ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 14 NOVEMBER 2020
ದೀಪಾವಳಿ ಆರಂಭವಾದರೂ ಹಸಿರು ಪಟಾಕಿ ಗೊಂದಲ ಮುಂದುವರೆದಿದೆ. ಶಿವಮೊಗ್ಗದಲ್ಲಿ ಹಸಿರು ಪಟಾಕಿಯನ್ನಷ್ಟೇ ಮಾರಾಟ ಮಾಡಬೇಕು ಅಂತಾ ಮಹಾನಗರ ಪಾಲಿಕೆ ತಾಕೀತು ಮಾಡುತ್ತಿದೆ. ಆದರೆ ಮಾರಾಟಗಾರರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿಬಿದ್ದಂತೆ ಆಗಿದೆ. ಈ ನಡುವೆ ಗ್ರಾಹಕರು ಕೂಡ ಹಸಿರು ಪಟಾಕಿಯನ್ನು ಗಂಭೀರವಾಗಿ ಸ್ವೀಕರಿಸಿದಂತೆ ತೋರುತ್ತಿಲ್ಲ.
ಎರಡು ಕಡೆ ಪಟಾಕಿ ಮಾರಾಟ
ಶಿವಮೊಗ್ಗ ನಗರದ ಎರಡು ಕಡೆ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷದಂತೆ ನೆಹರೂ ಕ್ರೀಡಾಂಗಣದ ಆವರಣ ಮತ್ತು ಸೈನ್ಸ್ ಮೈದಾದನಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಗ್ರಾಹಕರಿಂದ ತುಂಬಾ ದೊಡ್ಡ ರೆಸ್ಪಾನ್ಸ್ ಸಿಗದಿದ್ದರೂ, ತಕ್ಕಮಟ್ಟಿಗೆ ವ್ಯಾಪಾರ ನಡೆಯುತ್ತಿದೆ.
VIDEO REPORT
ಗ್ರೀನ್ ಪಟಾಕಿ ಕೇಳೋರೆ ಇಲ್ಲ..!
ಕೋವಿಡ್ ಕಾರಣ ಮತ್ತು ಪರಿಸರ ಮಾಲಿನ್ಯ ತಗ್ಗಿಸುವ ಸಲುವಾಗಿ ರಾಜ್ಯ ಸರ್ಕಾರ ಗ್ರೀನ್ ಪಟಾಕಿಯನ್ನಷ್ಟೇ ಮಾರಬೇಕು ಮತ್ತು ಜನರು ಗ್ರೀನ್ ಪಟಾಕಿಯನ್ನಷ್ಟೇ ಬಳಸಬೇಕು ಎಂದು ಸೂಚಿಸಿದೆ. ಆದರೆ ಶಿವಮೊಗ್ಗದಲ್ಲಿ ಗ್ರೀನ್ ಪಟಾಕಿಯನ್ನು ಕೇಳಿ ಪಡೆಯುವ ಗ್ರಾಹಕರ ಸಂಖ್ಯೆ ತುಂಬಾ ಕಡಿಮೆ ಅನ್ನುತ್ತಾರೆ ವ್ಯಾಪಾರಿಗಳು. ಗ್ರೀನ್ ಪಟಾಕಿ ಅಂದರೆ ಏನೆಂದು ಜನರಲ್ಲಿ ಜಾಗೃತಿ ಇಲ್ಲದಿರುವುದು ಇದಕ್ಕೆ ಕಾರಣ.
ಪಾಲಿಕೆ ವರ್ಸರ್ಸ್ ವ್ಯಾಪಾರಿಗಳು..!
ಗ್ರೀನ್ ಪಟಾಕಿ ವಿಚಾರವಾಗಿ ಮಹಾನಗರ ಪಾಲಿಕೆ ಮತ್ತು ಪಟಾಕಿ ವ್ಯಾಪಾರಿಗಳ ನಡುವೆ ತಿಕ್ಕಾಟ ಶುರುವಾಗಿದೆ. ಜಾಗೃತಿ ಮೂಡಿಸಿ, ಎಚ್ಚರಿಕೆ ನೀಡಲು ಪಾಲಿಕೆ ಅಧಿಕಾರಿಗಳು ಪಟಾಕಿ ಮಳಿಗೆಗಳ ಬಳಿ ಬಂದಾಗ ಆಕ್ರೋಶದ ದರ್ಶನವಾಯ್ತು.
