ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019
NEWS 1 : ಶಿವಮೊಗ್ಗ ಸಿಟಿಯ ವಿವಿಧೆಡೆ ಪವರ್ ಕಟ್
ಶಿವಮೊಗ್ಗ : ಸಿಟಿಯ ಶಂಕರಮಠ ರಸ್ತೆ (ವಾಹನಗಳ ಶೋರೂಂ ಹಾಗೂ ರೈಸ್ ಮಿಲ್ ರಸ್ತೆ) ಮಲ್ಲೇಶ್ವರ ನಗರ, ಗುಂಡಪ್ಪ ಶೆಡ್, ಶೇಷಾದ್ರಿಪುರಂ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಡಿ.11 ರಂದು ಬೆಳಿಗ್ಗೆ 10.00 ರಿಂದ ಸಂಜೆ 6.00ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮೆಸ್ಕಾಂನ ತ್ಯಾವರೆಚಟ್ನಹಳ್ಳಿ ವಿ.ವಿ.ಕೇಂದ್ರದಿಂದ ಸರಬರಾಜಾಗುವ ಎಫ್-9 ಫೀಡರ್’ನಲ್ಲಿ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ ಸ್ಪನ್ ಪೋಲ್ ಅಳವಡಿಕೆ ಕಾರ್ಯ ನಡೆಯಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ ಉಪ ವಿಭಾಗ 1ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
NEWS 2 : ಬೀದಿ ಬದಿ ವ್ಯಾಪಾರಿಗಳ ಸಮಿತಿಗೆ ಎಲೆಕ್ಷನ್
ಶಿವಮೊಗ್ಗ ಮಹಾನಗರ ಪಾಲಿಕೆ, ಭದ್ರಾವತಿ, ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ, ಸೊರಬ, ಹೊಸನಗರ, ತೀರ್ಥಹಳ್ಳಿ ಹಾಗೂ ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುತಿಸಲಾದ ಬೀದಿ ಬದಿ ವ್ಯಾಪಾರಿಗಳಿಂದ ಬೀದಿ ಬದಿ ವ್ಯಾಪಾರಿ ಸಮಿತಿಗೆ ಆಯ್ಕೆ ಮಾಡಲು ಡಿ.09 ರಿಂದ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಡಿ. 21 ರಂದು ಮತದಾನ ನಡೆಯಲಿದೆ.
ಪ್ರತಿ ಸಮಿತಿಗೆ 10 ಜನರನ್ನು ಆಯ್ಕೆ ಮಾಡಲು ಪ.ಜಾ.-01, ಪ.ಪಂ.-01, ಹಿಂ.ವ.-01, ಅ.ಸಂ-01, ವಿಕಲಚೇತನ-01, ಮಹಿಳೆ-03, ಸಾಮಾನ್ಯ-02 ಸ್ಥಾನಗಳಿಗೆ ಡಿ.09 ರಿಂದ 13 ರ ಬೆಳಿಗ್ಗೆ 11.30ರಿಂದ ಮ.3.00ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಡಿ. 14 ರಂದು ನಾಮಪತ್ರ ಪರಿಶೀಲನೆ ಹಾಗೂ ಸಿಂಧುವಾದ ನಾಮಪತ್ರಗಳ ಪಟ್ಟಿ ಪ್ರಕಟಣೆ ಮಾಡಲಾಗುವುದು. ಡಿ. 15 ರಂದು ನಾಮಪತ್ರಗಳ ಹಿಂಪಡೆಯುವುದು ಹಾಗೂ ಸಂಜೆ 5.30ಕ್ಕೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ ಮಾಡಲಾಗುವುದು. ಅಗತ್ಯ ಬಿದ್ದಲ್ಲಿ ಡಿ.21 ರಂದು ಬೆಳಿಗ್ಗೆ 9.30 ರಿಂದ ಸಂಜೆ 4.00 ರವರೆಗೆ ಗುರುತಿಸಲಾದ ಮತಗಟ್ಟೆಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Due to Maintenance work in Mescom sub division power cut in various parts of Shimoga.