ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 12 ಅಕ್ಟೋಬರ್ 2019
ಗ್ರಾಹಕರೊಬ್ಬರು ಆನ್ಲೈನ್ ಮೂಲಕ ‘ಯುಆರ್ ಎಸ್.ಜಿ.ಪ್ಲೇಯರ್ ಎಡಿಶನ್ ಇಂಗ್ಲಿಷ್ ವಿಲ್ಲೋ ಕ್ರಿಕೆಟ್ ಬ್ಯಾಟ್ ಆರ್ಡರ್ ಮಾಡಿದ್ದರು. ಆದರೆ, ಕೋರಿಯರ್ ಮೂಲಕ ಮನೆಗೆ ಬಂದಿದ್ದು ಮಾತ್ರ ಕಪ್ಪು ಕೋಟು!
ಫ್ಲಿಪ್’ಕಾರ್ಟ್’ನ ಆನ್ಲೈನ್ ಆಫರ್ ಬೆಲೆಯಲ್ಲಿ ೬,೦೭೪ ಮೌಲ್ಯದ ಬ್ಯಾಟ್ ಆರ್ಡರ್ ಮಾಡಲಾಗಿದ್ದು, ೨೦೧೭ ಏಪ್ರಿಲ್ ೧೦ರಂದು ಕೋರಿಯರ್ ಮೂಲಕ ಬೇರೊಂದು ವಸ್ತು ಕಳುಹಿಸಲಾಗಿತ್ತು.
ಇದನ್ನು ಕಂಡು ದಂಗಾದ ಗ್ರಾಹಕ ವಾದಿರಾಜರಾವ್ ಅವರು ಫ್ಲಿಪ್’ಕಾರ್ಟ್ ಕಂಪೆನಿಯ ಗಮನಕ್ಕೆ ತಂದಿದ್ದರು. ಆದರೆ, ಸೂಕ್ತ ಸ್ಪಂದನೆ ಸಿಗದೇ ಇದ್ದರಿಂದ ಸೇವಾನ್ಯೂನ್ಯತೆಗೆ ಪರಿಹಾರ ಕೋರಿ ೨೦೧೯ ಮೇ ೧೩ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮೆಟ್ಟಿಲೇರಿದ್ದಾರೆ.
ಆರು ಸಾವಿರದ ಬ್ಯಾಟ್’ಗೆ ಒಂದು ಲಕ್ಷ ಪರಿಹಾರ
ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯ ಅಧ್ಯಕ್ಷೆ ಸಿ.ಎಂ. ಚಂಚಲ ಮತ್ತು ಎಚ್.ಮಂಜುಳಾ ಅವರ ಪೀಠವು ಗ್ರಾಹಕರು ಆರ್ಡರ್ ಮಾಡಿದ್ದ ಸಾಮಗ್ರಿಯನ್ನು ಆರು ವಾರದೊಳಗೆ ನೀಡಬೇಕು. ಅವರಿಗಾದ ಮಾನಸಿಕ ಒತ್ತಡ, ವ್ಯಾಜ್ಯ ಹೂಡಿದ ಖರ್ಚು ವೆಚ್ಚ ಸಲುವಾಗಿ ೫೦ ಸಾವಿರ ರೂ. ಪರಿಹಾರ ನೀಡಬೇಕು.
ಒಂದುವೇಳೆ, ನೀಡುವಲ್ಲಿ ತಪ್ಪಿದ್ದಲ್ಲಿ ವಾರ್ಷಿಕ ಶೇ.೧೦ರಷ್ಟು ಹೆಚ್ಚಿನ ಬಡ್ಡಿಯನ್ನೂ ಕೊಡುವಂತೆ ಆದೇಶಿಸಿದೆ. ಜತೆಗೆ, ಮೂರು ಜನ ಎದುರುದಾರರು ತಮ್ಮ ವ್ಯವಹಾರದಲ್ಲಿ ಅನುಚಿತ ವ್ಯಾಪಾರ ಕ್ರಮ ಅಳವಡಿಸಿಕೊಂಡು ಗ್ರಾಹಕರಿಗೆ ಮೋಸ ಮಾಡಿದ್ದಾರೆಂಬ ಕಾರಣಕ್ಕೆ ೫೦ ಸಾವಿರ ದಂಡವನ್ನು ಗ್ರಾಹಕರ ಭವಿಷ್ಯ ನಿಧಿಗೆ ಆರು ವಾರದೊಳಗೆ ನೀಡಬೇಕು. ಕಟ್ಟುವಲ್ಲಿ ತಪ್ಪಿದರೆ ಕಾನೂನು ರೀತ್ಯ ಕ್ರಮವನ್ನು ತೆಗೆದುಕೊಳ್ಳಬೇಕೆಂದು ವೇದಿಕೆಯ ಸಹಾಯಕ ಆಡಳಿತಾಧಿಕಾರಿಗಳಿಗೆ ಆದೇಶಿಸಿ ವೇದಿಕೆ ಅಧ್ಯಕ್ಷರು ತೀರ್ಪು ನೀಡಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422