ಶಿವಮೊಗ್ಗ ಲೈವ್.ಕಾಂ | SHIMOGA | 28 ಫೆಬ್ರವರಿ 2020
ರಾಜ್ಯ ರಸ್ತೆ ಸಾರಿಗೆ ನಿಗಮವು ಬಸ್ ಪ್ರಯಾಣ ದರವನ್ನು ಶೇ.12ರಷ್ಟು ಏರಿಕೆ ಮಾಡಿದ ಬಳಿಕ ಶಿವಮೊಗ್ಗದಿಂದ ರಾಜಧಾನಿ ಬೆಂಗಳೂರಿನ ಪ್ರಯಾಣದ ದರ ಏಕಾಏಕಿ 31 ರೂ. ಮತ್ತು ಮೈಸೂರಿಗೆ 35 ರೂ. ಹೆಚ್ಚಳವಾಗಿದೆ.

ಬೆಂಗಳೂರಿಗೆ ವೇಗದೂತ ಬಸ್ ಪ್ರಯಾಣ ದರ 257 ರೂ. ಇತ್ತು. ಮಂಗಳವಾರ ಮಧ್ಯರಾತ್ರಿಯಿಂದ ಪ್ರಯಾಣ ದರವು 288 ರೂ.ಗಳಿಗೆ ಏರಿಕೆಯಾಗಿದೆ. ಅಂದರೆ ಶಿವಮೊಗ್ಗ- ಬೆಂಗಳೂರು ನಡುವಿನ ಪ್ಯಾಸೆಂಜರ್ ರೈಲು ಪ್ರಯಾಣ ದರದ ಅರ್ಧದಷ್ಟು ದರ ಹೆಚ್ಚಳವಾಗಿದೆ. ಪ್ಯಾಸೆಂಜರ್ ರೈಲಿನಲ್ಲಿ ಈ ನಗರಗಳ ನಡುವಿನ ಪ್ರಯಾಣ ದರ ಕೇವಲ 60 ರೂ.
ಶಿವಮೊಗ್ಗದಿಂದ ಮೈಸೂರಿಗೆ 228 ರೂ.ಗಳಿಂದ 263 ರೂ.ಗಳಿಗೆ ಏರಿಕೆಯಾಗಿದೆ. ಭದ್ರಾವತಿಗೆ 3 ರೂ. ಹೊನ್ನಾಳಿಗೆ 6 ರೂ., ಸಾಗರಕ್ಕೆ 10 ರೂ. ಏರಿಕೆಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಸೀಮಿತ ದೂರದ ಪ್ರಯಾಣ ದರಕ್ಕೆ ಅಲ್ಪ ವಿನಾಯಿತಿ ನೀಡಲಾಗಿದೆ. ಅಂದರೆ ಮೊದಲ 3 ಕಿ.ಮೀ. ಪ್ರಯಾಣಕ್ಕೆ 7 ರೂ. ಇದ್ದ ದರವನ್ನು 5 ರೂ.ಗೆ ಇಳಿಕೆ ಮಾಡಲಾಗಿದ್ದು 2 ರೂ. ಕಡಿತ ಮಾಡಲಾಗಿದೆ.
ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಮೊದಲ 15 ಕಿ.ಮೀ. ಪ್ರಯಾಣ ದರವನ್ನು ಹೆಚ್ಚಿಸಿಲ್ಲ. ಆದರೆ, ಶಿವಮೊಗ್ಗದಂತಹ ನಗರದ ಪ್ರದೇಶದಲ್ಲಿ ಗ್ರಾಮೀಣ ಸಾರಿಗೆಯ ಬಸ್ಗಳಲ್ಲಿ ಮೊದಲ 3 ಕಿ.ಮೀ. ಪ್ರಯಾಣ ದರ ವಿನಾಯಿತಿ ಅನ್ವಯವಾಗುವುದು ಬಹಳ ಕಡಿಮೆ. ಯಾಕೆಂದರೆ ಶಿವಮೊಗ್ಗದಿಂದ ಗ್ರಾಮಾಂತರ ಆರಂಭವಾಗುವುದೇ 4 ಕಿ.ಮೀ. ಬಳಿಕ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]