SHIVAMOGGA LIVE| 25 JUNE 2023
ಕರ್ತವ್ಯ ಪ್ರಜ್ಞೆ ಮೆರೆದ ಬಸ್ ಸಿಬ್ಬಂದಿ, ಪ್ರಯಾಣಿಕ ಸೇಫ್
THIRTHAHALLI : ಶಿವಮೊಗ್ಗ – ಮಂಗಳೂರು (Mangalore) ರೂಟ್ನ ಖಾಸಗಿ ಬಸ್ಸಿನಲ್ಲಿ (Private Bus) ತೆರಳುತ್ತಿದ್ದ ಪ್ರಯಾಣಿಕರೊಬ್ಬರಿಗೆ ಹೃದಯಾಘಾತ ಸಂಭವಿಸಿದೆ. ದುರ್ಗಾಂಬ (Durgamba) ಬಸ್ಸಿನಲ್ಲಿ ತೆರಳುತ್ತಿದ್ದಾಗ ತೀರ್ಥಹಳ್ಳಿ ಸಮೀಪ ಘಟನೆ ಸಂಭವಿಸಿದೆ. ದುರ್ಗಾಂಬ ಬಸ್ ಕಂಡಕ್ಟರ್, ಡ್ರೈವರ್ ಪ್ರಯಾಣಿಕನನ್ನು ಕೂಡಲೆ ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಗೆ ದಾಖಲಿಸಿ ಕರ್ತವ್ಯ ಪ್ರಜ್ಞೆ ಮರೆದಿದ್ದಾರೆ. ಇನ್ನು, ತೀರ್ಥಹಳ್ಳಿ ಪ್ರಾಥಮಿಕ ಚಿಕಿತ್ಸೆ ಪಡೆದ ಪ್ರಯಾಣಿಕನನ್ನು ಶಿವಮೊಗ್ಗದ ಆಸ್ಪತ್ರೆ ಕರೆದೊಯ್ದು ದಾಖಲಿಸಲಾಗಿದೆ. ಆಂಬುಲೆನ್ಸ್ ಚಾಲಕ ರಂಜಿತ್, ರಹಮತ್ ಮತ್ತು ಪವನ್ ಅವರು ಸಕಾಲಕ್ಕೆ ಪ್ರಯಾಣಿಕನನ್ನು ಶಿವಮೊಗ್ಗದಲ್ಲಿ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಸದ್ಯ ಪ್ರಯಾಣಿಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಹೃದಯಾಘಾತಕ್ಕೀಡಾದ ಪ್ರಯಾಣಿಕನನನ್ನು ಕೇರಳ ಮೂಲದ ಬಾಬು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ – ಈ ಮೇಲ್ನಲ್ಲಿ ಬಂತು ದೂರು, ಸಾಮಿಲ್ ಮೇಲೆ ಪೊಲೀಸರ ದಾಳಿ, ಮುಂದೇನಾಯ್ತು?
ಮನೆಗೆ ನುಗ್ಗಿದ್ದ ಕಳ್ಳ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ
BHADRAVATHI : ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿದ್ದ ಕಳ್ಳ (Thief) ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದಾನೆ. ಭದ್ರಾವತಿ ತಾಲೂಕು ಕಡದಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಮನೆಯೊಂದರಲ್ಲಿ ಕಳ್ಳತನ ಮಾಡುವಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಗ್ರಾಮಸ್ಥರು ಆತನನ್ನು ಹಿಡಿದು ಪೊಲೀಸರಿಗೆ (Police) ಒಪ್ಪಿಸಿದ್ದಾರೆ. ನ್ಯೂ ಟೌನ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಮೊದಲ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ರೆಡಿ, ಹೇಗಿದೆ? ಎಷ್ಟು ಕಾರ್, ಬೈಕ್ ನಿಲ್ಲಿಸಬಹುದು?
ಕಾರೇಹಳ್ಳಿ ಬಳಿ ಕಾರಿಗೆ ಗುದ್ದಿದ ಲಾರಿ
BHADRAVATHI : ಲಾರಿ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಭದ್ರಾವತಿ ತಾಲೂಕು ಕಾರೇಹಳ್ಳಿ (Karehalli) ಬಳಿ ಘಟನೆ ಸಂಭವಿಸಿದೆ. ಹಿಂಬದಿ ಬರುತ್ತಿದ್ದ ಲಾರಿ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ – ಚಂದ್ರಗುತ್ತಿ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ, ಎಷ್ಟು ಕಾಣಿಕೆ ಸಂಗ್ರಹವಾಗಿದೆ?
ಚಿನ್ನಾಭರಣ ಕಳ್ಳತನ ಸೂಳೆಬೈಲ್ನ ಯುವಕ ಅರೆಸ್ಟ್
SHIMOGA : ಅಶೋಕನಗರದ ಮನೆಯೊಂದರ ಬಾಗಿಲಿನ ಲಾಕ್ ಮುರಿದು ಬೀರುವಿನಲ್ಲಿದ್ದ ನಗದು, ಚಿನ್ನಾಭರಣ ದೋಚಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸೂಳೆಬೈಲು ನಿವಾಸಿ ತೌಸೀಫ್ ಅಲಿಯಾಸ್ ಟೈಗರ್ (24) ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ 1.48 ಲಕ್ಷ ರೂ. ಮೌಲ್ಯದ 33.50 ಗ್ರಾಂ ಬಂಗಾರದ ಆಭರಣ, ಒಂದು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣೆ ಸಿಬ್ಬಂದಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ – ಮಧ್ಯರಾತ್ರಿ ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕನಿಗೆ ಶಾಕ್, ಕಂತೆ ಕಂತೆ ಹಣದ ಬ್ಯಾಗ್ ಮಿಸ್ಸಿಂಗ್
ಜಂಬಿಟ್ಟಿಗೆ ಗಣಿ ಮೇಲೆ ದಾಳಿ
RIPPONPETE : ಅಕ್ರಮವಾಗಿ ಜಂಬಿಟ್ಟಿಗೆ ಗಣಿಗಾರಿಕೆ ನಡೆಸುತ್ತಿರುವ ಆರೋಪದ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸರೂರು ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಲಾರಿ, ಟ್ರ್ಯಾಕ್ಟರ್ ಮತ್ತು ಜಂಬಿಟ್ಟಿಗೆ ಕತ್ತರಿಸುವ ಯಂತ್ರ ಸಿಕ್ಕಿದ್ದು, ವಶಕ್ಕೆ ಪಡೆಯಲಾಗಿದೆ. ಹಿರಿಯ ವಿಜ್ಞಾನಿ ವಿಂಧ್ಯಾ, ಸಹಾಯಕ ಅಧಿಕಾರಿ ಕೆ.ಎಲ್.ಮಾನಸ ದಾಳಿ ವೇಳೆ ಇದ್ದರು. ಪ್ರಕರಣವನ್ನು ರಿಪ್ಪನ್ಪೇಟೆ ಠಾಣೆಗೆ ಹಸ್ತಾಂತರಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200