ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 06 ಫೆಬ್ರವರಿ 2020
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ರಾತ್ರಿ ಎಲ್ಲರು ಗಾಢ ನಿದ್ರೆಯಲ್ಲಿದ್ದಾಗಲೇ ವೆಂಕಟೇಶ್ ಅವರಿಗೆ ಉಸಿರಾಟದ ಸಮಸ್ಯೆ ಶುರುವಾಗಿದ್ದು. ಪಕ್ಕದಲ್ಲಿ ಮಲಗಿದ್ದ ಪತ್ನಿ ಎಚ್ಚರವಾಗಿ ದಿಗಿಲುಗೊಂಡರು. ಮನೆಯಲ್ಲಿದ್ದವರನ್ನೆಲ್ಲ ಎಬ್ಬಿಸಿದರು. ಯಾರಿಗೂ ಏನು ಮಾಡಬೇಕು ಗೊತ್ತಾಗುತ್ತಿಲ್ಲ. ಅಕ್ಕಪಕ್ಕದ ಮನೆಯವರು ನೆರವಿಗೆ ಬಂದರು. ಆಂಬುಲೆನ್ಸ್’ಗೆ ಫೋನ್ ಮಾಡಿದರೆ ಸರ್ಕಾರಿ ಆಂಬುಲೆನ್ಸ್’ಗಳು 20 ನಿಮಿಷ, 10 ನಿಮಿಷ ಅನ್ನುತ್ತಿದ್ದಾರೆ. ಖಾಸಗಿ ಆಂಬುಲೆನ್ಸ್’ಗೆ ಫೋನ್ ಮಾಡೋಕೆ ಯಾರ ಬಳಿಯೂ ನಂಬರ್ ಇಲ್ಲ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸ್ಕೂಲ್ ಬೆಲ್ ಹೊಡೆಯುವ ಟೈಮ್ ಹತ್ತಿರವಾಗ್ತಿದೆ. ಆದರೆ ಮನೆಯಲ್ಲಿನ್ನು ತಿಂಡಿ ರೆಡಿಯಾಗಿಲ್ಲ. ಕಾರಣ, ಗ್ಯಾಸ್ ಸ್ಟೌನಿಂದ ವಾಸನೆ ಬರುತ್ತಿದೆ. ಎಲ್ಲೋ ಗ್ಯಾಸ್ ಲೀಕ್ ಆಗುತ್ತಿದೆ ಅನ್ನುವ ಆತಂಕ. ಸ್ಟೌ ಬಳಿಗೆ ಲೈಟರ್ ತೆಗೆದುಕೊಂಡು ಹೋಗಲು ಸುಷ್ಮಾ ಅವರಿಗೆ ಭಯವಾಗುತ್ತಿದೆ. ಮಕ್ಕಳಿಗೇನೋ ಹೊಟೇಲ್’ನಿಂದ ತಿಂಡಿ ತರಿಸಿಕೊಟ್ಟರು. ಆದರೆ ಗ್ಯಾಸ್ ಸೋರಿಕೆ ಸಣ್ಣ ವಿಚಾರಾನಾ? ಸ್ವಲ್ಪ ಯಾಮಾರಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ತಕ್ಷಣ ರಿಪೇರಿಗೆ ಯಾರನ್ನ ಸಂಪರ್ಕಿಸೋದು ಗೊತ್ತಾಗದೆ ಸುಷ್ಮಾ ಚಡಪಡಿಸುತ್ತಿದ್ದಾರೆ.
ತುರ್ತು ಪರಿಸ್ಥಿತಿಗಳು ಯಾವಾಗ ಯಾರಿಗೆ ಎದುರಾಗುತ್ತೋ ಗೊತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರಿಯಾದ ಕಾಂಟ್ಯಾಕ್ಟ್ ನಂಬರ್’ಗಳು ಸಿಕ್ಕಿಬಿಟ್ಟರೆ ದೊಡ್ಡ ದೊಡ್ಡ ಅನಾಹುತಗಳಿಂದ ಬಚಾವಾಗಬಹುದು. ಕುಟುಂಬಗಳು ನೆಮ್ಮದಿಯಿಂದ ಇರುತ್ತವೆ.
