ಶಿವಮೊಗ್ಗ ಲೈವ್.ಕಾಂ | SHIMOGA NEWS | 4 JUNE 2021
ಮಹತ್ವದ ಗುರಿಯೊಂದಿಗೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಕರ್ನಾಟಕದ ಉದ್ದಗಲಕ್ಕೆ ಪಾದಯಾತ್ರೆ ನಡೆಸುತ್ತಿದ್ದಾರೆ. ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಇವರು, ಇಲ್ಲಿಯು ಹಲವರೊಂದಿಗೆ ಸಂವಾದ ನಡೆಸಿದರು.
![]() |
ಬೆಂಗಳೂರು ಮೂಲದ ವಿವೇಕಾನಂದ ಅವರು ಬೀದರ್ ಜಿಲೆಯ ಔರಾದ್ ತಾಲುಕಿನಿಂದ ದಕ್ಷಿದ ಚಾಮರಾಜನಗರದವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಸುಮಾರು 400 ದಿನಗಳ ಪಾದಯಾತ್ರೆಯಲ್ಲಿ ಈಗಾಗಲೇ ಅರ್ಧದಷ್ಟು ಕ್ರಮಿಸಿದ್ದಾರೆ. ಲಾಕ್ ಡೌನ್ ನಡುವೆಯು ಒಂದೆ ಒಂದು ರುಪಾಯಿ ಖರ್ಚು ಮಾಡದೆ. ಯಾರಿಂದಲೂ ಒಂದು ರುಪಾಯಿಯನ್ನು ಪಡೆಯದೆ ಸಂಚರಿಸುತ್ತಿದ್ದಾರೆ.
ಶಿವಮೊಗ್ಗಕ್ಕೂ ಬಂದಿದ್ದರು
ವಿವೇಕಾನಂದ ಅವರು ಶಿವಮೊಗ್ಗ ಜಿಲ್ಲೆಗೂ ಭೇಟಿ ನೀಡಿದ್ದರು. ಇಲ್ಲಿ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಸಮಾನ ಮನಸ್ಕರೊಂದಿಗೆ ಚರ್ಚೆ, ಸಂವಾದ ನಡೆಸಿದ್ದಾರೆ. ಶಿವಮೊಗ್ಗ ನಗರಕ್ಕೆ ಬಂದಿದ್ದ ಇವರು ಇಲ್ಲಿಯೂ ಸಂವಾದ ನಡೆಸಿದರು. ಬಳಿಕ ಭದ್ರಾವತಿ ಮೂಲಕ ಚಿಕ್ಕಮಗಳೂರು ಕಡೆಗೆ ತೆರಳಿದರು.
ಯಾಕಾಗಿ ಈ ಪಾದಯಾತ್ರೆ?
ವಿವೇಕಾನಂದ ಅವರು ಮಾನವೀಯ ಮೌಲ್ಯಗಳ ಪುನರುತ್ಥಾನದ ಯೋಚನೆಯೊಂದಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮನವೀಯ ಮೌಲ್ಯಗಳು ಕುಂಟಿತವಾಗಿದೆ. ಇದರ ಪುನರುತ್ಥಾನವಾದರೆ ಸಮಾಜ ಸುಭಿಕ್ಷವಾಗಿರುತ್ತದೆ ಎಂಬುದು ವಿವೇಕಾನಂದ ಅವರ ಅಭಿಪ್ರಾಯ. ಇದೆ ವಿಚಾರವಾಗಿ ಹಲವರ ಜೊತೆಗೆ ಅವರು ಚರ್ಚೆಯನ್ನೂ ನಡೆಸುತ್ತಿದ್ದಾರೆ.
ವಿವೇಕಾನಂದ ಅವರು 280 ತಾಲೂಕುಗಳಲ್ಲಿ ಪಾದಯಾತ್ರೆ ಮಾಡುವ ಗುರಿ ಹೊಂದಿದ್ದಾರೆ. ಪ್ರತಿ ತಾಲೂಕಿನಲ್ಲೂ ಹಲವರನ್ನು ಭೇಟಿಯಾಗಿ, ಅವರು ಮಾಡುವ ವ್ಯವಸ್ಥೆಯಲ್ಲಿ ಉಳಿದುಕೊಂಡು, ಸಹೃದಯರ ಕೊಡುವ ಆಹಾರ ಸೇವಿಸಿ ತೆರಳುತ್ತಾರೆ. ಇವರ ಗುರಿ ಈಡೇರಲಿ, ಆದರ್ಶಗಳು ಇತರರಿಗೆ ಮಾದರಿಯಾಗಲಿ ಎಂದು ಅವರ ಸಹವರ್ತಿಗಳು ಹಾರೈಸಿದ್ದಾರೆ.
ಇನ್ಮುಂದೆ ಕರೋನ ಪರೀಕ್ಷೆಗೆ ಆಸ್ಪತ್ರೆಗೆ ಹೋಗೋದೆ ಬೇಡ. ನಿಮ್ಮ ಮನೆಗೆ ಬಂದು ಸ್ವ್ಯಾಬ್ ಪಡೆಯಲಾಗುತ್ತದೆ. ಇಲ್ಲಿರುವ ನಂಬರ್ಗೆ ಕರೆ ಮಾಡಿ, ಮಾಹಿತಿ ಪಡೆಯಿರಿ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200