ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 4 MAY 2021
ಗಾಳಿ, ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ ಸಂಭವಿಸಿದೆ. ಹಲವು ಕಡೆ ಮರಗಳು ಬುಡ ಮೇಲಾಗಿದೆ. ರಾತ್ರಿ ಪೂರ್ತಿ ಮಳೆ ಸುರಿಯುವ ಸಂಭವವಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಅಡಕೆ, ತೆಂಗಿನ ಮರಗಳು ಬುಡಮೇಲು
ಗಾಳಿ, ಮಳೆಗೆ ಯಲವಟ್ಟಿಯಲ್ಲಿ ಅಡಕೆ ಮರಗಳು, ತೆಂಗು ಮತ್ತು ಮಾವಿನ ಮರಗಳು ಧರೆಗುರುಳಿವೆ. ಮಂಜುನಾಥ್ ಅವರ ತೋಟದಲ್ಲಿ ಸುಮಾರು 50 ಅಡಕೆ ಮರಗಳು, ನಾಲ್ಕು ತೆಂಗಿನ ಮರ, ಎರಡು ಮಾವಿನ ಮರಗಳು ಧರೆಗುರುಳಿವೆ.
ಟ್ರಾನ್ಸ್ಫಾರ್ಮರ್ ಮೇಲೆ ಫ್ಲೆಕ್ಸ್
ಶ್ರೀನಿಧಿ ಕಾಂಪ್ಲೆಕ್ಸ್ ಮೇಲಿರುವ ಜಾಹೀರಾತಿನ ಫ್ಲೆಕ್ಸ್ ಗಾಳಿಗೆ ಹಾರಿ ಬಂದಿದೆ. ಗೋಪಿ ಸರ್ಕಲ್ನಲ್ಲಿರುವ ಟ್ರಾನ್ಸ್ಫಾರ್ಮರ್ ಮೇಲೆ ಬಿದ್ದಿತ್ತು. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಯಿತು. ಸುರಿವ ಮಳೆ ನಡುವೆ ಮೆಸ್ಕಾಂ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸಿದರು. ಅದರ ವಿಡಿಯೋ ವರದಿ ಇಲ್ಲಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422