SHIVAMOGGA LIVE NEWS | 30 OCTOBER 2023
BHADRAVATHI : ಶಾಸಕ ಸಂಗಮೇಶ್ವರ ಅವರ ಸಹೋದರ ಮೋಹನ್ ಅವರ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿದೆ (Mishap). ಘಟನೆಯಲ್ಲಿ ಮೋಹನ್ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಭದ್ರಾವತಿ ಹೊಸ ಸಿದ್ದಾಪುರ ಕೆರೆ ಸಮೀಪ ಚೌಡೇಶ್ವರಿ ದೇಗುಲ ಬಳಿ ಘಟನೆ ಸಂಭವಿಸಿದೆ. ಹಂಪ್ ಇದ್ದಿದ್ದರಿಂದ ಮೋಹನ್ ಅವರಿದ್ದ ಇನ್ನೋವಾ (Innova) ಕಾರು ನಿಧಾನವಾಗಿದೆ. ಈ ವೇಳೆ ಮತ್ತೊಂದು ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಘಟನೆ ಸಂಬಂಧ ಯಾವುದೆ ದೂರು ದಾಖಲಾಗಿಲ್ಲ.
ಇದನ್ನೂ ಓದಿ- ಶಿವಮೊಗ್ಗ ನಗರದಲ್ಲಿ ಒಂದೇ ದಿನ ಸಾವಿರ ಸಾವಿರ ಜನರಿಗೆ ಆರೋಗ್ಯ ತಪಾಸಣೆ