ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಜುಲೈ 2020
ಈ ಬಾರಿ ಆನ್ಲೈನ್ ಮೂಲಕ ಘಟಿಕೋತ್ಸವ ನಡೆಸಲು ಕುವೆಂಪು ವಿಶ್ವವಿದ್ಯಾಲಯ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ವೀರಭದ್ರಪ್ಪ ತಿಳಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮತ್ತೊಂದೆಡೆ ಈ ಬಾರಿ ಚಿನ್ನದ ಪದಕ ಸ್ವರೂಪವನ್ನು ಬದಲಾಯಿಸಲಾಗಿದೆ. ಕೊರಳಿಗೆ ಹಾಕುವ ಪದಕದ ಬದಲು ಶೋಕೇಸ್ನಲ್ಲಿ ಇರಿಸಲು ಅನುಕೂಲ ಆಗುವಂತಹ ಶೀಲ್ಡ್ ಮಾದರಿಯನ್ನು ಸಿದ್ಧಪಡಿಸಲಾಗಿದೆ. ಇವತ್ತು ಸುದ್ದಿಗೋಷ್ಟಿಯಲ್ಲಿ ಹೊಸ ಮಾದರಿಯ ಪದಕವನ್ನು ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ವೆಂಕಟೇಶ್ವರಲು ಪ್ರದರ್ಶಿಸಿದರು.
ಚಿನ್ನ ಬಾಚಿಕೊಳ್ಳುವಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ
ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ 119 ಚಿನ್ನದ ಪದಕ ನೀಡಲಾಗುತ್ತದೆ. ಈ ಬಾರಿ 67 ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸಿದ್ದಾರೆ. ಈ ಪೈಕಿ 54 ವಿದ್ಯಾರ್ಥಿನಿಯರಿದ್ದು, ಮೇಲಗೈ ಸಾಧಿಸಿದ್ದಾರೆ. ಇನ್ನು, 24 ನಗದು ಪುರಸ್ಕಾರಗಳಲ್ಲಿ 15 ವಿದ್ಯಾರ್ಥಿನಿಯರ ಪಾಲಾಗಿದ್ದು, ಉಳಿದ ನಾಲ್ಕು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಪದಕ ಗೆದ್ದವರಾರು? ಎಷ್ಟೆಷ್ಟು ಪದಕ ಗಳಿಸಿದ್ದಾರೆ?
ರಂಗನಾಥ.ಹೆಚ್ | ಎಂ.ಎ ಕನ್ನಡ | ಜ್ಞಾನ ಸಹ್ಯಾದ್ರಿ, ಶಂಕರಘಟ್ಟ | 10 ಚಿನ್ನದ ಪದಕ, 3 ನಗದು ಬಹುಮಾನ
ಸಂಚಿತಾ ಎಂ.ಆರ್ | ಎಂ.ಎಸ್ಸಿ ಜೈವಿಕ ತಂತ್ರಜ್ಞಾನ | ಜ್ಞಾನ ಸಹ್ಯಾದ್ರಿ, ಶಂಕರಘಟ್ಟ | 5 ಚಿನ್ನದ ಪದಕ
ಬೀಬಿ ರುಖಯ್ಯಾ | ಬಿ.ಕಾಂ | ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಆಡ್ವಾನ್ಸ್ಡ್ ಸ್ಟಡೀಸ್, ಶಿವಮೊಗ್ಗ | 5 ಚಿನ್ನದ ಪದಕ
ವಾಣಿ.ಹೆಚ್ | ಎಂ.ಎ ಸಮಾಜಶಾಸ್ತ್ರ | 4 ಚಿನ್ನದ ಪದಕ
ಪೂಜಾ ಎನ್.ಜಿ | ಎಂ.ಎಸ್ಸಿ ಪರಿಸರ ವಿಜ್ಞಾನ | 4 ಚಿನ್ನದ ಪದಕ
ಅಮೃತಾ ಕೆ.ವಿ | ಎಂ.ಬಿ.ಎ | 4 ಚಿನ್ನದ ಪದಕ
ಸೀಮಾ ಎಸ್.ಡಿ | ಎಂ.ಎಸ್ಸಿ ಗಣಿತಶಾಸ್ತ್ರ | 3 ಚಿನ್ನದ ಪದಕ ಮತ್ತು 3 ನಗದು ಬಹುಮಾನ
ಅಶ್ವಿನಿ ಕೆ.ಆರ್ | ಎಂ.ಸಿ.ಎ | 3 ಚಿನ್ನದ ಪದಕ ಮತ್ತು 1 ನಗದು ಬಹುಮಾನ
ನವೀನ ಬಿ.ಎಂ | ಎಂ.ಎಸ್ಸಿ ರಸಾಯನ ಶಾಸ್ತ್ರ | 3 ಚಿನ್ನದ ಪದಕ
ದೀಪ್ತಿ ಪಿ | ಎಂ.ಎ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ | 3 ಚಿನ್ನದ ಪದಕ
ಶಾಶ್ವತಿ ಹೆಚ್.ಎಸ್ | ಎಂ.ಎಸ್ಸಿ ಸಸ್ಯಶಾಸ್ತ್ರ | 3 ಚಿನ್ನದ ಪದಕ
23 ಸಾವಿರ ವಿದ್ಯಾರ್ಥಿಗಳಿಗೆ ಪದವಿ
30ನೇ ಘಟಿಕೋತ್ಸವದಲ್ಲಿ ಒಟ್ಟು 23,734 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುತ್ತದೆ. ಈ ಪೈಕಿ 9,443 ವಿದ್ಯಾರ್ಥಿಗಳು, 14,289 ವಿದ್ಯಾರ್ಥಿನಿಯರಿದ್ದಾರೆ.
ಇನ್ನು, ಈ ಬಾರಿ 194 ಮಂದಿ ಪಿಹೆಚ್ಡಿ ಪ್ರಧಾನ ಮಾಡಲಾಗುತ್ತದೆ. ಈ ಪೈಕಿ 140 ವಿದ್ಯಾರ್ಥಿಗಳು, 54 ವಿದ್ಯಾರ್ಥಿನಿಯರಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]