ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಜೂನ್ 2020
ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಹತ್ತು ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.
ಇವತ್ತು ಯಾರಿಗೆಲ್ಲ ಕರೋನ ಸೋಂಕು ತಗುಲಿದೆ?
ಪಿ6141 – 27 ವರ್ಷದ ಪುರುಷ
ಪಿ6142 – 46 ವರ್ಷದ ಪುರುಷ
ಪಿ6143 – 52 ವರ್ಷದ ಪುರುಷ
ಪಿ6144 – 10 ವರ್ಷದ ಬಾಲಕ
ಪಿ6145 – 47 ವರ್ಷದ ಪುರುಷ
ಪಿ6146 – 35 ವರ್ಷದ ಮಹಳೆ
ಪಿ6147 – 66 ವರ್ಷದ ಪುರುಷ
ಪಿ6148 – 9 ವರ್ಷದ ಬಾಲಕ
ಪಿ6149 – 52 ವರ್ಷದ ಪುರುಷ
ಪಿ6150 – 25 ವರ್ಷದ ಮಹಿಳೆ
ಎಂಟು ಸೋಂಕಿತರಿಗೆ ಮಹಾರಾಷ್ಟ್ರ ಲಿಂಕ್
ಇವತ್ತಿನ ಹತ್ತು ಪ್ರಕರಣದಲ್ಲಿ ಎಂಟು ಸೋಂಕಿತರಿಗೆ ಮಹಾರಾಷ್ಟ್ರದ ಲಿಂಕ್ ಇದೆ. ಮಹಾರಾಷ್ಟ್ರದಿಂದ ಹಿಂತಿರುಗುತ್ತಿದ್ದಂತೆ ಇವರನ್ನು ಕ್ವಾರಂಟೈನ್ಗೆ ಒಳಪಡಿಸಿ, ಪರೀಕ್ಷೆ ನಡೆಸಲಾಗಿತ್ತು. ಕರೋನ ಪಾಸಿಟಿವ್ ಬಂದ ಹಿನ್ನೆಲೆ ಇವರಿಗೆ ಚಿಕಿತ್ಸೆ ನಡೆಸಲಾಗುತ್ತಿದೆ.

ಒಬ್ಬರದ್ದು ಸಂಪರ್ಕ ಗೊತ್ತಿಲ್ಲ, ಮತ್ತೊಬ್ಬರಿಗೆ SARI
ಉಳಿದ ಇಬ್ಬರು ಸೋಂಕಿತರ ಪೈಕಿ ಒಬ್ಬರಿಗೆ SARI ಎಂಬ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಇದು ಕೂಡ ಕರೋನ ಒಂದು ವಿಧ. ಪಿ6149ಗೆ SARI ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 25 ವರ್ಷದ ಮಹಿಳೆ ಪಿ6150ಗೆ ಸೋಂಕು ತಗುಲಿದ್ದು ಹೇಗೆ ಅನ್ನುವುದನ್ನು ಇನ್ನು ಪತ್ತೆ ಹಚ್ಚಲಾಗುತ್ತಿದೆ.
ಶಿವಮೊಗ್ಗದಲ್ಲಿ ಈಗೆಷ್ಟು ಪ್ರಕರಣಗಳಿವೆ?
ಶಿವಮೊಗ್ಗ ಜಿಲ್ಲೆ ಇವತ್ತಿನ ಹತ್ತು ಹೊಸ ಪ್ರಕರಣಗಳು ಸೇರಿ ಒಟ್ಟು ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಈವರೆಗೆ 31 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 52 ಮಂದಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






