SHIVAMOGGA LIVE | 29 JUNE 2023 | FATAFAT NEWS
ಇಂಡಿಗೋ ವೆಬ್‌ಸೈಟ್‌ನಲ್ಲಿ ಶಿವಮೊಗ್ಗದ ಹೆಸರು
SHIMOGA : ಆ.11ರಿಂದ ಶಿವಮೊಗ್ಗ – ಬೆಂಗಳೂರು ಮಧ್ಯೆ ವಿಮಾನಯಾನ (Flight) ಸೇವೆ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಈ ಮಧ್ಯೆ ಇಂಡಿಗೋ ಏರ್‌ಲೈನ್ಸ್ ತನ್ನ ವೆಬ್‌ಸೈಟ್‌ನ ಡೆಸ್ಟಿನೇಷನ್ ಕಾಲಂನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರು ಪ್ರಕಟಿಸಿದೆ. ಆದರೆ (Flight) ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಇನ್ನು ಆರಂಭವಾಗಿಲ್ಲ. ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಯಾಗಿತ್ತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಇಂಜಿನಿಯರ್ ಪತ್ನಿ ಕೊಲೆ ಕೇಸ್, ಕಾರು ಚಾಲಕ ಸೇರಿ ಆರು ಮಂದಿ ಅರೆಸ್ಟ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಎಫ್‌ಎಂನಲ್ಲಿ ಶಾಸಕರೊಂದಿಗೆ ನೇರ ಸಂವಾದ
SHIMOGA : ರೇಡಿಯೋ ಶಿವಮೊಗ್ಗ 90.8 ಎಫ್.ಎಂ.ನಲ್ಲಿ ಇವತ್ತು ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಅವರೊಂದಿಗೆ ಸಾರ್ವಜನಿಕರು ನೇರವಾಗಿ ಕರೆ ಮಾಡಿ ಅಹವಾಲು ತಿಳಿಸಬಹುದಾಗಿದೆ. ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದೆ. 10.30ರಿಂದ ಸಾರ್ವಜನಿಕರ ಕರೆ ಸ್ವೀಕರಿಸಲಾಗುತ್ತದೆ. 96860 96279 ಗೆ ಕರೆ ಮಾಡಬಹುದಾಗಿದೆ ಎಂದು ರೇಡಿಯೋ ಶಿವಮೊಗ್ಗ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ – ಶಿವಮೊಗ್ಗ ಗಾಂಧಿ ಪಾರ್ಕ್‌ನಲ್ಲಿ ಮಾಜಿ ಸಚಿವರಿಂದ ಉಪವಾಸ ಸತ್ಯಾಗ್ರಹ, ಕಾರಣವೇನು? ಯಾವಾಗ?
ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
SHIMOGA : ಮಾದಕ ವಸ್ತು ಸೇವನೆಗೆ ಕಡಿವಾಣ ಹಾಕಲು ಮುಂದಾಗಿರುವ ಶಿವಮೊಗ್ಗ ಪೊಲೀಸರ ಕ್ರಮ ಶ್ಲಾಘನೀಯ. ಹಾಗೆಯೇ ಮಾದಕ ವಸ್ತು ಮಾರಾಟ ಮಾಡುವವರ ವಿರುದ್ಧವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಡಿಕಲ್ ಕಾಲೇಜು ವಿದ್ಯಾರ್ಥಿಗಳು ಗಾಂಜಾ ಬೆಳೆದು, ಮಾರಾಟ ಮಾಡುತ್ತಿದ್ದರು. ಅವರನ್ನು ಪೊಲೀಸರು ಬಂಧಿಸಿರುವು ಶ್ಲಾಘನೀಯ ಎಂದರು.
ಇದನ್ನೂ ಓದಿ – ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ದಿನಾಂಕ ಫಿಕ್ಸ್, ಜಿಲ್ಲೆಯಾದ್ಯಂತ ಮೊಬೈಲ್ ನೆಟ್‌ವರ್ಕ್ ವಿಸ್ತರಣೆಗೆ ಗುಡುವು ನಿಗದಿ
ಕಾರಿನ ಸೈಲೆನ್ಸರ್ ಅಸೆಂಬಲ್ ಕಳ್ಳತನ
SHIMOGA : ಮನೆ ಬಳಿ ನಿಲ್ಲಿಸಿದ್ದ ಕಾರಿನ ಸೈಲೆನ್ಸರ್ ಅಸೆಂಬಲ್ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಜೈಲ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಶರವಣ ಎಂಬುವವರಿಗೆ ಸೇರಿ ಮಾರುತಿ ಈಕೋ ಕಾರನ್ನು ಜೂ.21ರ ರಾತ್ರಿ ಮನೆ ಬಳಿ ನಿಲ್ಲಿಸಲಾಗಿತ್ತು. ಜೂ. 23ರಂದು ಬೆಳಗ್ಗೆ ಕಾರು ಶುರು ಮಾಡಿದಾಗ ವಿಚಿತ್ರ ಶಬ್ದ ಕೇಳಿಸಿದೆ. ಮೆಕಾನಿಕ್ ಕರಿಸಿ ಪರಿಶೀಲಿಸಿದಾಗ ಸೈಲೆನ್ಸರ್ ಅಸೆಂಬಲ್ ಇಲ್ಲದಿರುವುದು ಗೊತ್ತಾಗಿದೆ. ಇದರ ಮೌಲ್ಯ 50 ಸಾವಿರ ರೂ. ಕಾರು ಮಾಲೀಕ ಶರವಣ ಅವರು ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ – ಮದುವೆ ಮನೆಯಲ್ಲಿ ಸೂತಕದ ಛಾಯೆ, ಮರುಗಿದ ಜನತೆ, ಆಗಿದ್ದೇನು?
ಆಹಾರ ಇಲಾಖೆಯಲ್ಲಿ ಭ್ರಷ್ಟಾಚಾರ, ಕ್ರಮಕ್ಕೆ ಒತ್ತಾಯ
SHIMOGA : ಆಹಾರ ಇಲಾಖೆಯಲ್ಲಿ ಭ್ರಷ್ಟಾಚಾರ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಏ.11ರಂದು ಭದ್ರಾವತಿ ಹಳೆ ನಗರ ಠಾಣೆ ಪೊಲೀಸರು, ಗೋದಾಮಿನಿಂದ ಹೊರಟಿದ್ದ ಲಾರಿಯನ್ನು ತಪಾಸಣೆ ನಡೆಸಿದರು. ರಶೀದಿಯಲ್ಲಿ 423 ಚೀಲ ಅಕ್ಕಿ ಇದೆ ಎಂದು ನಮೂದಾಗಿತ್ತು. ಆದರೆ ಲಾರಿಯಲ್ಲಿ 340 ಮೂಟೆ ಮಾತ್ರ ಇತ್ತು. ಭ್ರಷ್ಟಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ – ಭದ್ರಾವತಿಯ ಯುವಕನಿಗೆ 3 ವರ್ಷ ಜೈಲು, 2.88 ಲಕ್ಷ ರೂ. ದಂಡ, ಕಾರಣವೇನು?