ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEW S | 20 FEBRUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಭದ್ರಾ ನದಿ ಮತ್ತು ನಾಲೆಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ನದಿ ಮತ್ತು ನಾಲೆ ಸುತ್ತಮುತ್ತ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಫೆ.26ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ನಿಷೇಧಾಜ್ಞೆ ವಿಧಿಸಿದ್ದು ಏಕೆ?
ಹಾವೇರಿ ಮತ್ತು ಗದಗ ನಗರದ ಕುಡಿಯುವ ನೀರಿಗಾಗಿ ಫೆ.5ರಿಂದ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಆದರೆ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕರೆ ಮಾಡಿ ನೀರು ತಲುಪಿಲ್ಲ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ತಿಳಿಸಿದ್ದಾರೆ.
ನದಿ ಪಾತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ಪಂಪ್ಸೆಟ್ಗಳನ್ನು ಹಾಕಿ ನೀರೆತ್ತಲಾಗುತ್ತಿದೆ. ಕೆಲವು ಕಡೆ ನದಿಗೆ ಅಡ್ಡಲಾಗಿ ಅನಧಿಕೃತವಾಗಿ ಮಣ್ಣಿನ ಏರಿ ನಿರ್ಮಿಸಿ ನೀರೆತ್ತಲಾಗುತ್ತಿದೆ. ಆದ್ದರಿಂದ ಹೊಳೆಯ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ.
ಜಿಲ್ಲಾಧಿಕಾರಿ ಆದೇಶದಲ್ಲಿ ಏನೇನಿದೆ?
ಭದ್ರಾ ನದಿ ಮತ್ತು ಕಾಲುವೆಯಿಂದ ಅನಧಿಕೃತವಾಗಿ ಪಂಪ್ಸೆಟ್ ಬಳಸಿ ಹೊಲಕ್ಕೆ ನೀರು ಹಾಯಿಸುವುದು ನಿಷೇಧಿಸಲಾಗಿದೆ. ನದಿ ಮತ್ತು ಕಾಲುವೆ ಬಳಿ ಐದಕ್ಕಿಂತಲು ಹೆಚ್ಚು ಜನ ಗುಂಪು ಸೇರುವಂತ್ತಿಲ್ಲ. ನಿಷೇಧಾಜ್ಞೆ ವಿಧಿಸಿದ ಪ್ರದೇಶದಲ್ಲಿ ಘೋಷಣೆ ಕೂಗುವುದು, ಮಾರಕಾಸ್ತ್ರ ಹಿಡಿದು ಓಡಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಪೊಲೀಸ್ ನೇಮಕಾತಿ ಪರೀಕ್ಷೆ, ರೈಲ್ವೆ ಇಲಾಖೆಯಿಂದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್