ಶಿವಮೊಗ್ಗ ಲೈವ್.ಕಾಂ | SHIMOGA | 2 ಏಪ್ರಿಲ್ 2020
ಶಿವಮೊಗ್ಗದ ಕೇಂದ್ರ ಕಾರಾಗೃಹದಿಂದ 18 ಮಂದಿ ವಿಚಾರಾಣಧೀನ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಕರೋನ ಪಸರಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಜೈಲಿನಲ್ಲಿ ಜನಸಂಖ್ಯೆ ಹೆಚ್ಚಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾನದಂಡಗಳನ್ನು ಅನುಸರಿಸಿ 18 ಜನರನ್ನು ಬಿಡುಗಡೆ ಮಾಡಲಾಗಿದೆ. ಡಿಎಆರ್ ಪೊಲೀಸರ ನೆರವಿನೊಂದಿಗೆ ಈ ಕೈದಿಗಳನ್ನು ಮನೆಗೆ ಬಿಟ್ಟು ಬರಲಾಗಿದೆ.
ಎರಡು ತಿಂಗಳ ಬಳಿಕ ಹಿಂತಿರುಗಬೇಕು
ಈಗ ಬಿಡುಗಡೆ ಆಗಿರುವ ಕೈದಿಗಳು ಎರಡು ತಿಂಗಳ ಬಳಿಕ ಜೈಲಿಗೆ ಹಿಂತಿರುಗಬೇಕು. ಈ ಷರತ್ತು ವಿಧಿಸಿಯೇ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಏಳು ವರ್ಷಕ್ಕೂ ಕಡಿಮೆ ಸಜೆ ಆಗಬಹುದಾದ ಪ್ರಕರಣಗಳನ್ನು ಹೊಂದಿರುವ, ಮೊದಲ ಸಲ ತಪ್ಪು ಮಾಡಿರುವ, ಮಕ್ಕಳ ಮೇಲೆ ದೌರ್ಜನ್ಯ ಮಾಡಿರದ ಹಾಗೂ ಕೊಲೆ ಪ್ರಕರಣ ಹೊಂದಿರದ ಹೀಗೆ ವಿವಿಧ ಮಾನದಂಡಗಳನ್ನು ಹೈಕೋರ್ಟ್ ವಿಧಿಸಿದೆ. ಅದರ ಅನ್ವಯ ಜಿಲ್ಲಾಮಟ್ಟದ ಸಮಿತಿಯಲ್ಲಿ ಚರ್ಚಿಸಿ, ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]