ಶಿವಮೊಗ್ಗ ಲೈವ್.ಕಾಂ | 24 ಡಿಸೆಂಬರ್ 2018
ಮರಳು ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಕೂಲಿ ಕಾರ್ಮಿಕರು, ಡ್ರೈವರ್’ಗಳನ್ನು ಬಂಧಿಸಿ ಸರ್ಕಾರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಸಚಿವರು, ಆಡಳಿತ ಪಕ್ಷದ ಶಾಸಕರು ಈ ದಂಧೆಯಲ್ಲಿ ತೊಡಗಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಪ್ರಮಾಣಿಕವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಬೆಂಬಲ ನೀಡುವ ಬದಲು, ದಂಧೆಕೋರರಿಗೆ ಸರ್ಕಾರ ಬೆನ್ನೆಲುಬಾಗಿದೆ. ರಾಜ್ಯದಲ್ಲಿ ಎಷ್ಟಾದರೂ ಮರಳು ಲೂಟಿ ಹೊಡೆಯಬಹುದಾಗಿದೆ. ಇದಕ್ಕೆ ಅಡ್ಡ ಬಂದವರಿಗೆ ಸಾಯಿಸುತ್ತೇವೆ ಅನ್ನುವಂತಹ ಸ್ಥಿತಿಯಾಗಿದೆ. ಜನರಿಗೆ ಸುಲಭವಾಗಿ ಮರಳು ಲಭ್ಯವಾಗುವಂತಾದರೆ ಇಂತಹ ಸಮಸ್ಯೆ ಉದ್ಭವಿಸುವುದಿಲ್ಲ ಅಂತಾ ಸಲಹೆ ನೀಡಿದರು.
![ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ ಈಶ್ವರಪ್ಪ 1 48412867 760567787637977 4961049253968347136 n.jpg? nc cat=102& nc ht=scontent.fblr1 3](https://scontent.fblr1-3.fna.fbcdn.net/v/t1.0-9/48412867_760567787637977_4961049253968347136_n.jpg?_nc_cat=102&_nc_ht=scontent.fblr1-3.fna&oh=38539c1f134a50ddce81c00dd94cb98f&oe=5C9809AE)
PHOTO |ಬೊಮ್ಮನಕಟ್ಟೆ ಸೇತುವೆ ಮತ್ತು ಗೋಪಾಳದ ಇನ್’ಕಮ್ ಟ್ಯಾಕ್ಸ್ ಕಚೇರಿಯ ಪಕ್ಕದ ರಸ್ತೆಯ ಕಾಮಗಾರಿಗೆ ಇವತ್ತು ಶಾಸಕ ಕೆ.ಎಸ್.ಈಶ್ವರಪ್ಪ ಗುದ್ದಲಿ ಪೂಜೆ ನೆರವೇರಿಸಿದರು.
ಭಿನ್ನಮತಕ್ಕೂ ನಮಗೂ ಸಂಬಂಧವಿಲ್ಲ
ಇನ್ನು, ಸಂಪುಟ ವಿಸ್ತರಣೆ ಬಳಿಕ, ಕಾಂಗ್ರೆಸ್ ಶಾಸಕರ ಮುನಿಸು ಮತ್ತು ಭಿನ್ನಮತ ಚಟುವಟಿಕೆ ಕುರಿತು ಕೇಳಿದೆ ಪ್ರಶ್ನೆಗೆ, ಸಂಪುಟ ವಿಸ್ತರಣೆಗೂ, ಭಿನ್ನಮತಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
![ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ ಈಶ್ವರಪ್ಪ 2 MISS AGALLA BREAKING NEWS copy](https://shivamoggalive.com/wp-content/uploads/2018/11/MISS-AGALLA-BREAKING-NEWS-copy.jpg)
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | [email protected]