ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ತೀರ್ಥಹಳ್ಳಿ: ಬೀಸು ಗ್ರಾಮದ ಬಡ ಕುಟುಂಬದ ರಾಮು ಎಂಬುವವರ ವಾಸದ ಮನೆ, ಬೆಳೆದಿದ್ದ ಹತ್ತಾರು ಅಡಿಕೆ ಮರಗಳ ಸುತ್ತ ಅರಣ್ಯ ಇಲಾಖೆ ಟ್ರಂಚ್ ನಿರ್ಮಿಸಿ, ಮರಗಳನ್ನು ಉರುಳಿಸಿ ಒತ್ತುವರಿ (eviction) ತೆರವುಗೊಳಿಸಲು ಗುರುವಾರ ಮುಂದಾಗಿತ್ತು. ಆಗ ಸ್ಥಳಕ್ಕೆ ಬಂದ ಶಾಸಕ ಆರಗ ಜ್ಞಾನೇಂದ್ರ ಜೆಸಿಬಿ ಚಾಲಕನಿಗೆ ಗದರಿ ಕಾರ್ಯಾಚರಣೆ ನಿಲ್ಲಿಸಿದರು.
ತೆಗಿ ಜೆಸಿಬಿ, ಹೋಪ್ ಲೆಸ್ ಫೆಲೋ. ಯಾವಂದ್ ಮನೆ ಮುರಿಯಕ್ಕೆ ಬಂದಿದ್ದೀಯ ಇಲ್ಲಿ ಎತ್ತು ನಿನ್ನ ಗಾಡಿ. ಯಾರು ನಿನ್ನನ್ನು ಇಲ್ಲಿಗೆ ಕಳಿಸಿದ್ದು ಎಂದು ಜೆಸಿಬಿ ಚಾಲಕನಿಗೆ ಶಾಸಕ ಆರಗ ಜ್ಞಾನೇಂದ್ರ ದಬಾಯಿಸಿದರು.
ದೊಡ್ಡ ಒತ್ತುವರಿಯ ಬಗ್ಗೆ ಮಾತನಾಡದ ಅರಣ್ಯ ಇಲಾಖೆ ತುಂಡು ಜಮೀನನ್ನು ವಶಪಡಿಸಿಕೊಳ್ಳುವ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಇದನ್ನು ಎಂದಿಗೂ ಸಹಿಸಲು ಆಗುವುದಿಲ್ಲ. ಬಡವನ ಮೇಲೆ ಕಾನೂನಿನ ಸವಾರಿ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.

ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ರೈತನ ಪರವಾಗಿ ನಾನಿದ್ದೇನೆ. ಬೆಳೆದ ಮರಗಳನ್ನು ಉರುಳಿಸಲು ನೀವ್ಯಾರು. ಇಂತಹ ಅಧಿಕಾರದ ದರ್ಪವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಯಾರ ಗಮನಕ್ಕೆ ತಂದಿದ್ದೀರಿ ಎಂದು ಪ್ರಶ್ನಿಸಿದರು.
ಇದನ್ನು ಓದಿ – ಚಂದ್ರಗುತ್ತಿ ಜಾತ್ರೆ, ಮಹತ್ವದ ಆದೇಶ ಹೊರಡಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ, ಏನದು?
ಅರಣ್ಯ ಇಲಾಖೆ ಅಧಿಕಾರಿಗಳ ಸಲಹೆಯಂತೆ ಜೆಸಿಬಿಯ ಚಾಲಕ ಆ ಜಾಗವನ್ನು ಬಿಟ್ಟು ಬೇರೆಡೆ ಕಾಮಗಾರಿ ಮುಂದುವರಿಸಿದರು.
LATEST NEWS
About The Editor
ನಿತಿನ್ ಆರ್.ಕೈದೊಟ್ಲು





