ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 JANUARY 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಶ್ರೀ ದುರ್ಗ ಸಪ್ತಶತಿ ಋಷಿಪ್ರಜ್ಞಾ ಆಂದೋಲನದ ವತಿಯಿಂದ ಶಿವಮೊಗ್ಗ ನಗರದಲ್ಲಿ 4500 ಸಾವಿರಕ್ಕೂ ಹೆಚ್ಚು ಸೆಟ್ ದೋಸೆ ವಿತರಿಸಲಾಯಿತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಎಳ್ಳಮಾವಾಸ್ಯೆ ಜಾತ್ರೆ, ತೀರ್ಥಹಳ್ಳಿಯಲ್ಲಿ ಸಂಗ್ರಹವಾಗಲಿದೆ ಹೊರೆ ಕಾಣಿಕೆ, ನಾಲ್ಕು ವಾಹನಗಳಿಗೆ ಸಿಕ್ತು ಚಾಲನೆ
ಶ್ರೀ ಗುರುನಾಥ ವರ್ಧಂತಿ ಮಹೋತ್ಸವದ ಅಂಗವಾಗಿ ಭಕ್ತರು 4500 ಸೆಟ್ ದೋಸೆ ವಿತರಣೆ ಮಾಡಿದರು. ನಗರದ ಮೆಗ್ಗಾನ್ ಆಸ್ಪತ್ರೆ, ಎಪಿಎಂಸಿ, ವಿವಿಧ ವೃದ್ಧಾಶ್ರಮ, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಎಂಆರ್‌ಎಸ್ ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್, ಹೊಳೆ ಬಸ್ ನಿಲ್ದಾಣದಲ್ಲಿ ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಮತ್ತು ವಿವಿಧ ಶಾಲೆಗಳಿಗೆ ದೋಸೆಗಳನ್ನು ವಿತರಿಸಲಾಯಿತು.
60 ರಿಂದ 70 ಭಕ್ತರಿಂದ ತಯ್ಯಾರಿ
ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಗುರುನಾಥರ ವರ್ಧಂತಿ ಅಂಗವಾಗಿ ಭಕ್ತರು ದೋಸೆ ಹಂಚಿದರು. ಇದಕ್ಕಾಗಿ ಗುರು ಭಿಕ್ಷೆ ಬೇಡಿ ಅಕ್ಕಿ ಮತ್ತು ಇತರೆ ದವಸ ಸಂಗ್ರಹಿಸಿದ್ದರು. ಸುಮಾರು 70 ಭಕ್ತರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ದೋಸೆ ಸಿದ್ಧಪಡಿಸಿ, ಅವುಗಳನ್ನು ಪ್ಯಾಕ್ ಮಾಡಿ ವಿತರಣೆ ವಿತರಣೆ ಮಾಡಿದರು.
ವರ್ಧಂತಿ ಅಂಗವಾಗಿ ಶಿವಮೊಗ್ಗದ ಗಾಂಧಿ ಬಜಾರ್ ತುಳಜಾ ಭವಾನಿ ದೇವಸ್ಥಾನದಲ್ಲಿ ಮಂಗಳವಾರ ಶ್ರೀ ಗುರುನಾಥರಿಗೆ ಆರತಿ, ದೀಪಪೂಜೆ, ಪುಷ್ಪಾರ್ಚನೆ ನೆರವೇರಿಸಲಾಯಿತು. ಇನ್ನು, ಕಳೆದ ರಾತ್ರಿ ನಗರದ ವಿವಿಧೆಡೆ ರಸ್ತೆ ಬದಿ ಮಲಗುವವರಿಗೆ ಬೆಡ್ ಶೀಟ್ ವಿತರಣೆ ಕಾರ್ಯ ನಡೆಯಿತು.