನು, ನಗರದ ಪ್ರಮುಖ ಮಹಿಳಾ ಪದವಿ ಕಾಲೇಜು ಒಂದರಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್’ಗೆ ಹಠ ಹಿಡಿದರು. ಕಾಲೇಜು ಆಡಳಿತ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆ, ವಿದ್ಯಾರ್ಥಿನಿಯರು ಕಾಲೇಜು ಅವರಣದ ಹೊರಗೆ ನಿಂತರು. ತಮಗೆ ಹಿಜಾಬ್ ಧರಿಸಲು ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದರು. ಕಾಲೇಜು ಸಿಬ್ಬಂದಿ ಅವಕಾಶ ನೀಡದ ಹಿನ್ನೆಲೆ ಮನೆಗೆ ಮರಳಿದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200