SHIVAMOGGA LIVE NEWS | 3 NOVEMBER 2023
SHIMOGA : ಬಸ್ಸಿನಲ್ಲಿ ಸೀಟ್ (Bus Seat) ವಿಚಾರಕ್ಕೆ ತಂದೆ ಮತ್ತು ಮಗಳ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲಾಗಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ತರೀಕೆರೆಯ ಸತ್ಯರಾಜು ಅವರು ತಮ್ಮ 9 ವರ್ಷದ ಮಗಳ ಜೊತೆಗೆ ಶಿವಮೊಗ್ಗದ ಗುಡ್ಡೇಕಲ್ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಮದುವೆ ಕಾರ್ಯಕ್ರಮ ಮುಗಿದ ಮೇಲೆ ಮಗಳ ಜೊತೆಗೆ ಸ್ನೇಹಿತರು, ಕುಟುಂಬದವರು ಬಂದಿದ್ದ ಬಸ್ಸಿನಲ್ಲಿ ಹತ್ತಿ ಕುಳಿತಿದ್ದರು.
ಇದನ್ನೂ ಓದಿ – ಜೈಲ್ ರಸ್ತೆಯಲ್ಲಿ ಬೈಕ್ನಲ್ಲಿ ಬಂದು ಅಡ್ಡಗಟ್ಟಿ 54 ಸಾವಿರದ ಮೊಬೈಲ್ ಕಸಿದು ಪರಾರಿ
ಇದೆ ವೇಳೆ ಬಸ್ ಹತ್ತಿದ ತರೀಕೆರೆಯ ವಿಜಯ್ ಎಂಬಾತ ಸೀಟಿಗಾಗಿ ಬಾಲಕಿಗೆ ಹೊಡೆದಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಸತ್ಯರಾಜು ಅವರ ಮೇಲೆಯು ಹಲ್ಲೆ ನಡೆಸಿದ್ದಾನೆ. ಸತ್ಯರಾಜು ಅವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ಇದನ್ನೂ ಓದಿ – ವಿದೇಶದಲ್ಲಿ ಉನ್ನತ ಶಿಕ್ಷಣ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಯಾರು ಅರ್ಜಿ ಸಲ್ಲಿಸಬಹುದು?
