ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
GOOD MORNING SHIMOGA, 3 OCTOBER 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವೈರಿಗಳು ಹೊರಗಿಲ್ಲ. ನಮ್ಮೊಳಗೇ ಇದ್ದಾರೆ. ಸಿಟ್ಟು, ಅಹಂ, ಮೋಹ, ದ್ವೇಷಗಳೆ ನಿಜವಾದ ಶತ್ರುಗಳು.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬಿಸಿಲ ಧಗೆ, ಒಣ ಹವೆ, ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?
ಶಿವಮೊಗ್ಗ ಸಿಟಿ ಸುದ್ದಿ ಮಹಾನಗರ ಪಾಲಿಕೆ : ಶಿವಮೊಗ್ಗದಲ್ಲಿ ಇವತ್ತಿನಿಂದ ಶರನ್ನವರಾತ್ರಿ. 68 ವಿವಿಧ ಕಾರ್ಯಕ್ರಮ ಆಯೋಜನೆ. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಚನ್ನಬಸಪ್ಪ ಹೇಳಿಕೆ. ಶಿವಮೊಗ್ಗ ಸಿಟಿ : ನಗರದ ವಿವಿಧ ದೇಗುಲಗಳಲ್ಲಿ ಶರನ್ನವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜನೆ. ಬೆಳಗ್ಗೆಯಿಂದಲೆ ಪೂಜೆಗಳು ಆರಂಭ. ಕುವೆಂಪು ರಂಗಮಂದಿರ : ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮ. ಗಾಂಧೀಜಿ ಸೇರಿದಂತೆ ಅನೇಕರ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆ. ಶಿವಮೊಗ್ಗ ಸಿಟಿ : ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ನಗರದಲ್ಲಿ ಪಾದಯಾತ್ರೆ ನಡೆಸಲಾಯಿತು. ಗಾಂಧಿ ಟೋಪಿ ಧರಿಸಿ, ಗಾಂಧೀಜಿ ಪರ ಘೋಷಣೆ ಮೊಳಗಿಸುತ್ತ ಪಾದಯಾತ್ರೆ ನಡೆಸಲಾಯಿತು. ಗೋಪಿ ಸರ್ಕಲ್ : ಬಿಜೆಪಿ ನಗರ ಘಟಕದ ವತಿಯಿಂದ ಖಾದಿ ಉತ್ಸವ. ಖಾದಿ ಉತ್ಪನ್ನಗಳ ಮಾರಾಟ ಮಳಿಗೆಗೆ ಸಂಸದ ರಾಘವೇಂದ್ರ ಚಾಲನೆ. ಶಿವಮೊಗ್ಗ ಸಿಟಿ : ಮೂಡ ಹಗರಣದಲ್ಲಿ ಆಗಿರುವ ತಪ್ಪು ಮರೆಮಾಚಲು ಸಾಧ್ಯವಿಲ್ಲ. ಯಾರೆ ತಪ್ಪು ಮಾಡಿದ್ದರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಸದ ರಾಘವೇಂದ್ರ ಹೇಳಿಕೆ. ಶಿವಮೊಗ್ಗ ಸಿಟಿ : ಮೂಡ ಹಗರಣದ ವಿರುದ್ಧ ಬಿಜೆಪಿಯ ಹೋರಾಟವನ್ನು ಲಘುವಾಗಿ ಪರಿಗಣಿಸಲಾಗಿತ್ತು. ಈಗ ಸಿದ್ದರಾಮಯ್ಯ ಅವರ ಪತ್ನಿ ಸೈಟ್ ಹಿಂತಿರುಗಿಸಿದ್ದಾರೆ. ಇನ್ನಾದರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಎಂಎಲ್ಸಿ ಡಿ.ಎಸ್.ಅರುಣ್ ಆಗ್ರಹ.
ಇದನ್ನೂ ಓದಿ » ದಿನ ಭವಿಷ್ಯ | ಇವತ್ತು ಈ ರಾಶಿಯವರಿಗೆ ಸ್ತ್ರೀ ದೋಷ, ಹಣಕಾಸು ಸಮಸ್ಯೆ
ತಾಲೂಕು ಸುದ್ದಿಗಳು ಸಕ್ರೆಬೈಲು : ಶಿವಮೊಗ್ಗ ದಸರಾಗೆ ಬಿಡಾರದ ಆನೆಗಳಿಗೆ ಆಹ್ವಾನ. ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಹೊಳೆಹೊನ್ನೂರು : ಆನವೇರಿಯಲ್ಲಿ ತಗಡಿನ ಶೆಡ್ ನಿರ್ಮಾಣದ ವೇಳೆ ವಿದ್ಯುತ್ ಅವಘಡಕ್ಕೆ ರಕ್ಷಿತ್ (22) ಸಾವು. ಕೂಡ್ಲಿಯಲ್ಲಿ ತುಂಗಭದ್ರ ಸಂಗಮದಲ್ಲಿ ಸ್ನಾನಕ್ಕೆ ಇಳಿದಿದ್ದ ಹರ್ಷಿತ್ (23) ನಾಪತ್ತೆ. ಸಾಗರ : ಹೆಗ್ಗೋಡಿನ ನೀನಾಸಂನಲ್ಲಿ ಕಲೆಗಳ ಸಂಗಡ ಮಾತುಕತೆ ಕಾರ್ಯಕ್ರಮದಲ್ಲಿ ಪರಿಸರ ಅಂಕಣಕಾರ ನಾಗೇಶ್ ಹೆಗಡೆ ಭಾಗಿ. ಚಳವಳಿಗಳ ಸಂದರ್ಭ ಕಲೆಗಳ ಮೂಲಕ ಕಲಾವಿದರು ಜನರ ಬಳಿ ಸಮಸ್ಯೆ ಕೊಂಡೊಯ್ಯುತ್ತಿದ್ದರು. ಈಗಲೂ ಕಲೆಗಳು ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿವೆ ಎಂದರು. ರಿಪ್ಪನ್ಪೇಟೆ : ಬಿಜೆಪಿಯಿಂದ ಉಚ್ಛಾಟಿತರಾಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಸಲಹೆ ಪಕ್ಷಕ್ಕೆ ಅಗತ್ಯವಿಲ್ಲ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿಕೆ. ಶಿಮುಲ್ : ಹಾಲು ಉತ್ಪಾದಕರಿಂದ ಖರೀದಿ ದರ 90 ಪೈಸೆ ಇಳಿಸಿದ ಹಾಲು ಒಕ್ಕೂಟ. ಪರಿಷ್ಕೃತ ದರ ಅ.1ರಿಂದಲೇ ಜಾರಿಗೆ ಬಂದಿದೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಯಾವ್ಯಾವ ಗ್ಯಾರಂಟಿ ಯೋಜನೆ ಎಷ್ಟು ಜನರಿಗೆ ತಲುಪುತ್ತಿದೆ? ಇಲ್ಲಿದೆ ಡಿಟೇಲ್ಸ್