ಶಿವಮೊಗ್ಗ ಲೈವ್.ಕಾಂ | 2 ಮೇ 2019
ಕಾಗದನಗರದ ಎಂಪಿಎಂ ಕಾರ್ಮಿಕ ಭವನದಲ್ಲಿ ಮೈಸೂರು ಪೇಪರ್ ಮಿಲ್ಸ್ ಎಂಪ್ಲಾಯಿಸ್ ಅಸೋಸಿಯೇಶನ್ ವತಿಯಿಂದ ಕಾರ್ಮಿಕ ದಿನವನ್ನು ಆಚರಿಸಲಾಯಿತು.
ಅಸೋಸಿಯೇಶನ್ ಅಧ್ಯಕ್ಷ ಎಚ್.ಸಿ.ಧರ್ಮಲಿಂಗಸ್ವಾಮಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈಗಾಗಲೆ ಉತ್ಪಾದನಾ ಚಟುವಟಿಕೆ ಸ್ಥಗಿತಗೊಳಿಸುವಂತೆ ಕಾರ್ಖಾನೆ ಆಡಳಿತ ಮಂಡಳಿ ಸರ್ಕಾರಕ್ಕೆ ಅಪೀಲು ಮಾಡಿಕೊಂಡಿದೆ. ಇದನ್ನು ತಡೆಗಟ್ಟಲು ಕಾರ್ಮಿಕರೆಲ್ಲರೂ ಒಂದಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ. ಎಂಪಿಎಂ ಕಾರ್ಖಾನೆ ಮೊದಲಿನಂತೆ ಆರಂಭಗೊಂಡು ಉತ್ಪಾದನಾ ಚಟುವಟಿಕೆ ಪುನರಾರಂಭಿಸಿದರೆ ಕಾರ್ಮಿಕರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎನ್.ಮಾಧವ ಪ್ರಸಾದ್, ದಿನೇಶ್, ರವಿಚಂದ್ರ, ಎಸ್.ರವಿ, ಮಂಜೇಗೌಡ, ಲೋಕೇಶ್, ಜಗದೀಶ್, ತಿಪ್ಪೇಸ್ವಾಮಿ ಸೇರಿದಂತೆ ಹಲವರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]
