ಶಿವಮೊಗ್ಗ ಲೈವ್.ಕಾಂ | SHIMOGA | 26 ನವೆಂಬರ್ 2019
NEWS 1 | ಖಾಸಗಿ ಬಸ್ ನಿಲ್ದಾಣದಲ್ಲಿ ಮಗು ಪೋಷಣೆ ಕೊಠಡಿ
ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ರೋಟರಿ ಕ್ಲಬ್ ಉತ್ತರದ ವತಿಯಿಂದ ಮಗು ಪೋಷಣೆ ಕೊಠಡಿ ತೆರೆಯಲಾಗಿದೆ. ರೋಟರಿ ಜಿಲ್ಲಾ ಗವರ್’ನರ್ ಬಿ.ಎನ್.ರಮೇಶ್ ಕೊಠಡಿ ಉದ್ಘಾಟಿಸಿದರು. ಮಹಾನಗರ ಪಾಲಿಕೆ ಕಮಿಷನರ್ ಚಿದಾನಂದ ವಠಾರೆ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
NEWS 2 | ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಭಗವದ್ಗೀತಾ ಸಪ್ತಹ
ಶಿವಮೊಗ್ಗ : ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ, ಭಗವದ್ಗೀತಾ ಅಭಿಯಾನ ಕರ್ನಾಟಕದ ವತಿಯಿಂದ ನ.29ರಿಂದ ಡಿ.7ರವರೆಗೆ ರವೀಂದ್ರನಗರ ಗಣಪತಿ ದೇವಸ್ಥಾದನಲ್ಲಿ ಶ್ರೀ ಭಗವದ್ಗೀತಾ ಪ್ರವಚನ ಸಪ್ತಾಹ ನಡೆಯಲಿದೆ ಎಂದು ಉಪನ್ಯಾಸಕ ಕೆ.ವಿ.ಶಿವಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನ.29ರಂದು ಸಂಜೆ 5.30ಕ್ಕೆ ಸಪ್ತಾಹಕ್ಕೆ ಚಾಲನೆ ನೀಡಲಾಗುತ್ತದೆ ಎಂದರು. ಜಿಲ್ಲಾ ಸಮಿತಿ ಸಂಚಾಲಕ ಪಿ.ಪಿ.ಹೆಗಡೆ, ದೇವಸ್ಥಾನ ಸಮಿತಿ ಅಧ್ಯಕ್ಷ ಉಮಾಪತಿ ಸುದ್ದಿಗೋಷ್ಠಿಯಲ್ಲಿದ್ದರು.
NEWS 3 | ಶ್ರೀಗಳಿಗೆ ವಿಶೇಷ ಪೂಜೆ
ದೈವಜ್ಞ ಶ್ರೀ ಜ್ಞಾನೇಶ್ವರ ಶ್ರೀಗಳ ರಾಜಬೀದಿ ಉತ್ಸವ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆಯಿತು. ಈ ಸಂದರ್ಭ ಶಿವಮೊಗ್ಗದ ಜೈಲ್ ಸರ್ಕಲ್’ನಲ್ಲಿರುವ ಪದ್ಮಾ ಜ್ಯುವೆಲರ್ಸ್ ಮಾಲೀಕರಾದ ಚಂದ್ರಹಾಸ್ ಅವರು ಶ್ರೀಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
A Child care unit has been started by rotary in Shimoga Bus stand. Bhagavadgeetha Sapthaha has been organized in Ravindra Nagara Ganapathi Temple.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200