ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | COVID CURFEW NEWS | 5 ಜನವರಿ 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಹೊಸ ಗೈಡ್ ಲೈನ್ ಸಿದ್ಧಪಡಿಸಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ರಾಜ್ಯ ಸರ್ಕಾರದ ಹೊಸ ಗೈಡ್ ಲೈನ್ ಪ್ರಕಾರ ಶಿವಮೊಗ್ಗ ಜಿಲ್ಲೆಗೆ ಯಾವೆಲ್ಲ ರೂಲ್ಸ್ ಅನ್ವಯವಾಗಲಿದೆ ಅನ್ನುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ನೈಟ್ ಕರ್ಫ್ಯೂ ವಿಸ್ತರಣೆ
ಜನವರಿ 19ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಇರಲಿದೆ.
ಎಲ್ಲಾ ಸರ್ಕಾರಿ ಕಚೇರಿಗಳು ವಾರದ ಐದು ದಿನಗಳು ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ.
ಹೊಟೇಲ್, ರೆಸ್ಟೋರೆಂಟ್, ಬಾರ್ ಸೇರಿದಂತೆ ವಿವಿಧ ತಿಂಡಿ, ತನಿಸು ಕೇಂದ್ರಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ. ಕೋವಿಡ್ ಗೈಡ್ ಲೈನ್ ಕಡ್ಡಾಯವಾಗಿ ಪಾಲಿಸಬೇಕು.
ಚಿತ್ರಮಂದಿರ, ಮದುವೆ, ದೇವಸ್ಥಾನ
ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್, ರಂಗಮಂದಿರಗಳು, ಆಡಿಟೋರಿಯಂಗಳ ಒಟ್ಟು ಆಸನಗಳ ಪೈಕಿ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ.
ಮದುವೆ ಸಮಾರಂಭಗಳು ಹೊರಾಂಗಣವಾದರೆ 200 ಮಂದಿ ಭಾಗವಹಿಸಬಹುದು. ಒಳಾಂಗಣದಲ್ಲಿ ಕೇವಲ 100 ಮಂದಿ.
ದೇವಸ್ಥಾನಗಳಲ್ಲಿ ಪೂಜೆಗೆ ಮಾತ್ರ ಅವಕಾಶ. ಒಮ್ಮೆಗೆ 50 ಮಂದಿಗೆ ಮಾತ್ರ ಪ್ರವೇಶ. ಮಾಲ್’ಗಳು, ಶಾಪಿಂಗ್ ಸೆಂಟರ್’ಗಳು ಎಂದಿನಂತೆ ವ್ಯಾಪಾರ ಮಾಡಬಹುದು. ಸ್ವಿಮ್ಮಿಂಗ್ ಪೂಲ್, ಜಿಮ್, ಕ್ರೀಡಾ ಸಂಕೀರ್ಣ, ಕ್ರೀಡಾಂಗಣದಲ್ಲಿ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ.
ಯಾವುದೆ ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳಿಗೆ ಅವಕಾಶ ಇಲ್ಲ.
ವೀಕೆಂಡ್ ಕರ್ಫ್ಯೂ
ರಾಜ್ಯಾದ್ಯಂತ ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ.
ವೀಕೆಂಡ್ ಕರ್ಫ್ಯೂ ಸಂದರ್ಭ ತುರ್ತು ಸೇವೆಗಳನ್ನು ಒದಗಿಸುವ ಸರ್ಕಾರಿ ಕಚೇರಿಗಳು, ಅವುಗಳ ಸ್ವಾಯತ್ತ ಸಂಸ್ಥೆಗಳ ಕರ್ತವ್ಯ ನಿರ್ವಹಿಸಲು ಅವಕಾಶವಿದೆ.
ವೀಕೆಂಡ್ ಕರ್ಫ್ಯೂ ಸಂದರ್ಭ ಎಲ್ಲಾ ಪಾರ್ಕುಗಳನ್ನು ಬಂದ್ ಮಾಡಲಾಗುತ್ತದೆ.
ಕಾರ್ಖಾನೆಗಳ ಕಾರ್ಯನಿರ್ವಹಣೆಗೆ ಅವಕಾಶವಿದೆ. ಕಾರ್ಮಿಕರು, ಉದ್ಯೋಗಿಗಳು ಓಡಾಡಲು ಅವಕಾಶವಿದೆ. ಐಡಿ ಕಾರ್ಡ್ ಕಡ್ಡಾಯವಾಗಿರಬೇಕು.
ಅನಾರೋಗ್ಯಕ್ಕೆ ತುತ್ತಾದವರ ಆರೈಕೆಗೆ, ಕರೋನ ಲಸಿಕೆ ಪಡೆಯಲು ಹೋಗುವವರಿಗೆ ಅವಕಾಶ.
ದಿನಸಿ, ಆಹಾರ, ಹಣ್ಣು, ತರಕಾರಿ ಮಾರಾಟ ಮಳಿಗೆ ತೆಗೆಯಲು ಅವಕಾಶ. ತಳ್ಳುಗಾಡಿ ವ್ಯಾಪಾರ, ಹೋಂ ಡೆಲಿವರಿಗೆ ಅವಕಾಶ. ರೆಸ್ಟೋರೆಂಟ್, ಹೊಟೇಲ್’ಗಳಲ್ಲಿ ಪಾರ್ಸಲ್’ಗೆ ಮಾತ್ರ ಅವಕಾಶ.
ರೈಲು, ಬಸ್ ಸಂಚಾರಕ್ಕೆ ಅವಕಾಶ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನ ಬಿಡಲು ಮತ್ತು ಅಲ್ಲಿಂದ ಕರೆತರಲು ವಾಹನಗಳಿಗೆ ಅವಕಾಶ. ಈ ಸಂದರ್ಭ ಟಿಕೆಟ್ ಅಥವಾ ಇತರೆ ದಾಖಲೆಗಳನ್ನು ತೋರಿಸಬೇಕು.