ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 NOVEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ಒಂದು ತಿಂಗಳು ಪುಸ್ತಕ ಮಾರಾಟ, ಪ್ರದರ್ಶನ ಮೇಳೆ ಆಯೋಜಿಸಲಾಗಿದೆ (Book Exhibition) ಎಂದು ಮಳಿಗೆಯ ಸೌಮ್ಯಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌಮ್ಯಾ, ರಾಜ್ಯೋತ್ಸವ ಪ್ರಯುಕ್ತ 2ನೇ ವರ್ಷದ ಮಹಾ ಪುಸ್ತಕ ಪ್ರದರ್ಶನ (Book Exhibition)ಮೇಳ ಹಮ್ಮಿಕೊಂಡಿದೆ. ನವೆಂಬರ್ 1 ರಿಂದ 30ರವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ವಿಜ್ಞಾನ ತಂತ್ರಜ್ಞಾನ, ಪರಿಸರ, ಗಣಿತ, ಸಮಾಜ ವಿಜ್ಞಾನ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕನ್ನಡ ಮತ್ತು ಇಂಗ್ಲೀಷ್ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ತಿಳಿಸಿದರು. ಪುಸ್ತಕ ಮಳಿಗೆಯ ಅಶ್ವಿನಿ, ನಯನಾ, ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ- ಶಿವಮೊಗ್ಗದ ಬಡವರು, ಮಧ್ಯಮ ವರ್ಗದವರಿಗೆ ಸಿಗಲಿ ಸೈಟ್, ಖಾಸಗಿ ಬಡಾವಣೆಗೆ ಬ್ರೇಕ್, ತಾಕೀತು ಮಾಡಿದ ಮಿನಿಸ್ಟರ್