ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 11 MAY 2024
PU College : ರಾಜ್ಯಾದ್ಯಂತ ಎಲ್ಲ ಪದವಿ ಪೂರ್ವ ಕಾಲೇಜುಗಳು ಜೂನ್ 1 ರಿಂದ ಆರಂಭವಾಗಲಿವೆ. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಮೇ 13ರಿಂದ ಪ್ರಥಮ ಪಿಯುಸಿಗೆ ಪ್ರವೇಶ ಪ್ರಕ್ರಿಯೆಗಳು ನಡೆಯಲಿವೆ. ದಂಡ ಶುಲ್ಕವಿಲ್ಲದೇ ಜೂನ್ 14ರ ಒಳಗೆ ಪ್ರವೇಶ ಪಡೆಯಬಹುದು. ದ್ವಿತೀಯ ಪಿಯು ಸೇರಿದಂತೆ ಜೂನ್ 29ರ ಒಳಗೆ ಎಲ್ಲ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜೂನ್ 1ರಿಂದ ತರಗತಿಗಳು ಆರಂಭವಾಗಲಿದೆ.
ಪ್ರವೇಶ ಶುಲ್ಕಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಇದ್ದಂತೆ ಮುಂದುವರಿಯಲಿದೆ. ಇನ್ನು, ಮಾರ್ಗಸೂಚಿಯಂತೆ ಎಲ್ಲ ಕಾಲೇಜುಗಳು ಮೀಸಲಾತಿ ಅನ್ವಯ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು
ದಸರಾ, ಬೇಸಿಗೆ ರಜೆಯ ದಿನಾಂಕ
ಅಕ್ಟೋಬರ್ 2 ರಿಂದ ಅ. 18ರವರೆಗೆ ಪಿಯು ಕಾಲೇಜುಗಳಿಗೆ ದಸರಾ ರಜೆ ಇದೆ. ಅ.19ರಿಂದ 2025ರ ಮಾರ್ಚ್ 31ರವರೆಗೆ ಎರಡನೆ ಅವಧಿಯ ತರಗತಿಗಳು ನಡೆಯಲಿವೆ. ಏ.1ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ ಎಂದು ಪಿಯು ನಿರ್ದೇಶನಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ತಾಪಮಾನ ತುಸು ಇಳಿಕೆ, ಅಲ್ಲಲ್ಲಿ ಮಳೆ ಸಾಧ್ಯತೆ, ಇವತ್ತು ಹೇಗಿದೆ ಹವಾಮಾನ? ಇಲ್ಲಿದೆ ರಿಪೋರ್ಟ್
LATEST NEWS
- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

- ಶಿವಮೊಗ್ಗದ ಸವಾರರೆ ಹುಷಾರ್, ಬೈಕ್ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?

- ಭದ್ರಾವತಿ ಹೊಸ ಸಿದ್ಧಾಪುರದಲ್ಲಿ ಮನೆಗೆ ನುಗ್ಗಿದ ಕಳ್ಳರು, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಕಳವು

- ಇವತ್ತಿನ ₹98,140ಕ್ಕೆ ತಲುಪಿದೆ ಅಡಿಕೆ | 12 ಫೆಬ್ರವರಿ 2026 | ಅಡಿಕೆ ಧಾರಣೆ

- ಸಾರ್ವಜನಿಕರೆ ಎಚ್ಚರ, ಹೊಸನಗರದಲ್ಲಿ ಮೆಸ್ಕಾಂ ಅಲರ್ಟ್ ಪ್ರಕಟ, ಏನಿದು?

About The Editor
ನಿತಿನ್ ಆರ್.ಕೈದೊಟ್ಲು






