SHIVAMOGGA LIVE NEWS | 7 AUGUST 2023
SHIMOGA : ಬಸ್ ಚಾಲನೆ ವಿಚಾರವಾಗಿ ಚಾಲಕ (Driver) ಮತ್ತು ಕಂಡಕ್ಟರ್ ಮಧ್ಯೆ ಜಗಳವಾಗಿದೆ. ಈ ವೇಳೆ ಚಾಲಕನ ಮೇಲ್ಲೆ ಹಲ್ಲೆ ನಡೆದಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಶಿವಮೊಗ್ಗ – ಕೊಯಮತ್ತೂರು ಕೆಎಸ್ಆರ್ಟಿಸಿ ಬಸ್ ಚಾಲಕ (Driver) ಪೆದ್ದಣ್ಣ (58) ಹಲ್ಲೆಗೊಳಗಾದವರು. ನಿರ್ವಾಹಕ ಕಂ ಚಾಲಕ ನಾಗರಾಜ ನರೇಂದ್ರ ಎಂಬುವವರ ವಿರುದ್ಧ ಆರೋಪ ಕೇಳಿ ಬಂದಿದೆ.
ಏನಿದು ಪ್ರಕರಣ?
ಜು.25ರಂದು ಪೆದ್ದಣ್ಣ ಅವರು ಕರ್ತವ್ಯಕ್ಕೆ ಹಾಜರಾಗಿ ಚಾಲಕನ ಸೀಟಿನಲ್ಲಿ ಕುಳಿತಿದ್ದಾಗ ನಿರ್ವಾಹಕ ನಾಗರಾಜ ನರೇಂದ್ರ ಬಸ್ಸಿಗೆ ಬಂದಿದ್ದಾರೆ. ಈ ವೇಳೆ, ಇಲ್ಲಿಂದ ಚಾಮರಾಜನಗರದವರೆ ತಾನು ಚಾಲನೆ ಮಾಡುತ್ತೇನೆ. ಮುಂದೆ ನೀನು ಬಸ್ ಚಲಾಯಿಸು ಎಂದು ಪೆದ್ದಣ್ಣ ತಿಳಿಸಿದ್ದಾರೆ. ಆಗ ನಾಗರಾಜ ನರೇಂದ್ರ, ಪೆದ್ದಣ್ಣನ ವಿರುದ್ಧ ಸಿಟ್ಟಾಗಿ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಗಾಂಜಾ ಸೇವಿಸಿದ್ದ ಬ್ಯಾಂಕ್ ಉದ್ಯೋಗಿ ಭದ್ರಾವತಿಯಲ್ಲಿ ಅರೆಸ್ಟ್ – 3 ಫಟಾಫಟ್ ಕ್ರೈಮ್ ನ್ಯೂಸ್
ಪೆದ್ದಣ್ಣ ಬಸ್ಸಿನಿಂದ ಕೆಳಗಿಳಿದಿದ್ದು ನಾಗರಾಜ್ ಕೂಡ ಕೆಳಗಿಳಿದು ಬಂದು ಮುಷ್ಠಿ ಕಟ್ಟಿ ಪಕ್ಕೆಲುಬಿಗೆ ಜೋರಾಗಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಪೆದ್ದಣ್ಣ ಆರೋಪಿಸಿದ್ದಾರೆ. ಕೂಡಲೆ ಸ್ಥಳದಲ್ಲಿದ್ದ ಸಿಬ್ಬಂದಿ ಪೆದ್ದಣ್ಣನನ್ನು ಬಸ್ಸಿನಲ್ಲಿಯೇ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಪಡೆದು ಪೆದ್ದಣ್ಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ – ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಹಿಂತಿರುಗಿದ ಎರಡು ಮನೆಗಳ ಮಾಲೀಕರಿಗೆ ಕಾದಿತ್ತು ಶಾಕ್