ಇಂತಹ ಕಾಂಟ್ಯಾಕ್ಟ್’ಗಳನ್ನು ರೂಪಿಸುವ ಸಲುವಾಗಿಯೇ ಶಿವಮೊಗ್ಗದ ನಂಬರ್ 1 ನ್ಯೂಸ್ ವೆಬ್’ಸೈಟ್ ಶಿವಮೊಗ್ಗ ಲೈವ್.ಕಾಂ, ಡಿಜಿಟಲ್ ಫೋನ್ ಡೈರಿ ಆರಂಭಿಸುತ್ತಿದೆ. ಬೆರಳ ತುದಿಯಲ್ಲೇ ಎಲ್ಲರ ಫೋನ್ ನಂಬರ್’ಗಳು ಸಿಗಲಿವೆ.
ನೀವು ನಿಮ್ಮ ಬಿಸ್ನೆಸ್’ಗಳನ್ನು ಈ ಡಿಜಿಟಲ್ ಡೈರಿಗೆ ಸೇರಿಸಿ. ತುರ್ತು ಪರಿಸ್ಥಿತಿ ಎದುರಾದಾಗ, ಜನರು ನಿಮ್ಮನ್ನು ಸಂಪರ್ಕ ಮಾಡುತ್ತಾರೆ.
ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ?
CONNECTING SHIVAMOGGA ಅನ್ನೋದು ಶಿವಮೊಗ್ಗ ಲೈವ್.ಕಾಂನ ಟ್ಯಾಗ್ ಲೈನ್. ಮೂರು ವರ್ಷದಿಂದ ಶಿವಮೊಗ್ಗದ ನ್ಯೂಸ್ ಅಪ್’ಡೇಟ್’ಗಳನ್ನು ಜನರಿಗೆ ಕನೆಕ್ಟ್ ಮಾಡುತ್ತಿದ್ದೇವೆ. ಸಾವಿರದ ಲೆಕ್ಕದಲ್ಲಿದ್ದ ಓದುಗರ ಸಂಖ್ಯೆ, ಈಗ ಒಂದು ಲಕ್ಷಕ್ಕೆ ತಲುಪಿದೆ. ಪ್ರತಿ ತಿಂಗಳು ಶಿವಮೊಗ್ಗ ಲೈವ್.ಕಾಂಗೆ ಓದುಗರು ಹೆಚ್ಚಳವಾಗುತ್ತಿದ್ದಾರೆ ಅನ್ನುತ್ತಿದೆ ಪ್ರತಿಷ್ಠಿತ ಗೂಗಲ್ ಸಂಸ್ಥೆ.
ಇಷ್ಟೆಲ್ಲ ದೊಡ್ಡ ಓದುಗರನ್ನು ಹೊಂದಿರುವ ಶಿವಮೊಗ್ಗ ಲೈವ್.ಕಾಂ, ಇನ್ಮುಂದೆ ಸುದ್ದಿ ತಲುಪಿಸುವುದರ ಜೊತೆಗೆ ಜನರನ್ನು ಕನೆಕ್ಟ್ ಮಾಡುವತ್ತಲು ಯೋಜಿಸಿದೆ. ಇದಕ್ಕಾಗಿಯೇ ಫೋನ್ ಡೈರಿ ಎಂಬ ವಿಭಿನ್ನ ವೆಬ್’ಸೈಟ್ ಆರಂಭಿಸಲಾಗಿದೆ.
ಹೇಗೆ ಕೆಲಸ ಮಾಡುತ್ತದೆ ಈ ವೆಬ್’ಸೈಟ್?
ಮೇಲಿನ ಉದಾಹರಣೆಯಂತೆ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಕ್ಕರೆ, ವೆಂಕಟೇಶ್ ಅವರು ಸೇಫ್ ಆಗುತ್ತಾರೆ. ಥಟ್ ಅಂತಾ ಮನೆ ಬಾಗಿಲಿಗೆ ಗ್ಯಾಸ್ ರಿಪೇರಿ ಮಾಡುವವರು ಬಂದರೆ, ಸುಷ್ಮಾ ಅವರ ಆತಂಕ ದೂರಾಗುತ್ತದೆ. ಶಿವಮೊಗ್ಗ ಲೈವ್.ಕಾಂನ ಫೋನ್ ಡೈರಿ ಮಾಡುವುದು ಇದನ್ನೇ. ತಕ್ಷಣಕ್ಕೆ ಆಂಬುಲೆನ್ಸ್’ನವರ ನಂಬರ್ ಒದಗಿಸಲಿದೆ. ಸೆಕೆಂಡುಗಳಲ್ಲಿ ಗ್ಯಾಸ್ ಸ್ಟೌ ಸರ್ವಿಸ್, ರಿಪೇರಿಯವರ ನಂಬರ್ ಕೊಡಲಿದೆ.
