SHIVAMOGGA LIVE NEWS | 2 NOVEMBER 2022
SHIMOGA | ಪೊಲೀಸ್ ಇಲಾಖೆ ವತಿಯಿಂದ ನಗರದ ಆಟೋ ಚಾಲಕರ ಸಭೆ ನಡೆಸಿ, ಕುಂದು ಕೊರತೆ ಆಲಿಸಲಾಯಿತು. ಆ ಬಳಿಕ ಆಟೋ ಚಾಲಕರಿಗೆ ಎಂಟು ಸೂಚನೆ (8 instructions) ನೀಡಲಾಯಿತು.
ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 8 ಸೂಚನೆ ನೀಡಲಾಗಿದೆ. ಹೆಚ್ಚುವರಿ ರಕ್ಷಣಾಧಿಕಾರಿ, ಡಿವೈಎಸ್ ಪಿ, ಸಾರಿಗೆ ಇಲಾಖೆ ಅಧಿಕಾರಿಗಳು, ಸಂಚಾರಿ ಠಾಣೆ ಸೇರಿದಂತೆ ನಗರದ ವಿವಿಧ ಠಾಣೆಯ ಇನ್ಸ್ ಪೆಕ್ಟರ್ ಗಳು, ಸಿಬ್ಬಂದಿ ಸಭೆಯಲ್ಲಿದ್ದರು.
(8 instructions)
ಆಟೋ ಚಾಲಕರಿಗೆ 8 ಸೂಚನೆಗಳೇನು?
ಸೂಚನೆ 1 – ಕನಿಷ್ಠ ದರ ನಿಗದಿಪಡಿಸಿದ ಬಳಿಕ ಎಲ್ಲಾ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಬೇಕು.
ಸೂಚನೆ 2 – ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸಬೇಕು.
ಸೂಚನೆ 3 – ಆಟೋ ಚಾಲನೆ ವೇಳೆ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು.
ಸೂಚನೆ 4 – ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ಆಟೋಗಳಲ್ಲಿ ಚಾಲಕರ ಮಾಹಿತಿ ಮತ್ತು ಕ್ಯೂ ಆರ್ ಕೋಡ್ ಹೊಂದಿರುವ ಡಿಸ್ ಪ್ಲೇ ಕಾರ್ಡ್ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಡಿಸ್ ಪ್ಲೇ ಕಾರ್ಡ್ ಅನ್ನು ಎಲ್ಲಾ ಆಟೋ ಗಳಲ್ಲಿ ಅಳವಡಿಸಿಕೊಳ್ಳುವುದು ಕಡ್ಡಾಯ.
ಸೂಚನೆ 5 – ಆಟೋ ಚಾಲಕರು ನೀಡುವ ದಾಖಲಾತಿ ಪರಿಶೀಲಿಸಿ ಪ್ರತೀ ಆಟೋಗೆ SMG ನಂಬರ್ ನೀಡಲಾಗುವುದು. ನಂತರ SMG ನಂಬರ್ ಇರುವ ಸ್ಟಿಕ್ಕರ್ ಗಳನ್ನು ಪ್ರತೀ ಆಟೋ ಚಾಲಕರು ತಮ್ಮ ತಮ್ಮ ಆಟೋ ಗಳಲ್ಲಿ, ಕಾಣುವ ರೀತಿಯಲ್ಲಿ ಅಂಟಿಸಿಕೊಳ್ಳಬೇಕು.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ನಿರ್ಧಾರ, ಮೀಟರ್ ಬಳಕೆ ಕಡ್ಡಾಯಕ್ಕೆ ಗಡುವು ಫಿಕ್ಸ್
ಸೂಚನೆ 6 – KSRTC ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ ಬಳಿ ಸಾರ್ವಜನಿಕರಿಂದ ಆಟೋ ಚಾಲಕರ ಮೇಲೆ ದೂರುಗಳು ಬರುತ್ತಿವೆ. ಇದೇ ರೀತಿ ದೂರುಗಳು ಪುನರಾವರ್ತಿತವಾದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ.
ಸೂಚನೆ 7 – ಆಟೋ ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮ ಪಾಲನೆ ಮಾಡಬೇಕು.
ಸೂಚನೆ 8 – ಆಟೋಗಳನ್ನು ಆಟೋ ನಿಲ್ದಾಣ ವಲ್ಲದೇ ಬೇರೆ ಸ್ಥಳಗಳಲ್ಲಿ ನಿಲುಗಡೆ ಮಾಡುವಂತಿಲ್ಲ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವಲಾಗುತ್ತದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಸರ್ಕಾರಿ ವಾಹನದಲ್ಲಿ ನಕಲಿ ಅಧಿಕಾರಿ, ಕಂಡ ಕಂಡ ಅಂಗಡಿ ಮೇಲೆ ನಡೆಸಿದನಾ ದಾಳಿ?
ADVERTISEMENT (8 instructions)
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.