SHIVAMOGGA LIVE NEWS | 25 SEPTEMBER 2023
THIRTHAHALLI : ದ್ವಾರಕಾ ಮಹಾಸಂಸ್ಥಾನಂನ ಶ್ರೀ ಕೃಷ್ಣಾನಂದ ಮಠದ ಕೃಷ್ಣಾನಂದ ತೀರ್ಥ ಸ್ವಾಮೀಜಿ (61) ಶನಿವಾರ ರಾತ್ರಿ ದೇಹ ತ್ಯಾಗ ಮಾಡಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಮುಳುಬಾಗಿಲು ದ್ವಾರಕಾ ಮಹಾ ಸಂಸ್ಥಾನ ಮಠದ ಆವರಣದಲ್ಲಿ ಭಾನುವಾರ ಅಂತ್ಯ ಸಂಸ್ಕಾರ ನಡೆಯಿತು. ಕಳೆದ 41 ವರ್ಷದಿಂದ ಮಠಾಧೀಶರಾಗಿದ್ದರು (SWAMIJI).
ಸ್ವಾಮೀಜಿ ಪೂರ್ವಾಶ್ರಮದಲ್ಲಿ ಘಂಟಹಕ್ಕಲು ಸೀತಾರಾಮ ಭಟ್ಟ ಮತ್ತು ಲಲಿತಾ ದಂಪತಿಯ ಪುತ್ರರು. ದೊಡ್ಡಪ್ಪ ಹಾಗೂ ಮಠದ ಹಿಂದಿನ ಗುರು ಸಚ್ಚಿದಾನಂದ ಸರಸ್ವತಿ ಅವರ ನಂತರ ಮಠದ ಜವಾಬ್ದಾರಿ ನಿರ್ವಹಿಸಿಕೊಂಡು ಬಂದಿದ್ದರು.
ಇದನ್ನೂ ಓದಿ – ‘ಒಂದಲ್ಲ ಒಂದು ದಿನ ದೇವರು ಸರ್ಜಿಕಲ್ ಸ್ಟ್ರೈಕ್ ಮಾಡುತ್ತಾನೆʼ
ಶ್ರೀಗಳ ನಿಧನ ಹಿನ್ನೆಲೆ ಮಠದಲ್ಲಿ ಅ.2ರಂದು ನಾರಾಯಣ ಬಲಿ ಮತ್ತು ಅ.3ರಂದು ಪ್ರಥಮ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ಪ್ರೊ. ವಿದ್ಯಾನಾಥ ಶಾಸ್ತ್ರಿಗಳು ತಿಳಿಸಿದ್ದಾರೆ.