ಪಾಲಿಕೆ ಅಧಿಕಾರಿಗಳು ಹೇಳೋದೇನು?
- ಸರ್ಕಾರದ ಸೂಚನೆ ಅಂತೆ ಗ್ರೀನ್ ಪಟಾಕಿಯನ್ನು ಬಳಸಬೇಕು. ಹಾಗಾಗಿ ಎಲ್ಲಾ ಮಾರಾಟಗಾರರು ಗ್ರೀನ್ ಪಟಾಕಿಯನ್ನಷ್ಟೇ ಮಾರಬೇಕು.
- ಗ್ರೀನ್ ಪಟಾಕಿ ಅಂತಾ ಲೇಬಲ್ ಇರುವ ಪಟಾಕಿಯನ್ನಷ್ಟೇ ಗ್ರಾಹಕರು ಕೊಳ್ಳಬೇಕು.
- ಹಸಿರು ಪಟಾಕಿ ಹೊರತು ಉಳಿದ್ಯಾವುದೆ ಮಾದರಿಯ ಪಟಾಕಿ ಮಾರಾಟ, ಪ್ರದರ್ಶನ ಮಾಡುವುದು ನಿಯಮ ಬಾಹಿರ. ಆದ್ದರಿಂದ ಅವುಗಳನ್ನು ವಶಕ್ಕೆ ಪಡೆಯಲಾಗುತ್ತದೆ.
ವ್ಯಾಪಾರಿಗಳ ವಾದ ಏನು?
- ಗ್ರೀನ್ ಪಟಾಕಿ ವಿಚಾರವಾಗಿ ಸರ್ಕಾರ ತಡವಾಗಿ ಸೂಚನೆ ಪ್ರಕಟಿಸಿದೆ. ಹಾಗಾಗಿ ಈವರೆಗೂ ಇದ್ದ ಮಾದರಿಯ ಪಟಾಕಿಗಳನ್ನೇ ತರಿಸಿ, ಮಾರಲಾಗುತ್ತಿದೆ.
- ಹಸಿರು ಪಟಾಕಿ ಕುರಿತು ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ, ವ್ಯಾಪಾರಿಗಳಿಗೂ ಆ ಕುರಿತು ಜಾಗೃತಿ ಮತ್ತು ಸ್ಪಷ್ಟತೆ ಮೂಡಿಸಿಲ್ಲ.
- ಹಳೆಯ ಪಟಾಕಿಗಳಿಗೆ ಗ್ರೀನ್ ಪಟಾಕಿ ಎಂದು ಸ್ಟಿಕರ್ ಅಂಟಿಸಿ ಕಳುಹಿಸುತ್ತಿದ್ದಾರೆ. ಇದನ್ನೆ ಮಾರಾಟ ಮಾಡುವಂತಾಗಿದೆ.
- ಶಿವಮೊಗ್ಗದಲ್ಲಿ ಗ್ರೀನ್ ಪಟಾಕಿ ಲಭ್ಯತೆ ಬಹಳ ಕಡಿಮೆ ಇದೆ. ಹಾಗಾಗಿ ಗ್ರೀನ್ ಪಟಾಕಿ ಮಾರಾಟ ಕಷ್ಟವಾಗಿದೆ.
- ಗ್ರೀನ್ ಪಟಾಕಿ ಬೇಕು ಅನ್ನುವ ಗ್ರಾಹಕರು ತುಂಬಾನೇ ಕಡಿಮೆ. ಹಾಗಾಗಿ ಗ್ರಾಹಕರು ಕೇಳಿದ್ದನ್ನು ಕೊಡಬೇಕಾಗಿದೆ.
ಹಬ್ಬದ ಹೊತ್ತಿಗೆ ಸರ್ಕಾರ ನೀಡಿದ ಸೂಚನೆಯಿಂದ ವ್ಯಾಪಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಆದರೆ ಗ್ರಾಹಕರು ಈ ಕುರಿತು ಹೆಚ್ಚು ತಲೆ ಕೆಡಿಸಿಕೊಂಡತೆ ತೋರುತ್ತಿಲ್ಲ. ಪಟಾಕಿ ಮಾರಾಟ ಪ್ರಮಾಣ ಕುಸಿತವಾಗಿದೆ. ಕಳೆದ ವರ್ಷಕ್ಕಿಂತಲೂ ವ್ಯಾಪಾರ ಸ್ವಲ್ಪ ಕುಸಿತ ಕಂಡಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422