ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಆಗಸ್ಟ್ 2020
ಜಿಲ್ಲೆಯಾದ್ಯಂತ ನಾಲ್ಕು ದಿನದಿಂದ ಭಾರಿ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 582.64 ಮಿ.ಮೀ ಮಳೆಯಾಗಿದೆ ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ವಿಭಾಗ ಬಿಡುಗಡೆಯ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
ಯಾವ್ಯಾವ ತಾಲೂಕಲ್ಲಿ ಎಷ್ಟು ಮಳೆಯಾಗಿದೆ?
ಶಿವಮೊಗ್ಗ 42.60 ಮಿ.ಮೀ, ಭದ್ರಾವತಿ 12 ಮಿ.ಮೀ, ತೀರ್ಥಹಳ್ಳಿ 115.60 ಮಿ.ಮೀ, ಸಾಗರ 118.04, ಶಿಕಾರಿಪುರ 17.80 ಮಿ.ಮೀ, ಸೊರಬ 84 ಮಿ.ಮೀ, ಹೊಸನಗರ 192.60 ಮಿ.ಮೀ ಮಳೆಯಾಗಿದೆ.
ಹೊಸನಗರದಲ್ಲಿ ವಾಡಿಗಿಂತಲೂ ಹೆಚ್ಚು ಮಳೆ
ಹೊಸನಗರ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಹೊಸನಗರದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ, ಹಲವು ಕಡೆ ಮರ ಧರೆಗುರುಳಿದ ವರದಿಯಾಗಿದೆ. ಧರೆ ಕುಸಿದಿದೆ. ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಆಗಸ್ಟ್ ತಿಂಗಳ ವಾಡಿಕೆ ಮಳೆ 609.30 ಮಿ.ಮೀ. ಈ ಬಾರಿ ಐದು ದಿನದಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಹೊಸನಗರದಲ್ಲಿ ಈ ವರ್ಷದ ಆಗಸ್ಟ್ ತಿಂಗಳಲ್ಲಿ 675 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 753 ಮಿ.ಮೀ ಮಳೆಯಾಗಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]