ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಜನವರಿ 2022
ಬಡವ ರಾಸ್ಕಲ್ ಸಿನಿಮಾದ ಪ್ರಮೋಷನ್’ಗಾಗಿ ನಟ ಡಾಲಿ ಧನಂಜಯ ಇವತ್ತು ಶಿವಮೊಗ್ಗಕ್ಕೆ ಆಗಮಿಸಿದ್ದರು. ಈ ವೇಳೆ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ನಡುವೆ ನೂಕು ನುಗ್ಗಲು ಉಂಟಾಯಿತು.
ಲಕ್ಷ್ಮೀ ಚಿತ್ರಮಂದಿರದಲ್ಲಿ ಬಡವ ರಾಸ್ಕಲ್ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಇವತ್ತು ಸಂಜೆ ಚಿತ್ರಮಂದಿರಕ್ಕೆ ನಟ ಡಾಲಿ ಧನಂಜಯ ಭೇಟಿ ನೀಡಿ, ಸಿನಿಮಾದ ಪ್ರಮೋಷನ್ ನಡೆಸಿದರು.
ನಟ ಧನಂಜಯ ಭೇಟಿ ವಿಚಾರ ತಿಳಿದು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಧನಂಜಯ ಬರುತ್ತಿದ್ದಂತೆ ಅಭಿಮಾನಿಗಳು ಘೋಷಣೆ ಕೂಗಿ, ಹೂವು ಹಾಕಿ ಸ್ವಾಗತಿಸಿದರು. ಚಿತ್ರಮಂದಿರದೊಳಗೆ ಧನಂಜಯ ಅವರು ಪ್ರವೇಶಿಸುವ ಸಂದರ್ಭ ನೂಕುನುಗ್ಗಲು ಉಂಟಾಯಿತು.
ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಚಿತ್ರಮಂದಿರದ ಒಳಗೆ ಅಭಿಮಾನಿಗಳು ನಟ ಧನಂಜಯ ಅವರೊಂದಿಗೆ ಫೋಟೊ, ಸೆಲ್ಫಿಗೆ ಮುಗಿಬಿದ್ದರು.