ಶಿವಮೊಗ್ಗ ಲೈವ್.ಕಾಂ | SHIMOGA | 19 ಫೆಬ್ರವರಿ 2020
ತೀರ್ಥಹಳ್ಳಿ ರಾಜಕೀಯದ ಪ್ರಮುಖ ಎದುರಾಳಿಗಳಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಶಿವಮೊಗ್ಗ ನ್ಯಾಯಾಲಯದಲ್ಲಿ ಮಂಗಳವಾರ ಪರಸ್ಪರ ಎದುರಾಳಿಗಳಾಗಿ ಸ್ವಾರಸ್ಯ ಮೂಡಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
2018ನೇ ಫೆಬ್ರವರಿಯಲ್ಲಿ ಆರ್.ಎಂ.ಮಂಜುನಾಥಗೌಡ ಅವರು ಕಿಮ್ಮನೆ ರತ್ನಾಕರ್ ಅವರ ವಿರುದ್ಧ ದಾಖಲಿಸಿದ್ದ 1 ರೂ. ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆಯಲ್ಲಿ ಅವರಿಬ್ಬರು ಎದುರಾಳಿಗಳಾಗಿದ್ದರು.
ಒಂದೂವರೆ ಗಂಟೆ ಪಾಟಿ ಸವಾಲು
ತಮ್ಮ ವಿರುದ್ಧದ ಪ್ರಕರಣದಲ್ಲಿ ಖುದ್ದು ವಾದಕ್ಕೆ ನಿಂತ ಕಿಮ್ಮನೆ ರತ್ನಾಕರ್ ಅವರು ಮಂಜುನಾಥಗೌಡರನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ಪಾಟಿ ಸವಾಲಿಗೆ ಒಳಪಡಿಸಿದರು. ಈ ಸಮಯದಲ್ಲಿ ಇಬ್ಬರ ನಡುವಿನ ವಾದಗಳು ಕುತೂಹಲದಿಂದ ಕೂಡಿತ್ತು.
ವಿಧಾನಸಭೆ ಚುನಾವಣೆ ಸಂದರ್ಭ ಕಿಮ್ಮನೆ ಅವರು ತಮ್ಮ ಎದುರಾಳಿಯಾದ ಮಂಜುನಾಥಗೌಡರ ವಿರುದ್ದ ಸಾರ್ವಜನಿಕ ವಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದ ಬಹು ಕೋಟಿ ನಕಲಿ ಚಿನ್ನಾಭರಣ ಹಗರಣದ ಅಸ್ತ್ರ ಪ್ರಯೋಗಿಸುತ್ತಿದ್ದರು. ಇದರ ವಿರುದ್ದ ಗೌಡರು ನ್ಯಾಯಾಲಯದಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಹಲವು ಬಾರಿ ಮುಂದೆ ಹೋಗಿದ್ದ ಪ್ರಕರಣವು ಮಂಗಳವಾರ ಮಧ್ಯಾಹ್ನ ವಿಚಾರಣೆಗೆ ಬಂದಿತ್ತು.
ಇನ್ಯಾವ ಪಕ್ಷ ಸೇರಲು ಬಯಸಿದ್ದೀರಿ?
ಕಿಮ್ಮನೆ ಆವರ ಪಾಟಿ ಸವಾಲಿಗೆ ಗೌಡರ ಉತ್ತರ, ಅದಕ್ಕೆ ಮರು ಪ್ರಶ್ನೆ, ಪ್ರತ್ಯುತ್ತರಗಳಿಂದಾಗಿ ನ್ಯಾಯಾಂಗಣವು ಒಂದೂವರೆ ತಾಸು ಸಂಪೂರ್ಣ ಸ್ತಬ್ದವಾಗಿತ್ತು. ಕಿಮ್ಮನೆ ಅವರು ಗೌಡರಿಗೆ ಹಲವು ಮೊನಚಾದ ಪ್ರಶ್ನೆಗಳ ಆಸ್ತಗಳನ್ನು ಪ್ರಯೋಗಿಸಿದರೆ, ಗೌಡರು ಪ್ರತ್ಯಸದ ಉತ್ತರವನ್ನು ಬಿಟ್ಟರು. ಈ ಅವಧಿಯಲ್ಲಿ ಬಿಜೆಪಿ, ಕೆಜೆಪಿ, ಕಾಂಗ್ರೆಸ್‌ಗೆ ಹೋಗಿಬಂದ ನೀವು ಮುಂದೆ ಯಾವ ಪಕ್ಷಕ್ಕೆ ಹೋಗುತ್ತೀರಾ? ಎಂದು ಕಿಮ್ಮನೆ ಪ್ರಶ್ನಿಸಿದರೆ, ಹಲವು ಪಕ್ಷಗಳಲ್ಲಿ ಇದ್ದು ಬಂದಿರುವ ನೀವೇ ಹೇಳಿ, ಯಾವ ಪಕ್ಷಕ್ಕೆ ಹೋಗ ಬೇಕೆಂದು ಗೌಡರು ಮರು ಪ್ರಶ್ನೆ ಹಾಕಿದರು. ಕಿಮ್ಮನೆ ಪ್ರಶ್ನೆಗಳಿಗೆ ಗೌಡರ ಪರ ವಕೀಲ ವಿನಯ್ ಅವರು ತಡೆಯೊಡ್ಡುವ ಪ್ರಯತ್ನ ನಡೆಸಿದರು. ಕಿಮ್ಮನೆ ಅವರು ಪಾಟಿ ಸವಾಲಿಗೆ ಇನ್ನೂ ಅವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಪೂಜಾ ಅವರು ಮಾರ್ಚ್17ಕ್ಕೆ ಮುಂದೂಡಿದರು.
ಕಿಮ್ಮನೆ ಅವರಿಂದ ಪಾಟಿ ಸವಾಲು ರಾಜಕೀಯ ಚಟುವಟಿಕೆಯ ಬಿಡುವಿನಲ್ಲಿ ನ್ಯಾಯಾಲಯಕ್ಕೆ ಬರುತ್ತಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ತಮ್ಮದೇ ಪ್ರಕರಣದಲ್ಲಿ ಸ್ವತಃ ವಾದಕ್ಕೆ ಇಳಿದಿದ್ದಾರೆ. ಸಾಮಾನ್ಯವಾಗಿ ಕೆಲ ವಕೀಲರು ತಮ್ಮ ವಿರುದ್ದ ಪ್ರಕರಣಗಳು ದಾಖಲಾದಾಗ ಹತ್ತಿರದ ಅಥವಾ ಆ ಪ್ರಕರಣದಲ್ಲಿ ಸಮರ್ಥರೆನಿಸಿದ ವಕೀಲರನ್ನು ನೇಮಿಸಿಕೊಳ್ಳುತ್ತಾರೆ. ಬಹಳ ಕಡಿಮೆ ವಕೀಲರು ಸ್ವತಃ ವಾದಕ್ಕೆ ಇಳಿಯುತ್ತಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]