ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 27 JUNE 2023 | FATAFAT NEWS
ಕೆಂಪೇಗೌಡರ ಬೃಹತ್ ಭಾವಚಿತ್ರಕ್ಕೆ ಪುಷ್ಪ ನಮನ
SHIMOGA : ನಾಡ ಪ್ರಭು ಕೆಂಪೇಗೌಡ ಅವರ ಜನ್ಮದಿನಾಚರಣೆ ಅಂಗವಾಗಿ ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಕೆಂಪೇಗೌಡ ಅವರ ಬೃಹತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬೆಂಗಳೂರಿನ ಕಲಾವಿದರು ರಚಿಸಿದ ವಿಶೇಷ ಭಾವಚಿತ್ರ ಇದು. ಒಕ್ಕಲಿಗ ಯುವ ವೇದಿಕೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯ ಅಧ್ಯಕ್ಷ ಚೇತನ್ ಗೌಡ, ಮಹಾನಗರ ಪಾಲಿಕೆ ಸದಸ್ಯ ಬಿ.ಎ.ರಮೇಶ್ ಹೆಗ್ಡೆ , ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಆದಿ ಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ್ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಕಾಂತ್, ಪದ್ಮನಾಭ, ಮಾಜಿ ಮೇಯರ್ ಸುವರ್ಣ ಶಂಕರ್, ಮಹಾನಗರ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ , ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕ ವಿಜಯಕುಮಾರ್, ದೇಶಿಯ ವಿದ್ಯಾ ಶಾಲಾ ಸಮಿತಿ ಅಧ್ಯಕ್ಷ ಕೊಳಲೇ ರುದ್ರಪ್ಪಗೌಡ, ಯುವ ಮುಖಂಡ ರಂಗೇಗೌಡರು, ಶಿವಣ್ಣ, ಶ್ರೀಜಿತ್ ಗೌಡ, ಕೈಗಾರಿಕೋದ್ಯಮಿ ರಮೇಶ್ ಹೆಗ್ಡೆ, ಶಾಂತಾ ಸುರೇಂದ್ರ, ನೇತ್ರಾವತಿ, ಶಾರದಾ ಶೇಷಗಿರಿಗೌಡ , ರಘು ಗೌಡ, ಗುರುರಾಜ್, ಸುನಿಲ್, ಪ್ರಜ್ವಲ್, ಹರ್ಷಿತ್, ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮಳೆ ಕೊರತೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟು ಕಡಿಮೆಯಾಗಿದೆ? ಕೃಷಿಕರ ಪರಿಸ್ಥಿತಿ ಹೇಗಿದೆ?
ಆಕಾಶವಾಣಿ ಭದ್ರಾವತಿಯಲ್ಲಿ ನರೇಗ ಯೋಜನೆ ಕಾರ್ಯಕ್ರಮ
BHADRAVATHI : ಆಕಾಶವಾಣಿ ಭದ್ರಾವತಿ ರೇಡಿಯೋದ ಎಫ್ಎಂ 103.5 ತರಂಗಾಂತರ ಮತ್ತು 675 ತರಂಗಾಂತರದಲ್ಲಿ ನರೇಗ ಯೋಜನೆ – ವಿಶೇಷ ಕಾರ್ಯಕ್ರಮ ಪ್ರಸರವಾಗಲಿದೆ. ಜುಲೈ 1ರಂದು ಬೆಳಗ್ಗೆ 7.15ಕ್ಕೆ ಕಾರ್ಯಕ್ರಮ ಪ್ರಸಾರವಾಲಿದೆ. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಲೋಖಂಡೆ ಅವರೊಡನೆ ಮಾತುಕತೆ ನಡೆಸಲಾಗಿದೆ. ಪ್ರಸಾರ ಭಾರತಿಯ newsonair App ಮತ್ತು All India Radio Bhadravathi ಯು ಟ್ಯೂಬ್ ಚಾನೆಲ್ನಲ್ಲಿಯು ವಿಡಿಯೋ ನೋಡಬಹುದಾಗಿದೆ ಎಂದು ಭದ್ರಾವತಿ ಆಕಾಶವಾಣಿ ಮುಖ್ಯಸ್ಥ ಎಸ್.ಆರ್.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – ತಾಳಗುಪ್ಪ – ಶಿವಮೊಗ್ಗ – ಮೈಸೂರು ರಾತ್ರಿ ರೈಲು ಸೇರಿ ಮೂರು ರೈಲುಗಳ ಸಮಯಲ್ಲಿ ಮಹತ್ವದ ಬದಲಾವಣೆ
