ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
GOOD MORNING SHIMOGA, 29 JULY 2024 : ಒಂದೊಂದೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಕಂಪ್ಲೀಟ್ ಸುದ್ದಿ ಕೊಡುವ ಪ್ರಯತ್ನ, ಗುಡ್ ಮಾರ್ನಿಂಗ್ ಶಿವಮೊಗ್ಗ. ಇವತ್ತಿನಿಂದ ನಿಮ್ಮ ಶಿವಮೊಗ್ಗ ಲೈವ್.ಕಾಂನಲ್ಲಿ ನಿತ್ಯ ಪ್ರಕಟವಾಗಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
‘ಮನುಷ್ಯ ತನ್ನ ಕೆಲಸದಿಂದ ಶ್ರೇಷ್ಠನಾಗುತ್ತಾನೆಯೇ ಹೊರತು ಹುಟ್ಟಿನಿಂದ ಅಲ್ಲ.’
ಶಿವಮೊಗ್ಗ ಸಿಟಿ ಸುದ್ದಿ ಮಲವಗೊಪ್ಪ : ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ. ನಾಲೆಗಳಿಗೆ ನೀರು ಹರಿಸಲು ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ. ಪತ್ರಿಕಾ ಭವನ : ಮುಸ್ಲಿಮರನ್ನು ಸಂತೃಪ್ತಿ ಪಡಿಸಲು ರಾಮನಗರದ ಹೆಸರು ಬದಲಾವಣೆಗೆ ಸರ್ಕಾರ ಮುಂದಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. ಹಿಂದುಳಿದ ವರ್ಗಕ್ಕೆ ಮೀಸಲಿಟ್ಟ 312 ಕೋಟಿ ರೂ. ರದ್ದು ಕ್ರಮ ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗುಡ್ಡೇಕಲ್ : ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಿಕೃತ್ತಿಕೆ ಹರೋಹರ ಜಾತ್ರೆ ಸಂಪನ್ನ. ವಿವಿಧೆಡೆಯಿಂದ ಕಾವಡಿ ಹೊತ್ತು ಬಂದು ಹರಕೆ ತೀರಿಸಿದ ಭಕ್ತರು. ಖಾಸಗಿ ಆಸ್ಪತ್ರೆ : ವಯೋಸಹಜ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆರೋಗ್ಯ ವಿಚಾರಿಸಿದ ಶಾಸಕ ಆರಗ ಜ್ಞಾನೇಂದ್ರ. ಮಾಚೇನಹಳ್ಳಿ : ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಗೆ ವೇಳಾಪಟ್ಟಿ ಪ್ರಕಟ. ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ. ಆ.14ರಂದು ಮತದಾನ ನಡೆಯಲಿದೆ.
ತಾಲೂಕು ನ್ಯೂಸ್
ಭದ್ರಾವತಿ : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯ ಸುಧಾರಣೆಗೆ ವಿಐಎಸ್ಎಲ್ ಕಾರ್ಮಿಕರಿಂದ ವಿಶೇಷ ಪೂಜೆ. ಕಾರ್ಖಾನೆ ಗೇಟ್ ಮುಂಭಾಗದ ಗಣಪತಿ ದೇವಸ್ಥಾನದಲ್ಲಿ ಪೂಜೆ.
ಭದ್ರಾವತಿ : ಎಂ.ಸಿ.ಹಳ್ಳಿಯ ಭದ್ರಗಿರಿ ಶಿವಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಜೃಂಭಣೆಯ ಕಾವಡಿ ಜಾತ್ರೆ. ಭದ್ರಾವತಿ, ತರೀಕೆರೆ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಭಕ್ತರು ಭಾಗಿ.
ಸಾಗರ : ಲಿಂಗನಮಕ್ಕಿ ಜಲಾಶಯಕ್ಕೆ ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಭೇಟಿ. ಶರಾವತಿ ನದಿಗೆ ಪೂಜೆ. ಪ್ರವಾಹ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ.
ಸಾಗರ : ಹಳೆ ದ್ವೇಷಕ್ಕೆ ಮನೆ ಕಾಂಪೌಂಡ್ ಒಳಗೆ ಗಾಂಜಾ ಎಸೆದ ಪ್ರಕರಣ ಸಂಬಂಧ ಮೆಸ್ಕಾಂ ಇಂಜಿನಿಯರ್ ಬಂಧಿಸಿದ ಸಾಗರ ಪೊಲೀಸರು. ಹುಲ್ಲತ್ತಿಯ ಜಿತೇಂದ್ರ ಎಂಬುವವರ ಮನೆ ಕಾಂಪೌಂಡ್ ಒಳಗೆ ಗಾಂಜಾ ಎಸೆದ ಆರೋಪವಿತ್ತು.
ತೀರ್ಥಹಳ್ಳಿ : ಭಾರಿ ಮಳೆಯಿಂದಾಗಿ ಅಡಿಕೆ ಬೆಳೆಗಾರರಿಗೆ ಸಂಕಷ್ಟ. ಕೊಳೆ ರೋಗದಿಂದ ಅಡಿಕೆ ಉದುರುತ್ತಿದೆ. ಬೆಳೆಗಾರರಿಗೆ ಕೂಡಲೆ ಪರಿಹಾರ ನೀಡಬೇಕು. ಸಹಕಾರ ವೇದಿಕೆ ಮುಖ್ಯಸ್ಥ ಕಡ್ತೂರು ದಿನೇಶ್ ಆಗ್ರಹ.
ಶಿಕಾರಿಪುರ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಪಠ್ಯೇತರ ಚುಟುವಟಿಕೆ ಘಟಕಗಳ ವಾರ್ಷಿಕೋತ್ಸವ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಾಧನೆಯ ಕನಸು ಕಾಣುವಂತೆ ಸಲಹೆ.
ಸೊರಬ : ಜೆಡಿಎಸ್ ಪಕ್ಷದ ಮುಖಂಡರ ಸಭೆ. ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕೆ.ಅಜ್ಜಪ್ಪ ಒತ್ತಾಯ.
ಹೊಸನಗರ : ರಸ್ತೆ ರಿಪೇರಿಗೆ ಆಡಳಿತಯಂತ್ರ ಗಮನ ಹರಿಸದ ಹಿನ್ನೆಲೆ, ಗ್ರಾಮಸ್ಥರಿಂದಲೆ ದುರಸ್ತಿ. ಹೆಬ್ಬಿಗೆ, ಬರುವೆ ಸಂಪರ್ಕಿಸುವ ಕಲ್ಯಾಣಿಚೌಕ ರಸ್ತೆಯನ್ನು ಗ್ರಾಮಸ್ಥರೆ ದುರಸ್ತಿ ಮಾಡಿದರು.
ಇದನ್ನೂ ಓದಿ ⇓
ಯಾವುದೇ ಕ್ಷಣ ಭದ್ರಾ ಜಲಾಶಯದ ಗೇಟುಗಳು ಓಪನ್, ನಾಲೆಗಳಿಗು ನೀರು