ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA | 25 ನವೆಂಬರ್ 2019
NEWS 1 : ಜಾಹೀರಾತು ಆಹಾರ ಪದ್ಧತಿಯಿಂದ ಕ್ಯಾನ್ಸರ್
ಶಿವಮೊಗ್ಗ : ಜಾಹೀರಾತುಗಳಲ್ಲಿ ತೋರಿಸಿದಂತೆ ಆಹಾರ ಪದ್ಧತಿ ಅನುಸರಿಸಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇಸಿ ಆಹಾರ ಪದ್ಧತಿ ಅರಿತು, ರೂಢಿಸಿಕೊಂಡರೆ ಧನಾತ್ಮಕ ಬದಲಾವಣೆ ಬರಲಿದೆ ಎಂದು ಡಾ.ಖಾದರ್ ಹೇಳಿದ್ದಾರೆ. ಯೋಗ ವಿಸ್ಮಯ ಟ್ರಸ್ಟ್ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ‘ಕ್ಯಾನ್ಸರ್’ಗೆ ಕಾರಣ ಮತ್ತು ಸರಳ ಪರಿಹಾರ’ ಕುರಿತ ವಿಶೇಷ ಶಿಬಿರದಲ್ಲಿ ಹೇಳಿಕೆ. ಯೋಗ ವಿಸ್ಮಯ ಟ್ರಸ್ಟ್ ಸಂಚಾಲಕ ಅನಂತಜೀ, ಡಿ.ಎಂ.ರಂಗನಾಥಯ್ಯ, ಶಿವಬೀರಯ್ಯ ಸೇರಿದಂತೆ ಹಲವರು ಉಪಸ್ಥಿತಿ.

NEWS 2 : ಕ್ರೈಸ್ತರ ಪರಮ ಪ್ರಸಾದ ಮೆರವಣಿಗೆ
ಶಿವಮೊಗ್ಗ : ಕ್ರಿಸ್ತರಾಜರ ಹಬ್ಬದ ಅಂಗವಾಗಿ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಪರಮ ಪ್ರಸಾದದ ಮೆರವಣಿಗೆ ನಡೆಯಿತು. ಮೇಣದ ಬತ್ತಿ, ರಾಜೀ ಸಂಧಾನದ ಶಿಲುಬೆ ಹಿಡಿದು ಸೇಕ್ರೆಡ್ ಹಾರ್ಟ್ ಚರ್ಚ್’ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಶಿವಮೊಗ್ಗ ಮತ್ತು ಭದ್ರಾವತಿ ಧರ್ಮಕ್ಷೇತ್ರದಿಂದ ಜಂಟಿಯಾಗಿ ಹಬ್ಬವನ್ನು ಆಯೋಜಿಸಲಾಗಿತ್ತು. ಶಿವಮೊಗ್ಗ ಧರ್ಮಕ್ಷೇತ್ರದ ಅಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವೋ, ಭದ್ರಾವತಿ ಧರ್ಮಾಧ್ಯಕ್ಷ ಡಾ.ಜೋಸೆಫ್ ಅರುಮಚಾಡತ್ ಸೇರಿದಂತೆ 70 ಗುರುಗಳು ಬಲಿಪೂಜೆ ಸಲ್ಲಿಸಿದರು.
NEWS 3 : ನ್ಯಾಯಾಂಗ ತನಿಖೆಗೆ ಆಗ್ರಹ
ಶಿವಮೊಗ್ಗ : ಮಾಜಿ ಸಚಿವ ತನ್ವೀರ್ ಸೇಠ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹ. ಪೊಲೀಸರ ತನಿಖಾ ಕ್ರಮವು ಸಂಶಯಾಸ್ಪದವಾಗಿದೆ. ಹಾಗಾಗಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಪಿಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶಾ ಆಗ್ರಹ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
A procession was held from Sacred Heart church in Shimoga. Yoga Vismaya held a seminar in Kuvempu Rangamandira.
LATEST NEWS
- ನಾಳೆಯಿಂದ ಶಿವಮೊಗ್ಗದ ಶೇ.90ರಷ್ಟು ಹೊಟೇಲ್ಗಳು ಬಂದ್, ಕಾರಣವೇನು?

- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





