ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಡಿಸೆಂಬರ್ 2021
ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗ್ಗೆ 10 ಗಂಟೆವರೆಗೆ ಶೇ.30.23ರಷ್ಟು ಮತದಾನವಾಗಿದೆ ಎಂದು ಶಿವಮೊಗ್ಗ ಜಿಲ್ಲಾಡಳಿತ ತಿಳಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
4164 ಮತದಾರರು ಇದ್ದು ಈವರೆಗೂ ಶೇ.30ರಷ್ಟು ಮಂದಿ ಮಾತ್ರ ಹಕ್ಕು ಚಲಾಯಿಸಿದ್ದಾರೆ. ಮಧ್ಯಾಹ್ನದ ವೇಳೆ ಮತದಾನ ಚುರುಕು ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಎಲ್ಲೆಲ್ಲಿ ಎಷ್ಟು ಮತದಾರರಿದ್ದಾರೆ?
ಜಿಲ್ಲೆಯಲ್ಲಿ ಒಟ್ಟು 4164 ಮತದಾರರು ಇದ್ದಾರೆ. ಇವರಲ್ಲಿ 1983 ಪುರುಷ ಹಾಗೂ 2181 ಮಹಿಳಾ ಮತದಾರರು ಇದ್ದಾರೆ. 93 ಅನಕ್ಷರಸ್ಥ ಮತದಾರರು ಜತೆಗಾರರ ನೆರವಿನೊಂದಿಗೆ ಮತ ಚಲಾಯಿಸುವ ಅವಕಾಶ ಪಡೆದಿದ್ದಾರೆ.
ಸೊರಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 14 ಮತದಾರರು, ಶಿಕಾರಿಪುರ ಪಟ್ಟಣ ಪಂಚಾಯತ್ 30, ಹೊನ್ನಾಳಿ ಪುರಸಭೆ 22, ಚೆನ್ನಗಿರಿ ಪಟ್ಟಣ ಪಂಚಾಯತ್ 29, ಭದ್ರಾವತಿ ನಗರ ಸಭೆ 37, ಶಿವಮೊಗ್ಗ ಮಹಾನಗರ ಪಾಲಿಕೆ 45, ಸಾಗರ ನಗರಸಭೆ 37, ಹೊಸನಗರ ಪಟ್ಟಣ ಪಂಚಾಯತ್ 14, ತೀರ್ಥಹಳ್ಳಿ ಪಟ್ಟಣ ಪಂಚಾಯತ್ 16 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಇವರಲ್ಲಿ ಈ ವ್ಯಾಪ್ತಿಯ ಇತರೆ ಜನಪ್ರತಿನಿಧಿಗಳು ಸಹ ಒಳಗೊಂಡಿದ್ದಾರೆ.
ಸೊರಬ ತಾಲೂಕಿನಲ್ಲಿ 304 ಗ್ರಾಮ ಪಂಚಾಯತ್ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಶಿಕಾರಿಪುರ 470, ಹೊನ್ನಾಳಿ 321, ನ್ಯಾಮತಿ 190, ಚನ್ನಗಿರಿ 730, ಭದ್ರಾವತಿ 431, ಶಿವಮೊಗ್ಗ 456, ಸಾಗರ 379, ಹೊಸನಗರ 294, ತೀರ್ಥಹಳ್ಳಿ ತಾಲೂಕಿನಲ್ಲಿ 335 ಗ್ರಾಮ ಪಂಚಾಯತ್ ಸದಸ್ಯರು ಇದ್ದಾರೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 365 ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.