ಮೊದಲಿಗೆ ವ್ಯಾಪಾರಿಗಳು ತಮ್ಮ ಬಿಸ್ನೆಸ್ ಕುರಿತು ಫೋನ್ ಡೈರಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಅವರ ಬಿಸ್ನೆಸ್’ನ ಹೆಸರು, ವಿಳಾಸ, ಫೋನ್ ನಂಬರ್, ಸಂಪರ್ಕ ಸಂಖ್ಯೆ, ಫೋಟೊವನ್ನು ವೆಬ್’ಸೈಟ್’ನಲ್ಲಿ ಪ್ರಕಟಿಸಲಾಗುತ್ತದೆ. ಆ ಬಳಿಕ ಆಸಕ್ತರು ವೆಬ್’ಸೈಟ್’ನಲ್ಲೇ ಹುಡುಕಿ ನಂಬರ್ ಪಡೆದು ಕರೆ ಮಾಡಿ, ಸಮಸ್ಯೆ ಥಟ್ ಅಂತಾ ಪರಿಹಾರ ಕಂಡುಕೊಳ್ಳಬಹುದು. ಅಂದಹಾಗೆ ನಮ್ಮ ಫೋನ್ ಡೈರಿ ವೆಬ್’ಸೈಟ್ ದಿನದ 24 ಗಂಟೆಯೂ ಲಭ್ಯವಿರಲಿದೆ.
ವೆಬ್’ಸೈಟ್’ನಲ್ಲಿ ಹುಡುಕಲು ಆಗದಿದ್ದರೆ ಚಿಂತೆನೇ ಬೇಡ, ಕಾಲ್ ಸೆಂಟರ್ ನಂಬರ್’ಗೆ ಕರೆ ಮಾಡಿದರೆ ಸಾಕು. ಫಟಾಫಟ್ ಬೇಕಾದ ನಂಬರ್’ಗಳು ಕರೆ ಮಾಡಿದವರ ಮೊಬೈಲ್’ಗೆ ತಲುಪಲಿದೆ. ಜನರನ್ನು ಕನೆಕ್ಟ್ ಮಾಡುವ ಈ ವಿಭಿನ್ನ ಪ್ರಯತ್ನ ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆರಂಭವಾಗುತ್ತಿದೆ.
ಇನ್ನೇನು ಯೋಚನೆ ಮಾಡ್ತಿದ್ದೀರ? ನಿಮ್ಮ ಬಿಸ್ನೆಸ್’ಗೆ ತಕ್ಕ ಗ್ರಾಹಕರು, ಅವರಿಗೆ ಬೇಕಾದ ಸಮಯಕ್ಕೆ ಸರಿಯಾಗಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಇದರಿಂದ ಬಿಸ್ನೆಸ್ ಬೆಳೆಸಿಕೊಳ್ಳಿ. ಅಂದಹಾಗೆ, ನಿಮ್ಮ ಬಿಸ್ನೆಸ್ ರಿಜಿಸ್ಟರ್ ಮಾಡಿಕೊಳ್ಳಲು ಸಣ್ಣದೊಂದು ಚಾರ್ಜ್ ಇರಲಿದೆ. ಪ್ರತಿ ದಿನಕ್ಕೆ ಒಂದು ರೂಪಾಯಿ 80 ಪೈಸೆ ದರ ವಿಧಿಸಲಾಗುತ್ತದೆ. ಒಂದೂವರೆ ವರ್ಷಕ್ಕೆ ಕೇವಲ ಒಂದು ಸಾವಿರ ರೂ. ಚಾರ್ಜ್ ಮಾಡಲಾಗುತ್ತದೆ. ಈಗಾಗಲೇ ಫೋನ್ ಡೈರಿಗೆ ದೊಡ್ಡ ರೆಸ್ಪಾನ್ಸ್ ಸಿಗುತ್ತಿದೆ. ಆರಂಭದಲ್ಲೇ 96 ಮಂದಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಮಂಗಳವಾರ 14, ಬುಧವಾರ 9 ಮಂದಿ ತಮ್ಮ ಬಿಸ್ನೆಸ್ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಪ್ರತಿದಿನ ಸರಿಸುಮಾರು 30 ಕರೆಗಳು ಬರುತ್ತಿವೆ. ಇನ್ನೇಕೆ ತಡ. ನೀವು ಟ್ರೈ ಮಾಡಿ.
ಆಸಕ್ತರು 7411700200, 9964634494, 9972194422 ನಂಬರ್’ಗೆ ಕರೆ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ.