ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

Published On : ಮಾರ್ಚ್ 28, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಕೋಲಾಟ ಮತ್ತು ಇತರೆ ಜಾನಪದ ಮತ್ತು ಸಾಂಸ್ಕೃತಿಕ ಕಲಾ ತಂಡಗಳ ಕಲಾ ವೈಭವ ಮೇರೆಮೀರಿತ್ತು. (Sahyadri Siri)

ಸಹ್ಯಾದ್ರಿ ಕಲಾ ಕಾಲೇಜು 18 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಹ್ಯಾದ್ರಿ ಸಿರಿ-2026 ಸಾಂಸ್ಕೃತಿಕ ಸ್ಪರ್ಧೆಗಳ ಉತ್ಸವ ಅಂಗವಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ 16 ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಿದರು.

Sahyadri-Siri-Programme-at-Shimoga-Sahyadri-College

ಸ್ಪರ್ಧೆಗಳ ಆರಂಭಕ್ಕೂ ಮುನ್ನ ಎಂಆರ್‌ಎಸ್‌ ವೃತ್ತದಿಂದ ಸಹ್ಯಾದ್ರಿ ಕಲಾ ಕಾಲೇಜುವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯ ಮುಂಚೂಣಿಯಲ್ಲಿ ಅಲಂಕೃತ ಎತ್ತಿನ ಗಾಡಿ ನೋಡುಗರ ಗಮನ ಸೆಳೆಯಿತು. ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉತ್ಸವಕ್ಕೆ ಪ್ರಾಂಶುಪಾಲ ಪ್ರೊ. ಎಸ್.ಸಿರಾಜ್ ಅಹ್ಮದ್ ಚಾಲನೆ ನೀಡಿದರು.

ಇದನ್ನೂ ಓದಿ – ಕಾರು ಚೇಸ್‌ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಕೋಲಾಟದ ಮೂಲಕ ವಿದ್ಯಾರ್ಥಿಗಳು ಕಲೆಯನ್ನು ಪ್ರದರ್ಶಿಸಿದರು. ಸ್ಪರ್ಧೆಗಾಗಿ ಅತ್ಯಾಕರ್ಷಕ ಉಡುಪು ಅಲಂಕರಿಸಿಕೊಂಡಿದ್ದ ವಸ್ತ್ರಗಳಿಂದ ವಿದ್ಯಾರ್ಥಿಗಳು ಕಲಾ ಮೆರವಣಿಗೆ ನಡುವೆಯೆ ಗುಂಪು ಗುಂಪಾಗಿ ಸೆಲ್ಪಿಗಳನ್ನು ಕ್ಲಿಕ್ಕಿಸಿಕೊಂಡರು. ಜಾನಪದ ಕಲಾ ತಂಡಗಳ

Sahyadri-Siri-Programme-at-Shimoga-Sahyadri-College

ತಾಳಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು. ವಿದ್ಯಾರ್ಥಿಗಳ ಜತೆಗೆ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರೂ ವಿವಿಧ ಪೋಷಾಕುಗಳನ್ನು ತೊಟ್ಟು ನೃತ್ಯ ಮಾಡಿ ಗಮನ ಸೆಳೆದರು.

ಕಾಲೇಜು ಸಭಾಂಗಣದಲ್ಲಿ ಹಿನ್ನೆಲೆ ಗಾಯಕಿ ಸುರೇಖಾ ಹೆಗಡೆ ಸಹ್ಯಾದ್ರಿ ಸಿರಿ-2026 ಉದ್ಘಾಟಿಸಿದರು. ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಪ್ರೊ. ಎನ್.ರಾಜೇಶ್ವರಿ, ಕಾರ್ಯಕ್ರಮ ಸಂಚಾಲಕ ಹಾಗೂ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್, ವಿ.ಹೆಚ್‌. ಕರಿಬಸಪ್ಪ, ನಂದಿತಾ, ಜಾಹ್ನವಿ, ಪ್ರಣತಿ ಮುಂತಾದವರು ಇದ್ದರು.

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 28, 2026

Leave a Comment