ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 15 ಜನವರಿ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇನ್ಮುಂದೆ ಶಿವಮೊಗ್ಗ ಯಶವಂತಪುರ ಜನಶತಾಬ್ದಿ ರೈಲು ಮತ್ತೊಂದು ಸ್ಟಾಪ್ ಕೊಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬಹು ಬೇಡಿಕೆ ಹಿನ್ನೆಲೆಯಲ್ಲಿ ಒಂದು ನಿಮಿಷ ಸ್ಟಾಪ್ ನೀಡಲಾಗುತ್ತಿದೆ.
ಶಿವಮೊಗ್ಗದಿಂದ ಹೊರಡುವ ಜನಶತಾಬ್ದಿ ರೈಲು ತರಿಕೆರೆಯಲ್ಲಿ ಒಂದು ನಿಮಿಷ ನಿಲುಗಡೆ ಕೊಡಲಾಗುತ್ತದೆ. ಜನವರಿ 15ರಿಂದಲೇ ನಿಲುಗಡೆ ಇರಲಿದೆ. ಆರು ತಿಂಗಳು ಪ್ರಾಯೋಗಿಕ ನಿಲುಗಡೆ ಕೊಡಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಬೆಳಗ್ಗೆ ಶಿವಮೊಗ್ಗದಿಂದ ಹೊರಡುವ ರೈಲು ತರೀಕೆರೆಗೆ 6.04ಕ್ಕೆ ತಲುಪಲಿದೆ. 6.05ಕ್ಕೆ ತರೀಕರೆಯಿಂದ ಹೊರಡಲಿದೆ. ಹಾಗೆ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವಾಗ, ರಾತ್ರಿ 9.02ಕ್ಕೆ ತರೀಕೆರೆಗೆ ಬರಲಿದೆ. 9.03ಕ್ಕೆ ಹೊರಡಲಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]