ಶುಶ್ರುತ ಸಂಸ್ಥೆಗೆ ಶಿವಮೊಗ್ಗದ ವೈದ್ಯರ ತಂಡ
SHIMOGA : ಆಸ್ಪತ್ರೆ ತ್ಯಾಜ್ಯ ವಿಲೇವಾರಿ, ಸಂಸ್ಕರಣೆ, ಪ್ರತ್ಯೇಕತೆ ಮತ್ತು ಚಿಕಿತ್ಸಾ ಸೌಲಭ್ಯ ಸಂಸ್ಥೆ ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ಸೊಸೈಟಿಯ ಮಾಚೇನಹಳ್ಳಿ ಘಟಕಕ್ಕೆ ವೈದ್ಯರು ಭೇಟಿ ನೀಡಿ ಮಾಹಿತಿ ಪಡೆದರು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ವೈದ್ಯರ ತಂಡ ಸಂಸ್ಥೆಗೆ ಭೇಟಿ ನೀಡಿ ಕಾರ್ಯನಿರ್ವಹಣೆ ಮತ್ತು ಆಸ್ಪತ್ರೆ ತ್ಯಾಜ್ಯ ವಿಲೇವಾರಿ ಕ್ರಮಗಳ ಕುರಿತು ಮಾಹಿತಿ ಪಡೆದರು. ಶುಶ್ರುತ ಸಮಿತಿ ಅಧ್ಯಕ್ಷ ಡಾ. ಪ್ರಶಾಂತ್ ಇಸ್ಲೂರ್, ಕಾರ್ಯದರ್ಶಿ ಡಾ.ಗಿರೀಶ್ ಮತ್ತು ಡಾ. ವಿನಿತ್ ಆನಂದ್ ಐಎಂಎ ಸದಸ್ಯರಿಗೆ ಮಾಹಿತಿ ನೀಡಿದರು. ಐಎಂಎ ಅಧ್ಯಕ್ಷ ಡಾ. ಅರುಣ್ .ಎಂ.ಎಸ್, ಕಾರ್ಯದರ್ಶಿ ಡಾ.ರಕ್ಷಾ ರಾವ್, ಉಪಾಧ್ಯಕ್ಷ ಡಾ.ರವೀಶ್ ಸೇರಿದಂತೆ ಹಲವರು ಭೇಟಿ ನೀಡಿದ್ದರು.
ಲಕ್ಷ್ಮೀ ಟಾಕೀಸ್ ಸರ್ಕಲ್ನಲ್ಲಿ ಗುಂಡಿ
SHIMOGA : ಲಕ್ಷ್ಮಿ ಚಿತ್ರಮಂದಿರದ ಬಳಿ ನೂರು ಅಡಿ ರಸ್ತೆಯಲ್ಲಿ ದೊಡ್ಡ ಗುಂಡಿಯಾಗಿದೆ. ಸರ್ಕಲ್ನಿಂದ ವಿನೋಬನಗರಕ್ಕೆ ಹೋಗುವ ಮಾರ್ಗದಲ್ಲಿ ಗುಂಡಿಯಾಗಿದೆ. ಬೆಳಗ್ಗೆ ವಾಹನವೊಂದು ಈ ಗುಂಡಿಯಲ್ಲಿ ಸಿಲುಕಿತ್ತು. ಸಾರ್ವಜನಿಕರ ಆಕ್ರೋಶದ ಬೆನ್ನಿಗೆ ಅಧಿಕಾರಿಗಳು ಗುಂಡಿ ಮುಚ್ಚಿಸಿ, ಜೆಲ್ಲಿ ಕಲ್ಲುಗಳನ್ನು ಹಾಕಿಸಿದ್ದಾರೆ. ಆದರೆ ಮಳೆಯಾಗುತ್ತಿದ್ದಂತೆ ಗುಂಡಿ ಪ್ರತ್ಯಕ್ಷವಾಗಲಿದೆ. ಇದರಿಂದ ಈ ಭಾಗದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಲಿದೆ.
I LOVE SMG ಬೋರ್ಡ್ಗೆ ಹಾನಿ
SHIMOGA : ಹೊಳೆ ಬಸ್ ನಿಲ್ದಾಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಲಾಗಿದ್ದ ಐ ಲವ್ ಶಿವಮೊಗ್ಗ ಎಲ್ಇಡಿ ಲೆಟರ್ ಸೈನ್ ಬೋರ್ಡನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. I LOVE SMG ಎಂದು ಸೈನ್ ಬೋರ್ಡ್ ಹಾಕಲಾಗಿತ್ತು. ಇದರ ಒಳಗಿದ್ದ ಎಲ್ಇಡಿ ಬಲ್ಬ್ಗಳು ರಾತ್ರಿ ಬೆಳಗುತ್ತಿದ್ದರಿಂದ I LOVE SMG ಬೋರ್ಡ್ ನಳನಳಿಸುತ್ತಿತ್ತು. ಕಿಡಿಗೇಡಿಗಳು ಮೊದಲಿಗೆ ಈ ಸೈನ್ ಬೋರ್ಡ್ನಲ್ಲಿದ್ದ ಹಾರ್ಟ್ ಶೇಪ್ನ ಸೈನ್ ಬೋರ್ಡನ್ನು ಕಿತ್ತೊಯ್ದಿದ್ದರು. ಈಚೆಗೆ ಐ ಅಕ್ಷರವನ್ನು ಕದ್ದೊಯ್ದಿದ್ದಾರೆ. ಇದರಿಂದ ಸೈನ್ ಬೋರ್ಡ್ ಹಾನಿಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422