ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಆಗಸ್ಟ್ 2020
ಸರ್ಕಾರ ಸಂಡೆ ಕರ್ಫ್ಯೂ ತೆರವುಗೊಳಿಸಿರುವ ಹಿನ್ನೆಲೆ ಇವತ್ತಿಂದ ಶಿವಮೊಗ್ಗದಲ್ಲಿ ಭಾನುವಾರ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈವರೆಗೂ ಭಾನುವಾರ ಅಗತ್ಯ ವಸ್ತುಗಳ ಖರೀದಿಗಷ್ಟೇ ಅವಕಾಶವಿತ್ತು. ಈ ವಾರದಿಂದ ಆ ನಿಬಂಧನೆಯೂ ಇಲ್ಲ.
ಈವರೆಗೂ ನೈಟ್ ಕರ್ಫ್ಯೂ ಮತ್ತು ಸಂಡೆ ಲಾಕ್ಡೌನ್ ಜಾರಿಯಲ್ಲಿತ್ತು. ಆದ್ದರಿಂದ ಶನಿವಾರ ರಾತ್ರಿ 9 ಗಂಟೆಗೆ ಜಿಲ್ಲೆಯಾದ್ಯಂತ ಅಂಗಡಿಗಳನ್ನು ಬಂದ್ ಮಾಡಿ, ವಾಹನ ಮತ್ತು ಜನ ಸಂಚಾರ ನಿರ್ಬಂಧಿಸಲಾಗುತ್ತಿತ್ತು. 36 ಗಂಟೆ ಎಲ್ಲವೂ ಬಂದ್ ಆಗುತ್ತಿತ್ತು. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುತ್ತಿತ್ತು. ಶಿವಮೊಗ್ಗದಲ್ಲಿ ಒಂದೆರಡು ಸಂಡೆ ಮಾತ್ರ ಪರಿಣಾಮಕಾರಿ ಲಾಕ್ಡೌನ್ ಮಾಡಲಾಗಿತ್ತು.
ಇವತ್ತಿಂದ ಶಿವಮೊಗ್ಗದಲ್ಲಿ ಭಾನುವಾರವು ಎಲ್ಲ ಬಗೆಯ ವ್ಯಾಪಾರ, ವಹಿವಾಟು ನಡೆಸಲು ಅವಕಾಶವಿದೆ. ಜನ ಮತ್ತು ವಾಹನ ಸಂಚಾರಕ್ಕೆ ಯಾವುದೆ ನಿರ್ಬಂಧ ಇರುವುದಿಲ್ಲ. ಯಾವುದೆ ರಸ್ತೆಯಲ್ಲೂ ಬ್ಯಾರಿಕೇಡ್ ಇರುವುದಿಲ್ಲ. ಕಂಟೈನ್ಮೆಂಟ್ ಜೋನ್ ಹೊರತು ಬೇರಾವ ಸ್ಥಳದಲ್ಲೂ ಜನ ಸಂಚಾರಕ್ಕೆ ಅಡೆತಡೆ ಇರುವುದಿಲ್ಲ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]