SHIVAMOGGA LIVE | 27 JUNE 2022 | NATIONAL UPDATE
ಸ್ಮಾರ್ಟ್ ವಾಚ್ ಮೂಲಕ ಫಾಸ್ಟ್ ಟ್ಯಾಗ್ (FAST TAG) ಸ್ಕ್ಯಾನ್ ಮಾಡಿ, ಹಣ ಲಪಟಾಯಿಸುವ ವಿಡಿಯೋ ವೈರಲ್ ಬೆನ್ನಿಗೆ ರಾಷ್ಟ್ರೀಯ ಪೇಮೆಂಟ್ ಕೌನ್ಸಿಲ್ ಮತ್ತು ಪೇಟಿಎಂ ಸಂಸ್ಥೆ ಸ್ಪಷ್ಟನೆ ನೀಡಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಿಡಿಯೋದಲ್ಲಿ ತೋರಿಸಿರುವುದು FAKE ಎಂದು ಎರಡು ಸಂಸ್ಥೆಗಳು ಸ್ಪಷ್ಟನೆ ನೀಡಿವೆ. ಬಾಲಕನೊಬ್ಬ ಟ್ರಾಫಿಕ್’ನಲ್ಲಿ ನಿಂತಿದ್ದ ಕಾರಿನ ಗ್ಲಾಸ್ ಒರೆಸುತ್ತಾನೆ. ಈ ವೇಳೆ ಸ್ಮಾರ್ಟ್ ವಾಚ್ ಮೂಲಕ ಫಾಸ್ಟ್ ಟ್ಯಾಗ್ ಸ್ಟಿಕರ್ ಮೇಲೆ ಸ್ಕ್ಯಾನ್ ಮಾಡುತ್ತಾನೆ. ಇದನ್ನು ಗಮನಿಸಿದ ಕಾರು ಚಾಲಕ, ಹುಡುಗನನ್ನು ಬೆನ್ನಟ್ಟಿ ಹೋಗುತ್ತಾನೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಫಾಸ್ಟ್ ಟ್ಯಾಗ್ (FAST TAG) ಮೂಲಕ ಈ ರೀತಿ ಹಣ ಕದಿಯುತ್ತಾರೆ ಎಂದು ಎಚ್ಚರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪೇಮೆಂಟ್ ಕೌನ್ಸಿಲ್ ಮತ್ತು ಪೇಟಿಎಂ ಸಂಸ್ಥೆ ಸ್ಪಷ್ಟನೆ ನೀಡಿವೆ.
ಓಪನ್ ನೆಟ್ ವರ್ಕ್ ಮೂಲಕ ಫಾಸ್ಟ್ ಟ್ಯಾಗ್ ಸ್ಕ್ಯಾನ್ ಮಾಡಿ, ಅದರಿಂದ ಹಣ ಪಡೆಯಲು ಸಾಧ್ಯವಿಲ್ಲ. ಸಾಕಷ್ಟು ಪರೀಕ್ಷೆ ನಡೆಸಿದ ಬಳಿಕವೆ ಫಾಸ್ಟ್ ಟ್ಯಾಗನ್ನು ವಾಹನಗಳಿಗೆ ಅಳವಡಿಸಲಾಗುತ್ತಿದೆ. ನಿಗದಿತ ಸ್ಥಳದಲ್ಲಿ ಮಾತ್ರ ಫಾಸ್ಟ್ ಟ್ಯಾಗನ್ನು ಸ್ಕ್ಯಾನ್ ಮಾಡಬಹುದಾಗಿದೆ. ಹಾಗಾಗಿ ವಿಡಿಯೋದಲ್ಲಿ ಇರುವುದು ಸುಳ್ಳು ಎಂದು ಸ್ಪಷ್ಟನೆಯಲ್ಲಿ ತಿಳಿಸಲಾಗಿದೆ.
READ ALSO : ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ ಮಕ್ಕಳು ದಿಢೀರ್ ಅಸ್ವಸ್ಥ, ಕೆಲಕಾಲ ಆತಂಕ