ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 24 ಫೆಬ್ರವರಿ 2020
ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಮಂಜೂರಾಗಿವೆ. ಮುಖ್ಯವಾಗಿ ಈ ಭಾಗದಲ್ಲಿ ಕೈಗಾರಿಕೆಗಳು ಬರಲು ವಿಮಾನ ನಿಲ್ದಾಣ ಅವಶ್ಯಕತೆ ಇದೆ. ಅದಕ್ಕೆ ಮಂಜೂರಾತಿ ಸಿಕ್ಕಿದ್ದು, ಸಿಂಗದೂರು ಸೇತುವೆ ನಿರ್ಮಾಣ ಕಾಮಗಾರಿ ಕೂಡ ಆರಂಭವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಜಿಲ್ಲೆಗೆ ಮಂಜೂರಾದ ಕಾಮಗಾರಿ ಮುಂದಿನ ಮೂರು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದ್ದೇವೆ. ಅದಕ್ಕೆ ಎಲ್ಲ ಶಾಸಕರ ಸಹಕಾರ ಸಿಕ್ಕಿದೆ.
ಟೌನ್ಶಿಪ್ ನಿರ್ಮಾಣಕ್ಕೆ ಮನವಿ
ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು ಆರಂಭಗೊಳ್ಳುತ್ತಿವೆ. ಆ ದೃಷ್ಟಿಯಿಂದ ಕೈಗಾರಿಕಾ ವಲಯದಲ್ಲಿ ಸಣ್ಣ ಸಣ್ಣ ಟೌನ್ಶಿಪ್ ನಿರ್ಮಾಣ ಮಾಡುವಂತೆ ಸಿಎಂಗೆ ಎಂಎಲ್ಸಿ ಎಸ್.ರುದೇಗೌಡ ಮನವಿ ಮಾಡಿದರು.
ಕೈಗಾರಿಕೆಗಳು ಬೆಳೆಬೇಕಾದರೆ ಮೂಲಸೌಕರ್ಯ ಕಲ್ಪಿಸಬೇಕಾಗುತ್ತದೆ. ರಸ್ತೆ, ವಿದ್ಯುತ್, ನೀರಿನ ಸಂಪರ್ಕ ಅತ್ಯಗತ್ಯವಾಗಿದೆ. ಆದ್ದರಿಂದ ಸಣ್ಣ ಟೌನ್ಶಿಪ್ಗಳನ್ನು ಮಾಡಿದರೆ ಸಂಚಾರಕ್ಕೂ ತೊಂದರೆ ಆಗುವುದಿಲ್ಲ ಎಂದರು. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧರಿಸುವುದಾಗಿ ಸಿಎಂ ಭರವಸೆ ನೀಡಿದರು.
ರಿಲ್ಯಾಕ್ಸ್ ಮೂಡ್’ಗೆ ಸಿಎಂ
ಶಿವಮೊಗ್ಗಕ್ಕೆ ಅಗಮಿಸುತ್ತಿದ್ದಂತೆ ರಿಲ್ಯಾಕ್ಸ್ ಮೂಡ್’ಗೆ ಜಾರಿ ಮುಖ್ಯಮಂತ್ರಿ ಯಡಿಯೂರಪ್ಪ, ಪುತ್ರ ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿಯ ಪ್ರಮುಖರ ಜೊತೆಗೆ ಹೊಟೇಲ್’ಗೆ ತೆರಳಿ ದೋಸೆ ಸವಿದರು. ಶಿವಮೊಗ್ಗದ ಮೀನಾಕ್ಷಿ ಭವನ ಹೊಟೇಲ್’ನಲ್ಲಿ ಸಿಎಂ ಭೇಟಿ ನೀಡಿದ್ದರು. ಬಳಿಕ ಶಿವಮೊಗ್ಗದ ನಂಜಪ್ಪ ಲೇಔಟ್’ನ ಮನೆಗೆ ತೆರಳಿದ ಅವರು, ಸಂಜೆ ನಂಜಪ್ಪ ಬಡಾವಣೆಯಲ್ಲಿ ವಾಕಿಂಗ್ ಮಾಡಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422