
ಶಿವಮೊಗ್ಗ ಲೈವ್.ಕಾಂ | SHIMOGA | 22 ಫೆಬ್ರವರಿ 2020
ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘದ (ಮ್ಯಾಮ್ಕೋಸ್) ನಿರ್ದೇಶಕರ ಸ್ಥಾನಕ್ಕೆ ಇವತ್ತು ಚುನಾವಣೆ ನಡೆಯುತ್ತಿದೆ. 19 ನಿರ್ದೇಶಕರ ಸ್ಥಾನಕ್ಕೆ ಸಹಕಾರ ಭಾರತಿ ಮತ್ತು ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ನಡುವೆ ಜಿದ್ದಾಜಿದ್ದಿ ಇದೆ.
ಮೂರು ಜಿಲ್ಲೆಯ ಒಂಭತ್ತು ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲು ಮತದಾನ ಕೇಂದ್ರವಿದೆ. ಇನ್ನು ದಾವಣಗೆರೆಯ ಚನ್ನಗಿರಿ, ಚಿಕ್ಕಮಗಳೂರಿನ ತರೀಕೆರೆ, ಕೊಪ್ಪ, ಶೃಂಗೇರಿಯಲ್ಲಿ ಬೆಳಗ್ಗೆಯಿಂದ ಮತದಾನ ನಡೆಯುತ್ತಿದೆ. ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ರಾತ್ರಿ 8 ಗಂಟೆ ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದೆ.
ಅಭ್ಯರ್ಥಿಗಳ ನಡುವೆ ತೀವ್ರ ಜಿದ್ದಾಜಿದ್ದಿ
ನಿರ್ದೇಶಕರ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸಂಘಟನೆ, ಬಿಜೆಪಿಯೇತರ ಪಕ್ಷಗಳ ನೇತೃತ್ವದ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ವತಿಯಿಂದ ತಲಾ 19 ಅಭ್ಯರ್ಥಿಗಳು ಕಣಕ್ಕಿಳಿಸಲಾಗಿದೆ. ಇನ್ನು ಯಾವುದೇ ಪಕ್ಷ ಮತ್ತು ಸಂಘಟನೆಯ ಬೆಂಬಲವಿಲ್ಲದ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 40 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಸಹಕಾರ ಭಾರತಿ ಮತ್ತು ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಅಭ್ಯರ್ಥಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಇದೆ. ಈ ಚುನಾವಣೆ ಪಕ್ಷದ ಚಿಹ್ನೆ ಆಧಾರದಲ್ಲಿ ನಡೆಯುವುದಿಲ್ಲ. ಬದಲಾಗಿ ಬೇರೆ ಬೇರೆ ಚಿಹ್ನೆಗಳನ್ನು ನೀಡಲಾಗುತ್ತದೆ.

ಮತಗಟ್ಟೆ ಬಳಿ ಅಂತಿಮ ಕಸರತ್ತು
ಕಳೆದ ಚುನಾವಣೆಯಲ್ಲಿ ಸಹಕಾರ ಭಾರತಿ ಸಂಘಟನೆಯ 19 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಬಾರಿಯು ಕ್ಲೀನ್ ಸ್ವೀಪ್ ಮಾಡಬೇಕು ಅನ್ನುವುದು ಸಹಕಾರಿ ಭಾರತಿಯ ಲೆಕ್ಕಾಚಾರ. ಆದರೆ ಈ ಲೆಕ್ಕಾಚಾರ ಉಲ್ಟಾ ಮಾಡಬೇಕು ಅಂತಾ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನ ಸಿದ್ಧತೆ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಎರಡು ಸಂಘಟನೆಯ ಪ್ರಮುಖರು ಅಭ್ಯರ್ಥಿಗಳ ಪರವಾಗಿ ಮತದಾನ ಕೇಂದ್ರದ ಹೊರಗೆ ಅಂತಿಮ ಹಂತದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಕಡೇ ಕ್ಷಣದಲ್ಲಿ ಡಬಲ್ ಆದ ಮತದಾರರು
ಮೂರು ಜಿಲ್ಲೆಯಿಂದ ಮ್ಯಾಮ್ಕೋಸ್’ಗೆ 26 ಸಾವಿರ ಸದಸ್ಯರಿದ್ದಾರೆ. ಆದರೆ ಮತದಾನಕ್ಕೆ ಅರ್ಹರಾಗಿರುವುದು ಕೇವಲ 12,975 ಮಂದಿ. ಕಡೆ ಕ್ಷಣದಲ್ಲಿ 6 ಸಾವಿರ ಮತದಾರರು ಹೆಚ್ಚಳವಾಗಿದ್ದಾರೆ. ಇಲ್ಲವಾಗಿದ್ದರೆ ಕೇವಲ 6 ಸಾವಿರ ಸದಸ್ಯರು ಮಾತ್ರ ಮತದಾನಕ್ಕೆ ಅರ್ಹತೆ ಪಡೆಯುತ್ತಿದ್ದರು.

ಚುನಾವಣೆ ಘೋಷಣೆಯಾದಾಗ ಕೇವಲ 6 ಸಾವಿರ ಮತದಾರರು ಮತ ಚಲಾಯಿಸಲು ಅರ್ಹತೆ ಹೊಂದಿದ್ದರು. ನಾಲ್ಕು ಗುಂಪು ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರಿಂದ, ಚುನಾವಣೆ ಹಿಂದಿನ ದಿನ ಹೈಕೋರ್ಟ್ ಆದೇಶದ ಹಿನ್ನೆಲೆ, 6 ಸಾವಿರ ಹೆಚ್ಚುವರಿ ಮತದಾರರಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿತು. ಇದರಿಂದ ಚುನಾವಣಾ ಕಣ ಮತ್ತಷ್ಟು ಕುತೂಹಲ ಮೂಡಿಸಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200