ಶಿವಮೊಗ್ಗ ಲೈವ್.ಕಾಂ | SHIMOGA | 3 ಫೆಬ್ರವರಿ 2020
ಪಾಲಿಕೆ ವಾರ್ಡ್ ನಂಬರ್ 27ರ ಮಿಳಘಟ್ಟ ಬುದ್ಧ ನಗರದಲ್ಲಿರುವ ಶೌಚಾಲಯ ನಿರ್ವಹಣೆಗೆ ಟೆಂಡರ್ ಕರೆಯುವುದನ್ನು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ಕಟ್ಟಡ ಕಾರ್ಮಿಕರ ಸೇವಾ ಸಂಘದ ವತಿಯಿಂದ ಇಂದು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಯಿತು.

KSRTC ಬಸ್ ಸ್ಟಾಂಡ್ ಹಿಂಭಾಗದ ರಸ್ತೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಶೌಚಾಲಯ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ 5 ಸಾವಿರ ಕೂಲಿಕಾರ್ಮಿಕರು ಇದ್ದಾರೆ. ಇದರಲ್ಲಿ ಸುಮಾರು 500 ಮನೆಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಹೀಗಾಗಿ ಇವರೆಲ್ಲರು ಸಾರ್ವಜನಿಕ ಶೌಚಾಲಯವನ್ನು ಅವಲಂಬಿಸಿದ್ದಾರೆ.
ಇದೀಗ ಈ ಶೌಚಾಲಯಕ್ಕೆ ಮಹಾನಗರ ಪಾಲಿಕೆ ವತಿಯಿಂದ ಟೆಂಡರ್ ಕರೆದು ಆ ಮೂಲಕ ನಿರ್ವಹಣೆ ಮಾಡುವುದಾಗಿ ತಿಳಿದುಬಂದಿದೆ. ಒಂದು ವೇಳೆ ಶೌಚಾಲಯ ಬಳಕೆಗೆ ಹಣ ನಿಗದಿಪಡಿಸಿದರೆ, ಇಲ್ಲಿನ ಕಡುಬಡವರಿಗೆ ಹಣ ನೀಡಿ ಶೌಚಾಲಯ ಬಳಕೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ವೇಲು, ರಂಗನಾಥ್, ರಾಮರಾಜ್, ಶಿವ, ಮಾರಪ್ಪ ಮತ್ತಿತರರು ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
