ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 11 ಅಕ್ಟೋಬರ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅರಣ್ಯ ಇಲಾಖೆ ರೇಂಜ್ ಆಫೀಸರ್ ಒಬ್ಬರಿಗೆ ಬಿಜೆಪಿ ಯುವ ಮೋರ್ಚಾ ಮುಖಂಡ ಎಂದು ಪರಿಚಿಯಸಿಕೊಂಡ ವ್ಯಕ್ತಿಯೊಬ್ಬರು ಅವಾಚ್ಯವಾಗಿ ನಿಂದಿಸಿರುವ ಆಡಿಯೋ ವೈರಲ್ ಆಗಿದೆ. ಸಸ್ಪೆಂಡ್ ಆಗುವುದು ಗ್ಯಾರೆಂಟಿ, ಮನೆಗೆ ನುಗ್ಗುತ್ತೇವೆ ಎಂದು ಬೆದರಿಕೆ ಹಾಕಿರುವುದು ಆಡಿಯೋದಲ್ಲಿದೆ. ಇದು ಪರಿಸರವಾದಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೆರಳಿಸಿದೆ.
ಗಾಜನೂರಿನ ಗಣಪತಿ ದೇವಸ್ಥಾನದ ಮುಂದೆ ಇದ್ದ ಮಾವಿನ ಮರವನ್ನು ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಕಡಿಸಿದ್ದರು. ಹಾಗಾಗಿ ಯೋಜನೆಯ ಎಇಇ ಕುಮಾರಸ್ವಾಮಿ ಅವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲು ಮಾಡಿತ್ತು.
ಈ ವಿಚಾರವಾಗಿ ಶಿವಮೊಗ್ಗದ ಶಂಕರ ಅರಣ್ಯ ವಲಯ ಆಫೀಸರ್ ಜಯೇಶ್ ಅವರಿಗೆ ಕರೆ ಮಾಡಿದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರಿರಾಜ್, ಬೆದರಿಕೆ ಹಾಕಿದ್ದಾರೆ. ಇದರ ಆಡಿಯೊ ವೈರಲ್ ಆಗಿದೆ.
ಆಡಿಯೋದಲ್ಲಿ ಏನಿದೆ? ಏನೆಲ್ಲ ಬೆದರಿಕೆ ಹಾಕಲಾಗಿದೆ?
ಪರಿಸರವಾದಿಗಳಿಂದ ತೀವ್ರ ಆಕ್ರೋಶ
ಇನ್ನು, ಬಿಜೆಪಿ ಮುಖಂಡ ಗಿರಿರಾಜ್ ಬೆದರಿಕೆಗೆ ಅರಣ್ಯ ಇಲಾಖೆ ಅಧಿಕಾರಿಗಳು, ಪರಿಸರವಾದಿಗಳನ್ನು ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್’ಗಳನ್ನು ಪ್ರಕಟಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.