ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHANKARAGHATTA | 27 ನವೆಂಬರ್ 2019
ಗಾಂಧೀ ಮತ್ತು ಅಂಬೇಡರ್ ನಡುವೆ ಭಾರತಕ್ಕೆ ಆಯ್ಕೆಗಳಿಲ್ಲ. ಅವರಿಬ್ಬರೂ ದೇಶಕ್ಕೆ ಅತ್ಯಗತ್ಯ ಎಂದು ಖ್ಯಾತ ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾ ಅಭಿಪ್ರಾಯಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಶಂಕರಘಟ್ಟದ ಜ್ಞಾನ ಸಹ್ಯಾದ್ರಿಯ ಪ್ರೊ. ಎಸ್.ಪಿ.ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ ದಿವಂಗತ ಡಾ. ಶಾಂತಿನಾಥ ದೇಸಾಯಿ ದತ್ತಿ ಉಪನ್ಯಾಸದಲ್ಲಿ ಡಾ. ಗುಹಾ ಅವರು ‘ಸಂವಹನಕಾರರಾಗಿ ಗಾಂಧಿ’ ವಿಷಯ ಕುರಿತು ಮಾತನಾಡಿದರು.
ಮಹಾತ್ಮ ಗಾಂಧೀಜಿ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್, ಭಾರತ ನೀಡಿದ ವಿಶ್ವಮಾನ್ಯ ಚಿಂತಕರಾಗಿದ್ದಾರೆ. ಅವರಿಬ್ಬರಲ್ಲಿ ಯಾರು ಬೇಕೆಂಬ ಆಯ್ಕೆಯ ಚರ್ಚೆಗಳು ಬಾಲಿಶವಾಗಿವೆ. ಒಂದು ವೇಳೆ ಧರ್ಮನಿರಪೇಕ್ಷ ಗಾಂಧೀ ಮತ್ತು ಬಹು ಸಂಖ್ಯಾತವಾದಿ ಸಾವರ್ಕರ್ ನಡುವೆ ಆಯ್ಕೆ ಪ್ರಶ್ನೆ ಬಂದರೆ ಅದು ಆಯಾ ಸೈದ್ಧಾಂತಿಕ ಧೋರಣೆಗಳಿಗೆ ಸಂಬಂಧಪಟ್ಟ ವಿಚಾರವಾಗಿರುತ್ತದೆ. ಆದರೆ ಭಾರತಕ್ಕೆ ಅಂಬೇಡ್ಕರ್ ಮತ್ತು ಗಾಂಧೀಯ ಅವಶ್ಯಕತೆ ಪ್ರಶ್ನಾತೀತ ಎಂದರು.
ಅಹಿಂಸಾ ತತ್ವ ಅನುಸರಣೆ, ಸುಸ್ಥಿರ ಗುಡಿ ಕೈಗಾರಿಕೆ, ಅಸ್ಪೃಶ್ಯತೆ ನಿವಾರಣೆ ಮತ್ತು ಹಿಂದೂ-ಮುಸ್ಲೀಂ ಸೌಹಾರ್ದತೆಗಳು ಸ್ವರಾಜ್ಯ ನಿರ್ಮಾಣದ ನಾಲ್ಕು ಆಧಾರ ಸ್ಥಂಬಗಳು ಎಂದು 1922ರಲ್ಲಿ ಗಾಂಧೀ ಪ್ರತಿಪಾದಿಸಿದರು. ಅಂತಯೇ ತಮ್ಮ ಹೆಸರಿನಲ್ಲಿ ನಡೆದ ಕೋಮುಗಲಭೆ, ಅಹಿಂಸಾ ಘಟನೆಗಳ ಹೊಣೆಹೊತ್ತು, ಘಟನಾ ಸ್ಥಳಕ್ಕೆ ತೆರಳಿ ಸಮಸ್ಯೆ ಶಮನಗೊಳಿಸಿ, ಸಹೋದರತೆ ಬೆಸೆಯುವ ಮೂಲಕ ಗಾಂಧಿ ತಮ್ಮ ರಾಜಕೀಯ ಮುತ್ಸದಿತನವನ್ನು ಮೆರೆಯುತ್ತಿದ್ದರು ಎಂದು ಉಲ್ಲೇಖಿಸಿದರು.
ಹಿಂಜರಿಕೆ ಮನೋಭಾವದ ಗಾಂಧಿ ನಿರರ್ಗಳ ಮಾತಗಾರರಾಗಿರಲಿಲ್ಲ. ಗೊಣಗಾಟದ ರೀತಿಯಲ್ಲಿ ತಪ್ಪನ್ನು ಎತ್ತಿತೋರಿ ಮಾತನಾಡುವುದು ಗಾಂಧಿ ಶೈಲಿ. ಆದರೆ ಅವರು ಬಹುಮುಖ, ಬಹುಭಾಷಾ ಬರಹಗಾರ, ತೀವ್ರ ತೆರನಾದ ಚಿಂತಕ ಮತ್ತು ಭಿನ್ನ ಶೈಲಿಯ ಸಂವಹನಕಾರರಾಗಿದ್ದರು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ವಿಭಾಗದ ಮುಖ್ಯಸ್ಥೆ ಡಾ. ರೇಚೆಲ್ ಬಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಭಾಗದ ಡಾ. ದತ್ತಾತ್ರೇಯ, ಡಾ. ರಾಮಪ್ರಸಾದ್ ಸೇರಿದಂತೆ ವಿವಿಯ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾರ್ಥಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Ramachandra Guha participated in the seminar in Kuvempu University Shankaraghatta. Guha spoke about Gandhi and Ambedkar.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422