ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಆಸ್ತಿಪಾಸ್ತಿ ಹಾನಿ, ಯಾವ್ಯಾವ ತಾಲೂಕಿನಲ್ಲಿ ಏನೇನು ಹಾನಿ ಉಂಟಾಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 12 ಜುಲೈ 2022

ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದೆ. ಭಾರಿ ಮಳೆಗೆ ಒಬ್ಬರು ಸಾವನ್ನಪ್ಪಿದ್ದಾರೆ. ಹಲವು ಕಡೆ ಮನೆ, ಕೊಟ್ಟಿಗೆ, ಬೆಳೆ ಹಾನಿ (RAIN DAMAGE) ಸಂಭವಿಸಿದೆ.

Shimoga Nanjappa Hospital

ಎಲ್ಲೆಲ್ಲಿ ಏನೇನು ಹಾನಿಯಾಗಿದೆ?

ಜಿಲ್ಲೆಯಾದ್ಯಂತ ಜುಲೈ 1 ರಿಂದ ಈವರೆಗೂ 168 ಮನೆಗಳು ಹಾನಿಯಾಗಿದೆ. ಈ ಪೈಕಿ ಕಳೆದ 24 ಗಂಟೆ ಅವಧಿಯಲ್ಲಿ 31 ಮನೆಗಳಿಗೆ ಹಾನಿ ಉಂಟಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 2, ಭದ್ರಾವತಿಯಲ್ಲಿ 37, ತೀರ್ಥಹಳ್ಳಿಯಲ್ಲಿ 13, ಸಾಗರದಲ್ಲಿ 25, ಶಿಕಾರಿಪುರದಲ್ಲಿ 37, ಸೊರಬದಲ್ಲಿ 45, ಹೊಸನಗರದಲ್ಲಿ 9 ಮನೆಗಳಿಗೆ ಹಾನಿ ಉಂಟಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 21 ಮನೆಗಳು ಸಂಪೂರ್ಣ ಹಾನಿಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 10, ಭದ್ರಾವತಿಯಲ್ಲಿ 5, ತೀರ್ಥಹಳ್ಳಿಯಲ್ಲಿ 3, ಶಿಕಾರಿಪುರದಲ್ಲಿ 1, ಹೊಸನಗರದಲ್ಲಿ 2 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ.

ಜಿಲ್ಲೆಯಲ್ಲಿ 21 ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದೆ. ಈ ಪೈಕಿ ಶಿವಮೊಗ್ಗದಲ್ಲಿ 1, ತೀರ್ಥಹಳ್ಳಿಯಲ್ಲಿ 2, ಸಾಗರದಲ್ಲಿ 4, ಶಿಕಾರಿಪುರದಲ್ಲಿ 4, ಸೊರಬದಲ್ಲಿ 2, ಹೊಸನಗರದಲ್ಲಿ 8 ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದೆ.

ಜನ, ಜನಾವರುಗಳಿಗೆ ಪ್ರಾಣಕ್ಕೆ ಕುತ್ತು

ಭಾರಿ ಮಳೆಯಿಂದಾಗಿ ಜನ, ಜಾನುವಾರುಗಳ ಪ್ರಾಣಕ್ಕೂ ಕುತ್ತು ಉಂಟಾಗಿದೆ. ಹೊಸನಗರ ತಾಲೂಕು ಪುರಪ್ಪೆಮನೆ ಗ್ರಾಮ ಪಂಚಾಯಿತಿ ದೊಡ್ಡಬೆಲಗೋಡು ವ್ಯಾಪ್ತಿಯ ಗಣಪತಿ ಎಂಬುವವರು ಮೃತರಾಗಿದ್ದಾರೆ. ಇನ್ನು, ಜಿಲ್ಲೆಯಲ್ಲಿ ಮೂರು ಜಾನುವಾರ ಸಾವನ್ನಪ್ಪಿವೆ. ಈ ಪೈಕಿ ತೀರ್ಥಹಳ್ಳಿಯ 2, ಹೊಸನಗರ ತಾಲೂಕಿನಲ್ಲಿ 1 ಜಾನುವಾರು ಮೃತಪಟ್ಟಿದೆ.

ಭಾರಿ ಮಳೆಗೆ ಬೆಳೆ ಹಾನಿ

ನಿರಂತರ ಮಳೆಗೆ ಎರಡು ತಾಲೂಕುಗಳಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಈತನ 285 ಹೆಕ್ಟೇರ್ ಪ್ರದೇಶದಲ್ಲಿ ಬೆಳ ಹಾನಿ ಸಂಭವಿಸಿದೆ. ಶಿವಮೊಗ್ಗ ತಾಲೂಕಿನ 20 ಹೆಕ್ಟೇರ್ ಮತ್ತು ಸಾಗರ ತಾಲೂಕಿನ 265 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ.

ಇದನ್ನೂ ಓದಿ – ಭದ್ರಾ ಜಲಾಶಯದಿಂದ ಯಾವುದೆ ಸಂದರ್ಭದಲ್ಲಾದರೂ ನೀರು ಹೊರಕ್ಕೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 12, 2022

Leave a Comment