
ಶಿವಮೊಗ್ಗ ಲೈವ್.ಕಾಂ | SHIMOGA | 3 ಮೇ 2020
ಜಿಲ್ಲೆಯಾದ್ಯಂತ ಮೇ 4ರಿಂದ ಮದ್ಯದಂಗಡಿ ಬಾಗಿಲು ತೆಗೆಯಲಾಗುತ್ತದೆ. ಈ ಹಿನ್ನೆಯಲ್ಲಿ ಇವತ್ತು, ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಮದ್ಯದಂಡಿಗೆ ಮಾಲೀಕರ ಸಭೆ ಕರೆಯಲಾಗಿತ್ತು. ಡಿಎಆರ್ ಸಭಾಂಗಣದಲ್ಲಿ ಸಭೆ ನಡೆಸಿ, ಹಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಅಬಕಾರಿ ಇಲಾಖೆ ಉಪ ಆಯುಕ್ತ ಕ್ಯಾ.ಅಜಿತ್ ಕುಮಾರ್, ದೊಡ್ಡಪೇಟೆ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ವಸಂತ ಕುಮಾರ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಅಬಕಾರಿ ಇಲಾಖೆ ಸೂಚನೆ ಏನು?
ಪರೀಕ್ಷಾರ್ಥವಾಗಿ ಅವಕಾಶ ನೀಡಲಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಉಳಿದ ಲೈಸೆನ್ಸ್ ಹೊಂದಿರುವ ಮದ್ಯದಂಗಡಿಳನ್ನು ಓಪನ್ ಮಾಡಲಾಗುತ್ತದೆ.
ಈಗಾಗಲೆ ಮದ್ಯದಂಗಡಿಗಳಿಗೆ ತಿಳಿವಳಿಕೆ ಪತ್ರ ಕಳುಹಿಸಲಾಗಿದೆ. ಅದರಂತೆ ಮುಂಜಾಗ್ರತ ಕ್ರಮ ಅನುಸರಿಸದೆ ಇದ್ದರೆ ಅಂಗಡಿ ಬಾಗಿಲು ತೆಗೆಯಲು ಬಿಡುವುದಿಲ್ಲ.
ಇವತ್ತು ಸಂಜೆಯಿಂದಲೇ ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ಆರಂಭಿಸಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಮತ್ತೊಂದು ಸುತ್ತು ಪರಿಶೀಲನೆ ನಡೆಯಲಿದೆ.

ಅಹಿತಕರ ಘಟನೆಗಳು ಸಂಭವಿಸಿದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗುತ್ತದೆ. ಇದರಿಂದ ಈಗ ನೀಡಿರುವ ಕಾಲವಕಾಶ ಕಡಿತಗೊಳ್ಳಬಹುದು.
ರಾಜ್ಯ ಸರ್ಕಾರ ಏಪ್ರಿಲ್ 1ರಿಂದ ಹೊಸ ದರ ನಿಗದಿಪಡಿಸಿದೆ. ಅದರಂತೆ ಮದ್ಯ ಮಾರಾಟ ಮಾಡಬೇಕು.
ಯಾರಿಗೆಷ್ಟು ಮದ್ಯ ಮಾರಾಟ ಮಾಡಬೇಕು?
ಒಬ್ಬರಿಗೆ ಆರು ಕ್ವಾರ್ಟರ್ ಅಥವಾ 90 ಎಂಎಲ್‍ನ ಹತ್ತು ಪೌಚ್ ಅಥವಾ ಒಂದು ಫುಲ್ ಬಾಟಲ್ ಮತ್ತು ಒಂದು ಅರ್ಧ ಬಾಟಲ್ ಮಾರಾಟ ಮಾಡಬಹುದು. ಬಿಯರ್ ಪ್ರಿಯರಿಗಾದರೆ ನಾಲ್ಕು ಫುಲ್ ಬಾಟಲಿ ಬಿಯರ್ ಅಥವಾ 6 ಪಿಂಟ್ ಮಾರಾಟ ಮಾಡಬಹುದು.

ನಿಗದಿಗಿಂತಲೂ ಹೆಚ್ಚಿನ ಪ್ರಮಾಣದ ಮದ್ಯ ಮಾರಾಟ ನಿಷೇಧವಿದೆ. ಕೌಂಟರ್ ಸೇಲ್ ಮಾಡಬಹುದು. ಇದರ ಹೊರತು ಹಳ್ಳಿಗಳಿಗೆ ಮಾರಾಟ ಮಾಡಲು, ಮಿಲಿಟರಿ ಹೊಟೇಲ್‍ಗಳಿಗೆ ಪೂರೈಸಲು ಅವಕಾಶವಿಲ್ಲ.
ಪೊಲೀಸರು ನೀಡಿದ ಸೂಚನೆಗಳೇನು?
ಅಂಗಡಿಯಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಆನ್ ಇರಬೇಕು. ಕೆಲವು ಅಂಗಡಿಗಳಿಗೆ ಬಾಗಿಲವರೆಗೆ ಫೋಕಸ್ ಆಗುವಂತೆ ಸಿಸಿ ಕ್ಯಾಮರಾ ಇದೆ. ನಾಳೆಯಿಂದ ಹೊರಗೆ ನಿಂತ ಕ್ಯೂ ಕಾಣುವಂತೆ ಫೋಕಸ್ ಆಗಬೇಕು.
ಮದ್ಯದಂಗಡಿ ಪಕ್ಕದಲ್ಲಿ ಕೆಲವರು ಗೂಡಂಗಡಿಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಇಂತಹ ಗೂಡಂಗಡಿಗಳನ್ನು ತೆರೆಯುವಂತಿಲ್ಲ.
ಮಾರಾಟ ಮಾಡುವ ಸಿಬ್ಬಂದಿಗಳಿಗೆ ಹ್ಯಾಂಡ್ ಗ್ಲೌಸ್ ಕಡ್ಡಾಯವಾಗಿದೆ. ಮಿಲಿಟರಿ ಹೊಟೆಲ್, ಡಾಬಾಗಳಲ್ಲಿ ಸಿಕ್ಕಬಿದ್ದರೆ ವಿಚಾರಣೆ ಬಳಿಕ ಬ್ಯಾಚ್ ನಂಬರ್ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]