ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಆಗಸ್ಟ್ 2020
ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಮತ್ತು ಸಾಹಸಿಗಳ ತಂಡದಿಂದ ಕಯಾಕಿಂಗ್ ಮಾಡಲಾಗುತ್ತಿದೆ. ಇವತ್ತು ಬೆಳಗ್ಗೆ ಕಯಾಕಿಂಗ್ ಆರಂಭಿಸಲಾಯಿತು.
ಐವರು ಸಾಹಸಿಗಳಿಂದ ಕಯಾಕಿಂಗ್
ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪದ ಬಳಿಯಿಂದ ಕಯಾಕಿಂಗ್ ಆರಂಭಿಸಲಾಗಿದೆ. ಐವರು ಸಹಾಸಿಗಳು ಕಯಾಂಕಿಂಗ್‍ನಲ್ಲಿ ಭಾಗವಹಿಸಿದ್ದಾರೆ. ಇಬ್ಬರು ಕೂರುವ ಎರಡು ಬೋಟ್‍ಗಳು ಮತ್ತು ಒಬ್ಬರು ಕೂರುವ ಒಂದು ಬೋಟ್‍ನಲ್ಲಿ ಐವರು ಸಹಾಸಿಗರು ಕಯಾಂಕಿಂಗ್ ಆರಂಭಿಸಿದ್ದಾರೆ. ಅ.ನಾ.ವಿಜಯೇಂದ್ರ ರಾವ್, ಶ್ರೀನಾಥ ನಗರಗದ್ದೆ, ಸಾಸ್ವೇಹಳ್ಳಿ ಸತೀಶ್, ಹರೀಶ್ ಪಟೇಲ್, ಅ.ನಾ.ಶ್ರೀಧರ್ ಭಾಗವಹಿಸಿದ್ದಾರೆ.
50 ಕಿ.ಮೀ ಕಯಾಂಕಿಂಗ್
ಈ ಬಾರಿ ಕಯಾಂಕಿಂಗ್‍ನಲ್ಲಿ ಸಾಹಸಿಗಳು 50 ಕಿ.ಮೀ ಸಂಚಾರ ಮಾಡಲಿದ್ದಾರೆ. ಶಿವಮೊಗ್ಗದ ತುಂಗಾ ನದಿ ಕೋರ್ಪಲಯ್ಯ ಛತ್ರ ಮಂಟಪದಿಂದ ಹೊನ್ನಾಳಿ ತಾಲೂಕು ರಾಂಪುರದಲ್ಲಿರುವ ಮಠದವರೆಗೆ ಕಯಾಕಿಂಗ್ ನಡೆಯಲಿದೆ.
ಎಲ್ಲ ಸುರಕ್ಷತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು. ಪ್ರತಿ ವರ್ಷದಂತೆ ಈ ಬಾರಿಯೂ ತುಂಬಿ ಹರಿಯುತ್ತಿರು ತುಂಗೆಯಲ್ಲಿ ಕಯಾಕಿಂಗ್ ಮಾಡಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422