ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಿರುದ್ಯೋಗಿಗಳು ಹಾಗೂ ಆಟೋಮೊಬೈಲ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಶಿವಮೊಗ್ಗದ ಶಕ್ತಿ ಟೊಯೊಟಾ(Shakti Toyota) ಸುವರ್ಣಾವಕಾಶ ಒದಗಿಸಿದೆ. ಫೆಬ್ರವರಿ 18ರಂದು ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಶಕ್ತಿ ಟೊಯೊಟಾ ಶೋರೂಂನಲ್ಲಿ ಬೃಹತ್ ಜಾಬ್ ಎಕ್ಸ್‌ಪೋ (Job Expo) ಆಯೋಜಿಸಲಾಗಿದೆ. (Looking for jobs)
ಯಾವೆಲ್ಲ ಹುದ್ದೆಗಳಿವೆ?
ಶಿವಮೊಗ್ಗ ಮತ್ತು ಸಾಗರ ಶಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.
ಸೇಲ್ಸ್ ಮ್ಯಾನೇಜರ್, ಸೇಲ್ಸ್ ಆಫೀಸರ್, ವ್ಯಾಲ್ಯೂ ಚೈನ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಸರ್ವಿಸ್ ಫ್ರಂಟ್ ಆಫೀಸ್ ಮ್ಯಾನೇಜರ್, ಸರ್ವಿಸ್ ಅಡ್ವೈಸರ್ (ಜನರಲ್ ಮತ್ತು ಬಾಡಿ ಶಾಪ್), ಜನರಲ್ ಟೆಕ್ನಿಷಿಯನ್, ಬಾಡಿ ಮತ್ತು ಪೇಂಟ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆಗಳು?
- ವಿದ್ಯಾರ್ಹತೆ: ಯಾವುದೇ ಪದವಿ (Any Degree).
- ವಿಶೇಷ ಸೂಚನೆ: ಅಭ್ಯರ್ಥಿಗಳು ಕಡ್ಡಾಯವಾಗಿ ನಾಲ್ಕು ಚಕ್ರದ ವಾಹನ ಚಾಲನಾ ಪರವಾನಗಿ (4-Wheeler Driving License) ಹೊಂದಿರಬೇಕು.
- ಎಷ್ಟಿರುತ್ತೆ ಸಂಬಳ?: ಉದ್ಯಮದ ಅತ್ಯುತ್ತಮ ಸಂಬಳದ ಜೊತೆಗೆ ಆಕರ್ಷಕ ಪ್ರೋತ್ಸಾಹಧನ (Incentives) ನೀಡಲಾಗುವುದು. ಪ್ರತಿ ತಿಂಗಳ 1ನೇ ತಾರೀಖಿನಂದೇ ಸಂಬಳ ಪಾವತಿಸುವ ಭರವಸೆಯನ್ನು ಸಂಸ್ಥೆ ನೀಡಿದೆ.
ಸಂದರ್ಶನ ನಡೆಯುವ ಸ್ಥಳ
ಶಕ್ತಿ ಟೊಯೊಟಾ (Shakti Toyota), ಊರಗಡೂರು ಎಕ್ಸ್‌ಟೆನ್ಷನ್, 125/2, ಬೈಪಾಸ್ ರಸ್ತೆ, ಶಿವಮೊಗ್ಗ – 577203
ಆಸಕ್ತ ಅಭ್ಯರ್ಥಿಗಳು ತಮ್ಮ ಸಿ.ವಿ. (Resume) ಅನ್ನು saleshead-smg@shaktitoyota.com ಗೆ ಇಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 7022979402 / 9606037393 ಅನ್ನು ಸಂಪರ್ಕಿಸಬಹುದು.
ಇದನ್ನೂ ಓದಿ – ಶಿವಮೊಗ್ಗ ಲೈವ್ BIG IMPACT, ಡೇಂಜರಸ್ ಹಂಪ್‌ಗಳಿಂದ ಶೀಘ್ರ ಮುಕ್ತಿ, ಮಹತ್ವದ ಮೀಟಿಂಗ್
LATEST NEWS
- ಶಿವಮೊಗ್ಗದ ಡೇಂಜರ್ ಹಂಪ್ಗಳಿಗೆ 24 ಗಂಟೆಯ ಗಡುವು, ಬೈಕ್ನಲ್ಲಿ ಕಮಿಷನರ್ ಸಿಟಿ ರೌಂಡ್ಸ್

- ಶಿವಮೊಗ್ಗ, ಸಾಗರದಲ್ಲಿ ಕೆಲಸ ಹುಡುಕ್ತಿದ್ದೀರಾ? ಫೆಬ್ರವರಿ 18ರಂದು ನಡೆಯಲಿದೆ ಸಂದರ್ಶನ

- ಶಿವಮೊಗ್ಗ ಲೈವ್ BIG IMPACT, ಡೇಂಜರಸ್ ಹಂಪ್‌ಗಳಿಂದ ಶೀಘ್ರ ಮುಕ್ತಿ, ಮಹತ್ವದ ಮೀಟಿಂಗ್

- ಕೋಟೆ ಮಾರಿಕಾಂಬೆಗೆ 1 ಕೆಜಿ 600 ಗ್ರಾಂ ತೂಕದ ಚಿನ್ನದ ಮುಖವಾಡ

- ಫುಡ್ ಕೋರ್ಟ್ನಿಂದ ಹೊರ ಬಂದ ವ್ಯಕ್ತಿಯ ಕಾಲಿನ ಮೇಲೆ ಬೈಕ್ ಹತ್ತಿಸಿ, ಕಲ್ಲಿನಿಂದ ಹೊಡೆದು ಹಲ್ಲೆ

About The Editor
ನಿತಿನ್ ಆರ್.ಕೈದೊಟ್ಲು





