ಶಿವಮೊಗ್ಗ ಲೈವ್.ಕಾಂ | SHIMOGA | 27 ಡಿಸೆಂಬರ್ 2019
ಶಿವಮೊಗ್ಗ ಸೇರಿದಂತೆ ರಾಜ್ಯದ 11 ನಗರ ಪಾಲಿಕೆಗಳ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ.
ಮೇಯರ್ ಸ್ಥಾನ ಹಿಂದುಳಿದ ವರ್ಗ ಬಿ ಕೆಟಗರಿಯ ಮಹಿಳೆ ಮತ್ತು ಉಪಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ.
ಯಾರಾಗಬಹುದು ನೂತನ ಮೇಯರ್?
ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಹೊಂದಿದೆ. ಈ ಮೀಸಲಾತಿ ಅನ್ವಯ ಮೇಯರ್ ಸ್ಥಾನಕ್ಕೇರಲು ಇಬ್ಬರು ಅರ್ಹರಿದ್ದಾರೆ. ಪಾಲಿಕೆಯ 19ನೇ ವಾರ್ಡ್ ಶರಾವತಿ ನಗರದ ಸಾಮಾನ್ಯ ಮೀಸಲು ಕ್ಷೇತ್ರದ ಕಾರ್ಪೊರೇಟರ್ ಸುವರ್ಣಾ ಶಂಕರ್, 7ನೇ ವಾರ್ಡ್ ಕಲ್ಲಹಳ್ಳಿ KHBಯಿಂದ ಬಿಸಿಎಂ (ಬಿ) ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅನಿತಾ ರವಿಶಂಕರ್ ಅವರಿಗೆ ಮೇಯರ್ ಪಟ್ಟ ಅಲಂಕರಿಸುವ ಅರ್ಹತೆ ಇದೆ.

ಮೂಲಗಳ ಪ್ರಕಾರ ಮೇಯರ್ ಸ್ಥಾನಕ್ಕೆ ಅನಿತಾ ರವಿಶಂಕರ್ ಅವರ ಹೆಸರನ್ನು ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ.
ಉಪ ಮೇಯರ್ ಸ್ಥಾನಕ್ಕೆ ಪೈಪೋಟಿ

ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 10ನೇ ವಾರ್ಡ್’ನ ಆರತಿ ಎ.ಎಂ.ಪ್ರಕಾಶ್, 12ನೇ ವಾರ್ಡ್’ನ ಸುನಿತಾ ರವಿಶಂಕರ್, 23ನೇ ವಾರ್ಡ್’ನ ಕಲ್ಪನಾ ರಮೇಶ್, 29ನೇ ವಾರ್ಡ್’ನ ಸುನಿತಾ ಅಣ್ಣಪ್ಪ, 31ನೇ ವಾರ್ಡ್’ನ ಲಕ್ಷ್ಮೀ ಶಂಕರನಾಯ್ಕ ಸಾಮಾನ್ಯ ಮೀಸಲಾತಿ ಅಡಿ ಗೆಲುವು ಸಾಧಿಸಿದ್ದಾರೆ. ಇವರಲ್ಲಿ ಯಾರು ಬೇಕಾದರು ಉಪ ಮೇಯರ್ ಆಗಬಹುದಾಗಿದೆ. ಆದರೆ ಉಪಮೇಯರ್ ಸ್ಥಾನಕ್ಕೆ ಸದ್ಯಕ್ಕೆ ಸುರೇಖಾ ಮುರಳೀಧರ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
